ರಾಷ್ಟ್ರೀಯ

ವಿವಾಹ ಸಂಭ್ರಮಾಚರಣೆಗೆ ಬಲಿಯಾದ ವರ

Pinterest LinkedIn Tumblr

Groom  Amit Rastogi

ಸೀತಾಪುರ: ತನ್ನ ವಿವಾಹದ ಸಂಭ್ರಮಾಚರಣೆಯಲ್ಲಿದ್ದ ವರನಿಗೆ ಆಕಸ್ಮಿಕವಾಗಿ ಗುಂಡು ತಗುಲಿದ್ದರಿಂದ ಆತನ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಸೀತಾಪುರ ಗ್ರಾಮದ ಅಮಿತ್ ರಸ್ತೋಗಿ ಮೃತ ದುರ್ದೈವಿ. ಪ್ರೇಮ ನಗರದಲ್ಲಿರುವ ಅತಿಥಿ ಗೃಹಕ್ಕೆ ಮದುವೆ ದಿಬ್ಬಣ ಬಂದಾಗ ಸಂಭ್ರಮಾಚರಣೆಯಲ್ಲಿ ಕೆಲವು ಜನರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅದರಲ್ಲಿ ಒಂದು ಗುಂಡು ಅಮಿತ್ ತಲೆಯಲ್ಲಿ ತೂರಿ ಹೋಗಿದೆ. ಪ್ರಜ್ಞೆ ತಪ್ಪಿ ಬಿದ್ದ ಅಮಿತ್‌ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಬದುಕುಳಿಯಲಿಲ್ಲ.

ಈ ತಿಂಗಳ ಆರಂಭದಲ್ಲಿ ಶಾಲ್ಮಿ ಮತ್ತು ಬಾಲ್ಘಾಟ್‌ನಲ್ಲಿ ಸಂಭ್ರಮಾಚರಣೆ ವೇಳೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು. ಸಂಭ್ರಮದಲ್ಲಿದ್ದ ಮದುವೆ ಮಂಟಪವೀಗ ಸ್ಮಶಾನವಾಗಿ ಪರಿವರ್ತಿತವಾಗಿದ್ದು ಎರಡು ಕುಟುಂಬದವರು ದುಃಖದ ಕಡಲಲ್ಲಿ ಮುಳುಗಿದ್ದಾರೆ

Write A Comment