ಮಥುರಾ :ಸಹಿಷ್ಣುತೆ ಹಿಂದೂಗಳಲ್ಲಿ ರಕ್ತಗತವಾಗಿದೆ. ಅಷ್ಟೇ ಅಲ್ಲ, ಹಿಂದೂಗಳು ಯಾವತ್ತೂ ಇನ್ನೊಂದು ಧರ್ಮವನ್ನು ತುಳಿಯಲು ಯತ್ನಿಸಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ವೃಂದಾವನದಲ್ಲಿನ ವಾತ್ಸಲ್ಯ ಗ್ರಾಮ ಕೇಂದ್ರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ಕೆಲವರು ಹಿಂದೂ ಧರ್ಮದಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಸಹಿಷ್ಣುತೆ ಮತ್ತು ಸಹಕಾರ ಎರಡೂ ಸಮಾಜದಲ್ಲಿ ಎರಡು ವಿಭಾಗಗಳಾಗಿದ್ದರೂ ಅವರೆಡೂ ನಮ್ಮ ರಕ್ತದಲ್ಲಿದೆ ಎಂದಿದ್ದಾರೆ.
ತೀವ್ರವಾದಿಗಳನ್ನು ತರಾಟೆಗೆ ತೆಗೆದುಕೊಂಡ ಗಡ್ಕರಿ, ಮೂಲಭೂತವಾದಿಗಳು ಮತ್ತು ಭಯೋತ್ಪಾದಕರು ಬದುಕು ಮತ್ತು ಬದುಕಲು ಬಿಡು ಎಂದು ಸಾರುವ ನಮ್ಮ ಮೂಲ ಸಂಸ್ಕೃತಿಯನ್ನೇ ನಾಶ ಮಾಡಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.