ದೆಹಲಿ: ಜೆಎನ್ ಯು ವಿವಿಯಲ್ಲಿ ನಡೆದ ಘಟನೆಯ ಬಗ್ಗೆ ಡಿಸಿಪಿ ತಯಾರಿಸಿರುವ ಘಟನಾ ವರದಿ ವಿದ್ಯಾರ್ಥಿಗಳು ಭಾರತ ವಿರೋಧಿ ಹಾಗೂ ಪ್ರಚೋದಕ ಘೋಷಣೆಗಳನ್ನು ಕೂಗಿದ್ದಾರೆ. ಆದರೆ ‘ಪಾಕಿಸ್ತಾನ ಜಿಂದಾಬಾದ್’ ಎಂದು ಕೂಗಿದ ಪ್ರಸ್ತಾಪವಿಲ್ಲ ಎಂದು ಆಪಾದಿಸಿದೆ.
ಸುದ್ದಿ ವಾಹಿನಿಯೊಂದರ ಸುದ್ದಿಯ ವಿಡಿಯೋ ಆಧರಿಸಿ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ರಾಷ್ಟ್ರದ್ರೋಹ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ. ಸುದ್ದಿ ವಾಹಿನಿಯ ವಿಡಿಯೋದಲ್ಲಿ ವಿದ್ಯಾರ್ಥಿಗಳು ಇತರ ಘೋಷಣೆಗಳ ಜೊತೆಗೆ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ದೃಶ್ಯವಿದ್ದುದನ್ನು ಅನುಸರಿಸಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಆದರೆ ಈಗ ಪೊಲೀಸರು ದೆಹಲಿ ಪೊಲೀಸ್ ಕಮೀಷನರ್ ಬಿ.ಎಸ್. ಬಸ್ಸಿ ಅವರಿಗೆ ಸಲ್ಲಿಸಿರುವ ವರದಿಯು ಸುದ್ದಿವಾಹಿನಿಯ ವಿಡಿಯೋ ದೃಶ್ಯಕ್ಕೆ ಹೋಲಿಕೆಯಾಗುತ್ತಿಲ್ಲ ಆದ್ದರಿಂದ ರಾಷ್ಟ್ರದ್ರೋಹ ಪ್ರಕರಣ ಬಿದ್ದು ಹೋಗಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.