ಕರ್ನಾಟಕ

ವಯಸ್ಸಾಯಿತೆಂಬ ಚಿಂತೆ ಬೇಡ

Pinterest LinkedIn Tumblr

vayassuಬೆಂಗಳೂರು, ಫೆ.17- ನಿಮಗೆ ವಯಸ್ಸಾಗುತ್ತಿದೆ ಎಂದು ಕನ್ನಡಿಯಲ್ಲಿ ಸಣ್ಣ ಸಂಕೇತ ಹಾಗೂ ದೇಹದಲ್ಲಿ ಸಣ್ಣ ಬದಲಾವಣೆಗಳನ್ನು ನೀವು ಗಮನಿಸಿರಬಹುದು ಹಾಗೂ ಇದರಿಂದ ಚಿಂತಿತರಾಗಿ ತಟಸ್ಥರಾಗುವ ಅಥವಾ ಕೆಳಗೆ ಇಳಿಯುವ ಭಾವನೆ ಬೇಕಿಲ್ಲ, ನಿಮಗೆ ಸಂತೋಷ, ಗೌರವಬೇಕು, ಸಮಾಜಕ್ಕೆ ಕೊಡುಗೆ ನೀಡಬೇಕು. ವಯಸ್ಸಾಗುವುದಕ್ಕೆ ಪ್ರಮುಖವಾಗಿ 5 ಲಕ್ಷಣಗಳಿವೆ- ಒಣಗಿದ ತ್ವಚೆ, ಮಂಕಾದ ಮೈಬಣ್ಣ, ಸಣ್ಣ ಗೆರೆಗಳು ಮತ್ತು ಸುಕ್ಕುಗಳು, ಗಟ್ಟಿಯಿಲ್ಲದಿರುವುದು ಮತ್ತು ವರ್ಣಕತೆ.

ಸಮತದ ಪ್ರಭಾವ ಮತ್ತು ತ್ವಚೆಯ ಕೋಶಗಳ ಮತ್ತು ಅವುಗಳ ಹೊರ-ಕೋಶದ ಆಧಾರದ ಮ್ಯಾಟ್ರಿಕ್ಸ್ ಮತ್ತು ಪರಿಸರದ ಅಂಶಗಳ ಪರಿಣಾಮದಿಂದ ತ್ವಚೆಯು ವಯಸ್ಸಾದಂತೆ ಕಾಣುತ್ತದೆ.

ಪ್ರತಿದಿನವೂ ನಿಮ್ಮ ದೇಹದಲ್ಲಿ ಕೋಶಗಳು ಪುನರುತ್ಪತ್ತಿ ಯಾಗುತ್ತವೆ. ಒಂದು ತತ್ತಿಯನ್ನು ಮನುಷ್ಯನ್ನಾಗಿಸುವ ಅದೇ ಪ್ರಕ್ರಿಯೆಯು ನಿಮ್ಮ ತ್ವಚೆಯನ್ನು, ಕೂದಲನ್ನು, ರಕ್ತಕಣಗಳನ್ನು ಮತ್ತು ಕೆಲವು ಆಂತರಿಕ ಅಂಗಾಂಗಗಳನ್ನು ಪುನರುಜ್ಜೀವನ ಕ್ರಿಯೆಯು ನಡೆಯುತ್ತಿದೆ. ತ್ವಚೆ ವಯಸ್ಸಾಗುವ ಲಕ್ಷಣಗಳನ್ನು ಹಿಂದಿರುಗಿಸಲು ಸೂಕ್ತವಾದ ಮಾರ್ಗವೆಂದರೆ ತನ್ನನ್ನು ತಾನೇ ಸರಿಪಡಿಸಿಕೊಳ್ಳುವ ತ್ವಚೆಯ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ಮತ್ತು ವಯಸ್ಸಿನ ಕಾರಣದಿಂದಾಗಿ ಕಳೆದುಕೊಂಡ ಅಗತ್ಯ ಪೋಷಕಾಂಶಗಳನ್ನು ಪೂರೈಸುವ ಮೂಲಕ ಈ ಪ್ರಕ್ರಿಯೆಯನ್ನು

ವೃದ್ಧಿಸುವುದು, ತ್ವಚೆಯ ಪುನರು ಜೀವನದಲ್ಲಿ ಬೆಳವಣಿಗೆಯ ಅಂಶಗಳ ಮತ್ತು ಸೈಟೊಕೈನ್ಸ್‌ಗಳ ಬಳಕೆ ಮತ್ತು ಚಿಕಿತ್ಸೆಯಿಂದ ವಯಸ್ಸಾಗುವುದನ್ನು ತಡೆಯಲು ವಯೋನಿರೋಧಕ ಚಿಕಿತ್ಸೆ ಹೊರಹೊಮ್ಮಿದೆ. ಮಲ್ಲಿಗೆ ಮೆಡಿಕಲ್ ಸೆಂಟರ್‌ನ ಹಿರಿಯ ಸಲಹೆಗಾರ, ಚರ್ಮರೋಗ ತಜ್ಞ ಡಾ.ಡಿ.ಎಸ್. ಕೃಪ ಶಂಕರ್ ಹೇಳುವಂತೆ ನಾವು ಮಕ್ಕಳಾಗಿದ್ದಾಗ ಬೇಗನೆ ಬೆಳೆಯ ಬೇಕು ಎಂದು ಬಯಸುತ್ತೇವೆ. ಆದರೆ 30 ವರ್ಷಗಳನ್ನು ತಲುಪಿದಾಗ ನಮಗೆ ವಯಸ್ಸಾಗುವುದು ನಿಲ್ಲಬೇಕು ಎಂದು ಬಯಸುತ್ತೇವೆ. ವಯೋನಿರೋಧಕ ಘಟಕಾಂಶಗಳಲ್ಲಿ ಬಹಳ ಶಕ್ತಿಶಾಲಿಯಾದದ್ದು ಎಪಿಡರ್ಮಲ್ ಗ್ರೋತ್‌ಫ್ಯಾಕ್ಚರ್ (ಇಎಫ್‌ಎಫ್).

ಕೃತಕ ಉತ್ಪನ್ನಗಳಿಂದ ವಯಸ್ಸಿನ ಲಕ್ಷಣಗಳನ್ನು ಮರೆಮಾಚಬೇಡಿ. ಹೆಚ್ಚು ಸಮತೋಲಿತ ವಯೋನಿರೋಧಕ ವಿಧಾರವನ್ನು ರೂಪಿಸುತ್ತವೆ ಮತ್ತು ಕಳೆದುಹೋದದ್ದನ್ನು ಮತ್ತೆ ತುಂಬುತ್ತದೆ. ಬೆಳವಣಿಗೆಯ ಅಂಶಗಳಿಂದ ಮತ್ತು ಕೋಶ ನವೀಕರಣ ಚಿಕಿತ್ಸೆಯಿಂದ ಎಂದೂ ಯುವಕರಾಗಿರೋಣ.

Write A Comment