ಬೇಲೂರು: ಹಿರಿಯ ನಟ ಲೋಕ್‌ನಾಥ್ ಪ್ರಯಾಣಿಸುತ್ತಿದ್ದ ಇನೋವಾ ಕಾರು ಹಾಗೂ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದ ಘಟನೆ ವರದಿಯಾಗಿದೆ. ಇನ್ನು ಅಪಘಾತದಿಂದ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೇಲೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊರನಾಡಿನಿಂದ ಪೂಜೆ ಮುಗಿಸಿ ಶೂಟಿಂಗಿಗೆಂದು ಬೆಂಗಳೂರಿಗೆ ತೆರಳುತಿದ್ದ ಚಲನಚಿತ್ರ ಹಿರಿಯ ನಟ ಲೋಕ್‌ನಾಥ್ ಕಾರು ಬೇಲೂರು ತಾಲೂಕಿನ ಚೀಕನಹಳ್ಳಿ ಸಮೀಪದ ತಿರುವಿನಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಕೆಳಗೆ ಬಿದ್ದಿದ್ದಾನೆ. ಇಷ್ಟಾದರೂ ನಟ ಲೋಕ್‌ನಾಥ್ ಕಾರು ನಿಲ್ಲಿಸದ ಪರಿಣಾಮ ಬೈಕ್ ಸವಾರ ಕೂಡಲೇ ಕರೆ ಮಾಡಿ ಸ್ನೇಹಿತರಿಗೆ ವಿಷಯ ತಿಳಿಸಿದ್ದಾನೆ.
ಇನ್ನು ಬೇಲೂರು ಕಡೆಗಿನ ಕೊಗೋಡು ಸಮೀಪ ಬರುತಿದ್ದ ಲೋಕನಾಥ್ ಕಾರನ್ನು ಅಡ್ಡಗಟ್ಟಿದ ಬೈಕ್ ಸವಾರನ ಸ್ನೇಹಿತರು ಲೋಕ್‌ನಾಥ್‌ರನ್ನು ತರಾಟೆ ತೆಗೆದುಕೊಂಡಿದ್ದಾರೆ.
ಸದ್ಯ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದೆ. ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.