
ಮಂಗಳೂರು, ಫೆ. 23: ಜಿಪಂ ಮತ್ತು ತಾಪಂಗಳಿಗೆ ಶನಿವಾರ ನಡೆದ ಚುನಾವಣೆಯ ಮತ ಏಣಿಕೆ ಕಾರ್ಯ ಇಂದು ಮುಂಜಾನೆಯಿಂದ ಬಿರುಸಿನಿಂದ ಆರಂಭಗೊಂಡಿದ್ದು, ಜಿಪಂನ 36 ಕ್ಷೇತ್ರಗಳಿಗೆ ಅಂತಿಮವಾಗಿ ಕಣದಲ್ಲಿದ್ದ 116 ಅಭ್ಯರ್ಥಿಗಳು ಹಾಗೂ ತಾಪಂನ 136 ಕ್ಷೇತ್ರಗಳ 361 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ದ.ಕ. ಜಿಪಂ ಮತ್ತು ತಾಪಂ ಚುನಾವಣೆಯ ಮತದಾರರ ಪಟ್ಟಿಯಲ್ಲಿದ್ದ 10,06,212 ಮತದಾರರ ಪೈಕಿ 7,34,575 ಮತದಾರರರು ಮತ ಚಲಾಯಿಸಿದ್ದು, ಶೇ.69.16 ಮತದಾನವಾಗಿದೆ. ಜಿಲ್ಲೆಯಲ್ಲಿ 422 ಸೂಕ್ಷ್ಮ, 221 ಅತಿ ಸೂಕ್ಷ್ಮ ಮತಗಟ್ಟೆಗಳು ಸೇರಿದಂತೆ 1,166 ಮತಗಟ್ಟೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು.

ಜಿಲ್ಲೆಯ 61 ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಎಎನ್ಎಫ್ ಸಿಬ್ಬಂದಿ ನಿಯೋಜನೆಯೊಂದಿಗೆ ಮುಕ್ತ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದ.ಕ. ಜಿಲ್ಲೆಯಲ್ಲಿ ಜಿಪಂ ಕ್ಷೇತ್ರವಾರು ಚಲಾವಣೆಯಾದ ಮತಗಳ ವಿವರ ಹೀಗಿವೆ. ಮಂಗಳೂರು ತಾಲೂಕಿನ ಕಿನ್ನಿಗೋಳಿ- 21,791(ಶೇ.65.13), ಪುತ್ತಿಗೆ-17,849(ಶೇ.64.40), ಶಿರ್ತಾಡಿ- 18,919( ಶೇ. 66.86), ಕಟೀಲು-21,105(ಶೇ.67.93), ಬಜಪೆ- 16,883 (ಶೇ. 62.89), ಎಡಪದವು 18,405(ಶೇ. 67.66), ಗುರುಪುರ-24,649 (ಶೇ.71.33), ನೀರುಮಾರ್ಗ-23,276(ಶೇ.68.36), ಕೊಣಾಜೆ-18,871(ಶೇ. 60.57), ಸೋಮೇಶ್ವರ-21,921(ಶೇ. 60.23).
ಬಂಟ್ವಾಳ ತಾಲೂಕಿನ ಸಂಗ ಬೆಟ್ಟು-24,423 (ಶೇ.73.79), ಸರ ಪಾಡಿ-21,599 (ಶೇ.73.64), ಪುದು-18,387(ಶೇ.71.43), ಗೋಳ್ತ ಮಜಲು-21,757 (ಶೇ.69.77), ಮಾಣಿ- 19,716 (ಶೇ.72.27), ಕೊಳ್ನಾಡು-21,650 (ಶೇ.72.66), ಕುರ್ನಾಡು-18,640(ಶೇ. 72.64), ಸಜಿಪ ಮುನ್ನೂರು-25,213(ಶೇ.71.44), ಪುಣಚ-20,306(ಶೇ.67.7).
ಬೆಳ್ತಂಗಡಿ ತಾಲೂಕಿನ ನಾರಾವಿ- 23,158 (ಶೇ.70.75), ಆಳದಂಗಡಿ-16,794 (ಶೇ. 69.05), ಲಾಯಿಲಾ-15,526(ಶೇ.63.81), ಉಜಿರೆ-19,823(ಶೇ.61.32), ಧರ್ಮಸ್ಥಳ- 19,403 (ಶೇ. 63.89), ಕಣಿಯೂರು-20,198(ಶೇ. 70.21), ಕುವೆಟ್ಟು-20,667 (ಶೇ.68.18).
ಪುತ್ತೂರು ತಾಲೂಕಿನ ಉಪ್ಪಿ ನಂಗಡಿ-23,791 ( ಶೇ.69.75), ನೆಲ್ಯಾಡಿ-18, 061 (ಶೇ.70.38), ಕಡಬ- 22,559(ಶೇ.73.37), ಬೆಳಂ ದೂರು-16,863(ಶೇ.72.28), ಪಾಣಾಜೆ- 27,063 (ಶೇ.72.58), ನೆಟ್ಟಣಿಗೆ ಮುಡ್ನೂರು-21,985 (ಶೇ.70.44).
ಸುಳ್ಯ ತಾಲೂಕಿನ ಬೆಳ್ಳಾರೆ-19,787 (ಶೇ.73.98), ಗುತ್ತಿಗಾರು-17,891 (ಶೇ.76.71), ಜಾಲ್ಸೂರು-18, 719 (ಶೇ.74.11), ಅರಂತೋಡು- 16,927(ಶೇ.72.85).

ಜಿಲ್ಲೆಯ 10,06,212 ಮತದಾರರಲ್ಲಿ 7,34,575 ಮತದಾರರು ಮತ ಚಲಾಯಿಸಿದ್ದಾರೆ. ಇದರಲ್ಲಿ 3,62,254 ಪುರುಷ ಮತ್ತು 3,72,321 ಮಹಿಳಾ ಮತದಾರರು ಮತ ಚಲಾಯಿಸುವುದರೊಂದಿಗೆ ಜಿಲ್ಲೆಯಲ್ಲಿ ಶೇ. 69.16 ಮತದಾನವಾಗಿದೆ. ಶೇ.69ರಷ್ಟು ಮಹಿಳೆಯರು ಮತ್ತು ಶೇ.68ರಷ್ಟು ಪುರುಷರು ಮತ ಚಲಾಯಿಸಿದ್ದಾರೆ.
ಜಿಲ್ಲೆಯಾದ್ಯಂತ ಚುನಾವಣಾ ಕರ್ತವ್ಯಕ್ಕೆ 6,500 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾವೂದೇ ಅಹಿತಕರ ಘಟನೆಗಳು ನಡೆಯದಂತೆ ಮತ ಏಣಿಕೆ ನಡೆಯುವ ಸ್ಥಳಗಳ ಸುತ್ತಮುತ್ತ ಬಿಗಿ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿದೆ.