ಮುಂಬೈ

ಪೇಸ್‌ಬುಕ್ ಗೆಳತಿ ಭೇಟಿ ಮಾಡಲು ಅಕ್ರಮವಾಗಿ ಪಾಕಿಸ್ತಾನಕ್ಕೆ ನುಗ್ಗಿ ಜೈಲುಪಾಲಾದ..!

Pinterest LinkedIn Tumblr

faceಮುಂಬೈ, ಫೆ.17- ಪೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳತಿಯನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ಅಕ್ರಮವಾಗಿ ನುಸುಳಿ ಜೈಲು ಶಿಕ್ಷೆಗೆ ಗುರಿಯಾಗಿರುವ ಯುವಕನ ಬಿಡುಗಡೆ ನೆರವು ನೀಡಬೇಕೆಂದು ಆತನ ಕುಟುಂಬ ಉಭಯ ಸರ್ಕಾರಗಳಲ್ಲಿ ಮನವಿ ಮಾಡಿದೆ. ಅಮೀದ್ ಅನ್ಸಾರಿ ಮೂಲತಃ ಮುಂಬೈನವನಾಗಿದ್ದು, ಪೇಸ್‌ಬುಕ್ ಮೂಲಕ ಪರಿಚಯವಾದ ಪಾಕಿಸ್ತಾನದ ಯುವತಿಯನ್ನು ಭೇಟಿಯಾಗಿ 2012ರಲ್ಲಿ ಆಫ್ಘಾನಿಸ್ತಾನದ ಮೂಲಕ ಪಾಕಿಸ್ತಾನಕ್ಕೆ ನುಸುಳಿದ್ದ.

ಈ ಸಂದರ್ಭದಲ್ಲಿ ಆತನನ್ನು ಬಂಧಿಸಿದ ಅಲ್ಲಿ ಪೊಲೀಸರು ಗೂಢಾಚಾರಿಕೆಯ ಆರೋಪ ಹೊರಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಭಾನುವಾರ ಆತನನ್ನು ಅಪರಾಧಿ ಎಂದು ಘೋಷಿಸಿ ಶಿಕ್ಷೆ ವಿಧಿಸಲಾಗಿದೆ.

ಇದರಿಂದ ಕಂಗಾಲಾಗಿರುವ ಯುವಕನ ಪೋಷಕರು, ತಮ್ಮ ಮಗ ನಿರ್ದೋಷಿಯಾಗಿದ್ದು, ಮಾನವೀಯ ನೆರೆಯಲ್ಲಿ ಆತನ ಬಿಡುಗಡೆ ಕ್ರಮ ಕೈಗೊಳ್ಳಬೇಕೆಂದು ಭಾರತ ಮತ್ತು ಪಾಕಿಸ್ಥಾನ ಸರ್ಕಾರಗಳ ಮೊರೆ ಹೋಗಿದ್ದಾರೆ. ಈ ಕುರಿತು ಮಾತನಾಡಿರುವ ಅಮೀದ್ ಅನ್ಸಾರಿ ತಾಯಿ ಫೌಝಿಯಾ ಅನ್ಸಾರಿ ಅವರು, ತಮ್ಮ ಮಗನಿಗೆ ಇನ್ನೂ ಚಿಕ್ಕ ವಯಸ್ಸು, ಆತನನ್ನು ಜೀವನ ಪರಿಯಂತ ಜೈಲಿನಲ್ಲಿ ಕೊಳೆಯುವಂತೆ ಮಾಡಿ ಬದುಕು ಹಾಳು ಮಾಡಬೇಡಿ, ಇಂಜನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಪದವಿ ಪಡೆದಿರುವ ಅಮೀದ್ ಒಳ್ಳೆಯ ಹುಡುಗ. ಆತ ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

Write A Comment