ರಾಷ್ಟ್ರೀಯ

ಏಳು ಹುಡುಗಿಯರ ಪ್ರೀತಿಗಾಗಿ ಕಳ್ಳನಾದ

Pinterest LinkedIn Tumblr

arrestಮಹಾರಾಷ್ಟ್ರ: ಒಬ್ಬಳನ್ನ ಪ್ರೀತಿಸಿ, ಆಕೆ ಕೇಳಿದ್ದನ್ನೆಲ್ಲ ಕೊಡಿಸಿ ಸಂತೋಷ ಪಡಿಸಲು ಜೇಬುಕಾಲಿ ಮಾಡಿಕೊಂಡು ಅದೆಷ್ಟೋ ಜನರು ಪರದಾಡುತ್ತಾರೆ. ಆದರೆ ನಾಗಪುರದಲ್ಲೊಬ್ಬ ಮಹಾನುಭಾ ಏಳು ಯುವತಿರಯನ್ನೂ ಪ್ರೀತಿಸಿದರೂ, ಒಬ್ಬರಿಗೂ ಒಂಚೂರು ಕಡಿಮೆ ಆಗುವಂತೆ ನೋಡಿಕೊಂಡಿಲ್ಲ. ಎಲ್ಲರನ್ನೂ ಸಂತೋಷದಿಂದ ಇರುವು ಹಾಗೆ, ಅವರು ಕೇಳಿದ್ದನ್ನೆಲ ಕೊಡಿಸಿದ್ದಾನೆ. ಕೊನೆಗೆ ಜೈಲು ಪಾಲಾಗಿದ್ದಾನೆ.

ಅರೇ..! ಇದೇನಪ್ಪ ಎಲ್ಲರನ್ನೂ ಸಂತೋಷದಿಂದ ನೋಡಿಕೊಂಡರು ಆಸಾಮಿ ಯಾಕೆ ಜೈಲು ಪಾಲಾದ ಎಂಬ ಪ್ರಶ್ನೆಗೆ ಉತ್ತರ ಕಳ್ಳತನ. ಹೌದು! ನಾಗ್ಪುರದ ನಿವಾಸಿ ಓಂಪ್ರಕಾಶ್ ಖಾನ್‌ದೇವ್ ಮಹಾರಾಷ್ಟ್ರ, ಮಧ್ಯಪ್ರದೇಶ , ಛತ್ತೀಸ್‌ಗಢದ, ನಾಗ್ಪುರ್ ಹೀಗೆ ಏಳು ಕಡೆ ಏಳು ಯುವತಿಯರನ್ನು ಯಾಮಾರಿಸಿ ಅವರ ಪ್ರೀತಿ ಸಂಪಾದಿಸಿದ್ದ. ಯಾವಾಗಾಲು ಶ್ರೀಮಂತರ ಹಾಗೆ ಫೋಜು ಕೋಡುವುದು, ಎಸಿ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವುದ, ಕಾರ್‌ನಲ್ಲಿ ಓಡಾಡುವುದು ಹೀಗೆ ಐಷಾರಾಮಿ ಜೀವನ ಸಾಗಿಸುತ್ತಿದ್ದ.

ಅಷ್ಟೆ ತಾನು ಪ್ರೀತಿಸಿದ ಏಳು ಯುವತಿಯರಿಗೆ ಕೇಳಿದ್ದನ್ನೆಲ್ಲ ಕೊಡಿಸಿ ಎಲ್ಲರನ್ನೂ ಸಂತೋಷವಾಗಿ ನೋಡಿಕೊಳ್ಳುತ್ತಿದ್ದ. ಆದರೆ ಇದಕ್ಕೆಲ್ಲ ಆತ ಮಾಡುತ್ತಿದ್ದ ಕೆಲಸ ಮಾತ್ರ ಕಳ್ಳತನ. ಸರಗಳ್ಳತನ, ಮನೆಗಳ್ಳತನ ಹೀಗೆ ಕಳ್ಳತನದಲ್ಲಿ ಯಾವ್ಯಾವ ವಿಭಾಗಗಳಿವೆಯೋ ಎಲ್ಲದರಲ್ಲೂ ಕಾಲಿಟ್ಟಿದ್ದ. ಸದ್ಯ ನಾಗ್ಪುರದ, ಪೊಲೀಸರಿಗೂ ಕೂಡಾ ಓಂಪ್ರಕಾಶ್ ಸವಾಲಾಗಿ ಬಿಟ್ಟಿದ್ದ. ಕೊನೆಗೆ ನಾಗ್ಪುರದ ಆತನ ಪ್ರೇಯಸಿ ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಜತೆಗೆ ಈತ ಸರಗಳ್ಳತನ ಮಾಡಿ ಮಾರಾಟ ಮಾಡುದ್ದ ಚಿನ್ನದ ವ್ಯಾಪಾರಿಯನ್ನು ಬಂಧಿಸಿದ್ದಾರೆ.

Write A Comment