ರಾಷ್ಟ್ರೀಯ

ತಿರುಪತಿ ದೇವಸ್ಥಾನಕ್ಕೆ ರು.35 ಲಕ್ಷದ ಲಾರಿ ದಾನ ಮಾಡಿದ ಮುಸ್ಲಿಂ

Pinterest LinkedIn Tumblr

tiru

ವಿಜಯವಾಡ: ತಿರುಪತಿ ತಿಮ್ಮಪನ ದೇವಸ್ಥಾನಕ್ಕೆ ತರಕಾರಿಗಳನ್ನು ಸಾಗಿಸಲು ಮುಸ್ಲಿಂ ವ್ಯಕ್ತಿಯೊಬ್ಬರು ಲಾರಿಯನ್ನು ದಾನ ಮಾಡಿದ್ದಾರೆ.

ರು.35ಲಕ್ಷ ಮೌಲ್ಯದ ಹವಾನಿಯಂತ್ರಿತ ಲಾರಿಯನ್ನು ಅಬ್ದುಲ್ ಗನಿ ಎಂಬುವವರು ದಾನ ಮಾಡಿದ್ದಾರೆ. ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ನಡೆಯುವ ಅನ್ನದಾನಕ್ಕೆ ತರಕಾರಿ ಕೊಂಡೊಯ್ಯಲು ಅನುಕೂಲವಾಗಲೆಂದು ದಾನ ನೀಡಿದ್ದಾರೆ.

ಇನ್ನು, ಅನ್ನದಾನಕ್ಕೆ ಅನುಕೂಲವಾಗುವ ಉದ್ದೇಶದಿಂದ 2007ರಿಂದ ಮಾದವ ರಾವ್ ಮತ್ತು ಕುಟುಂಬ ತರಕಾರಿಗಳನ್ನು ದಾನ ನೀಡುತ್ತಾ ಬಂದಿದ್ದಾರೆ.

Write A Comment