ದೆಹಲಿ: ಜವಾಹರ್ ಲಾಲ್ ನಹರೂ ವಿವಿಯ ವಿದ್ಯಾರ್ಥಿ ಮುಖಂಡ ‘ರಾಷ್ಟ್ರದ್ರೋಹ’ದ ಆಪಾದನೆಯಲ್ಲಿ ಬಂಧಿತರಾಗಿರುವ ಕನ್ಹಯ ಕುಮಾರ್ ಅವರನ್ನು ಮಾರ್ಚ್ 2 ತನಕ ನ್ಯಾಯಂಗ ಬಂಧನಕ್ಕೆ ಸುಪ್ರೀಂ ಕೋರ್ಟ್ ಇಂದು ಆದೇಶಿಸಿದೆ.
ಇಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಕನ್ಹಯ್ಯನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಮಾರ್ಚ್ 2 ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾದ್ಯಮಗಳು ವರದಿ ಮಾಡಿವೆ.
ಕನ್ಹಯ್ಯ ಕುಮಾರ್ ನನ್ನು ಕೋರ್ಟ್ ಗೆ ಹಾಜರುಪಡಿಸಲು ಕರೆದೊಯ್ಯವ ವೇಳೆ ನಡೆಯಬಹುದಾದ ಘಟನೆಗಳ ಕುರಿತು ಮುನ್ನೆಚ್ಚರಿಕೆ ಅಂಗವಾಗಿ 400 ಪೊಲೀಸರು, ಅರೆಸೇನಾ ಪಡೆ ನಿಯೋಜಿಸಲಾಗಿತ್ತು. ಆದರೂ ಆಕ್ರೋಶಿತರ ಗುಂಪು ಕನ್ಹಯ್ಯ ಮೇಲೆ ಹಾಗೂ ಮಾದ್ಯಮದವರ ವಕೀಲ ವೇಷದಲ್ಲಿದ್ದ ವ್ಯಕ್ತಿಗಳಿಂದ ಹಲ್ಲೆ ನಡೆದಿತ್ತು.