ರಾಷ್ಟ್ರೀಯ

ಬರೇ 251ರು.ಗೆ ಸ್ಮಾರ್ಟ್‌ಫೋನ್; ಬುಕ್ ಮಾಡೋಕೆ ತಯಾರಾಗಿ

Pinterest LinkedIn Tumblr

Ringing-Bells-Freedom-251ದೆಹಲಿ: ರಿಂಗಿಂಗ್‌ ಬೆಲ್ಸ್‌ ದೇಶೀಯ ಹೆಡ್‌ ಸೆಟ್‌ ತಯಾರಿಕಾ ಕಂಪೆನಿ ವಿಶ್ವದಲ್ಲೇ ಅಗ್ಗದ ಸ್ಮಾರ್ಟ್‌ಫೋನನ್ನು ಇಂದು ಸಂಜೆ ಬಿಡುಗಡೆ ಮಾಡುತ್ತಿದ್ದು, ಫ್ರೀಡಂ 251′ ಹೆಸರಿನ ಸ್ಮಾರ್ಟ್‌ಫೋನನ್ನು ಕೇವಲ 499 ರು.ಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಲಾಂಚಿಂಗ್‌ ಆಫ‌ರ್‌ ಆಗಿ ಕೇವಲ 251 ರು. ಫೋನು ಗ್ರಾಹಕರ ಕೈ ಸೇರಲಿದೆ.

ಇಂದು ಸಂಜೆ ಬಿಡುಗಡೆಗೊಳ್ಳುವ ಜಗತ್ತಿನ ಅಗ್ಗದ ಸ್ಮಾರ್ಟ್‌ಫೋನನ್ನು www.freedom251.com ಆನ್‌ಲೈನ್‌ ಮೂಲಕ ಫೆಬ್ರವರಿ 18 ರ ಬೆಳಗ್ಗೆ 6 ಗಂಟೆಯಿಂದ ಫೆಬ್ರವರಿ 21 ರ 8 ಗಂಟೆ ರಾತ್ರಿಯ ವರೆಗೆ 251 ರು.ಗಳಲ್ಲಿ ಖರೀದಿ ಮಾಡಬಹುದಾಗಿದ್ದು, ಈ ಪೋನ್ ಗ್ರಾಹಕರ ಕೈಗೆ ಈ ವರ್ಷದ ಜೂನ್‌ 30 ರ ಒಳಗೆ ಸೇರಲಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ 5.1 ಆಂಡ್ರಾಯಿಡ್‌ ಆಪರೇಟಿಂಗ್‌ ಸಿಸ್ಟಮ್‌ ಹೊಂದಿದ್ದು,4.00 ಇಂಚು ಡಿಸ್‌ಪ್ಲೇ, ಫ್ರೊಂಟ್ ಕ್ಯಾಮರಾ 0.3 ಮೆಗಾ ಫಿಕ್ಸೆಲ್‌ ,3.2 ಮೆಗಾ ಫಿಕ್ಸೆಲ್‌ ರೇರ್‌ ಕ್ಯಾಮರಾ,1 ಜಿಬಿ ರಾಮ್‌ ,8 ಜಿಬಿ ಸ್ಟೋರೆಜ್‌ ಕ್ಯಾಪೆಸಿಟಿ ಹೊಂದಿದ್ದು 32 ಜಿಬಿಗೆ ವಿಸ್ತರಿಸಬಹುದಾಗಿದೆ.

ಕೇಂದ್ರ ಸಚಿವ ಮನೋಹರ್‌ ಪಾರೀಕರ್‌ ಅವರು ‘ಫ್ರೀಡಂ 251’ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿ ಕಡಿಮೆ ಬೆಲೆಯ ಸ್ಮಾರ್ಟ್‌ ಫೋನ್‌ 1500 ರು. ಆಗಿದೆ. ಕಳೆದ ವರ್ಷ ಆರಂಭಗೊಂಡ ರಿಂಗಿಂಗ್‌ ಬೆಲ್ಸ್‌ ಮುಂದಿನ ದಿನಗಳಲ್ಲಿ ಸ್ವದೇಶಿ ನಿರ್ಮಿತ ಗುಣಮಟ್ಟದ ಸ್ಮಾರ್ಟ್‌ಫೋನ್‌ ಗಳನ್ನು ತಯಾರಿಸುವ ಉದ್ದೇಶವನ್ನು ಹೊಂದಿದೆ. ಕಂಪೆನಿ ಈಗಾಗಲೇ ಅತಿ ಅಗ್ಗದ 4ಜಿ ಸ್ಮಾರ್ಟ್‌ಫೋನ್‌ ಅನ್ನು 2,999 ರೂ.ಗೆ ಇತ್ತೀಚೆಗಷ್ಟೇ ಬಿಡುಗಡೆ ಮಾಡಿತ್ತು.

Write A Comment