ರಾಷ್ಟ್ರೀಯ

ತಾಜ್ ಮಹಲ್, ಸಂಸತ್ ಭವನ, ರಾಷ್ಟ್ರಪತಿ ಭವನಗಳನ್ನು ನೆಲಸಮಗೊಳಿಸಬೇಕು: ಆಜಂ ಖಾನ್

Pinterest LinkedIn Tumblr

Azam-Khanರಾಮ್ ಪುರ: ಸಮಾಜವಾದಿ ಪಕ್ಷದ ಹಿರಿಯ ನಾಯಕ, ಸಚಿವ ಆಜಂ ಖಾನ್ ರಾಷ್ಟ್ರಪತಿ ಭವನ, ಸಂಸತ್ ಭವನ, ತಾಜ್ ಮಹಲ್ ನ್ನು ನೆಲಸಮಗೊಳಿಸಬೇಕೆಂದು ಹೇಳಿದ್ದಾರೆ.

ರಾಷ್ಟ್ರಪತಿ ಭವನ, ಸಂಸತ್ ಭವನ, ತಾಜ್ ಮಹಲ್ ಗುಲಾಮಗಿರಿಯ ಸಂಕೇತವಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ನೆಲಸಮಗೊಳಿಸಬೇಕು ಎಂದು ಆಜಂ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ರಾಜಾ ಪದವಿ ಕಾಲೇಜ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆಜಂ ಖಾನ್, ತಾಜ್ ಮಹಲ್ ನ್ನು ಸಾರ್ವಜನಿಕ ಹಣದ ದುಂದು ವೆಚ್ಚ ಎಂದಿದ್ದಾರೆ. ಗುಲಾಮಗಿರಿಯ ಸಂಕೇತಗಳನ್ನು ಗುರುತಿಸುವುದಾದರೆ ಮೊದಲು ಕಾಣುವುದೇ ತಾಜ್ ಮಹಲ್, ನಂತರದ ಸ್ಥಾನದಲ್ಲಿ ಬ್ರಿಟಿಷರಿಂದ ನಿರ್ಮಾಣಗೊಂಡ ಸಂಸತ್ ಭವನ, ರಾಷ್ಟ್ರಪತಿ ಭವನಗಳಿರುತ್ತವೆ ಎಂದು ಆಜಂ ಖಾನ್ ಹೇಳಿದ್ದಾರೆ.

Write A Comment