ರಾಷ್ಟ್ರೀಯ

ಪತಿಯ ಅಂತ್ಯ ಸಂಸ್ಕಾರಕ್ಕಾಗಿ ಅಪ್ರಾಪ್ತ ಮಕ್ಕಳನ್ನು ಅಡವಿಟ್ಟ ತಾಯಿ

Pinterest LinkedIn Tumblr

money

ಒಡಿಸ್ಸಾ : ಕಿತ್ತು ತಿನ್ನುವ ಬಡತನದಿಂದ ಬಳಲಿ ಬೆಂಡಾದ ಮಹಿಳೆಯೊಬ್ಬಳು ಮೃತ ಪತಿಯ ಅಂತ್ಯ ಸಂಸ್ಕಾರಕ್ಕೆ ಹಣವಿಲ್ಲದೇ ತನ್ನ ಅಪ್ರಾಪ್ತ ಮಕ್ಕಳನ್ನು ಅಡವಿಟ್ಟ ಘಟನೆ ನಡೆದಿದೆ.

ಒಡಿಸ್ಸಾದ ಕಿಯೋಂಝೂರ್ ಜಿಲ್ಲೆಯ ಗಧೂಲಿ ಗ್ರಾಮದ ಸಾಬಿತ್ರಿ ನಾಯಕ್ ಎಂಬ ಮಹಿಳೆ ತನ್ನ ಗಂಡನ ಅಂತ್ಯಸಂಸ್ಕಾರಕ್ಕೆ ಮಕ್ಕಳಾದ ಸುರೇಶ್ ಮತ್ತು ಮುಖೇಶ್ ಎಂಬುವರನ್ನು ಪಕ್ಕದ ಮನೆಯವರಿಗೆ 5ಸಾವಿರಕ್ಕೆ ಅಡವಿಟ್ಟು ಗಂಡನ ಅಂತ್ಯಸಂಸ್ಕಾರ ನಡೆಸಿದ್ದಾಳೆ.

ಸಾಬಿತ್ರಿಗೆ ಆಕಾಶ್(9), ಚಿಲಾರಿ(8) ಮತ್ತ ಬರ್ಷಾ(4) ಎಂಬ ಇನ್ನೂ ಮೂವರು ಮಕ್ಕಳಿದ್ದಾರೆ. ದಿನಗೂಲಿ ಕಾರ್ಮಿಕನಾಗಿ ರಾಯ್‌ಬಾ ಕಾರ್ಯನಿರ್ವಹಿಸುತ್ತಿದ್ದು,ಹಲವು ದಿನಗಳಿಂದ ಅಸ್ವಸ್ಥರಾಗಿದ್ದ ಅವರು ನಿಧನರಾಗಿದ್ದರು.

ಇನ್ನು ಈ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ತಾಯಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಸಾಬಿತ್ರಿ ಬಾಯಿ ತನ್ನ ಪರಿಸ್ಥಿತಿಯ ಬಗ್ಗೆ ಜನರಿಗೆ ತಿಳಿಸಿ ಸಹಾಯಕ್ಕಾಗಿ ಕೋರಿಕೊಂಡರೂ ಯಾರೊಬ್ಬರೂ ಆಕೆಯ ಕಷ್ಟಕ್ಕೆ ನೆರವಾಗಲಿಲ್ಲ. ಆಗ ತನ್ನ ಇಬ್ಬರು ಗಂಡು ಮಕ್ಕಳನ್ನು ಅಡವಿಟ್ಟು ಗಂಡನ ಅಂತ್ಯ ಸಂಸ್ಕಾರ ಮಾಡಿದ್ದಾಳೆ. ಇನ್ನು ಅಡವಿಟ್ಟ ಮಕ್ಕಳನ್ನು ಶಾಲೆ ಬಿಡಿಸಿ ಹಣ ನೀಡಿದ ಮನೆಯವರ ಹಸುಗಳನ್ನು ಕಾಯಲು ಕಳುಹಿಸಿದ್ದಾರೆ.

Write A Comment