ಕರ್ನಾಟಕ

ಗಿನ್ನಿಸ್ ದಾಖಲೆ ಬರೆದ ಕೊಡಗಿನ ತಾಯಿ-ಮಗಳು

Pinterest LinkedIn Tumblr

piono-q18l5ಮಡಿಕೇರಿ(ಫೆ.16): ಗಿನ್ನಿಸ್​ ಬುಕ್​ ಆಫ್​ ರೆಕಾರ್ಡ್​ ಸೇರೋದು ಹಲವರ ಕನಸು. ಪ್ರಪಂಚದದಲ್ಲಿ ಶ್ರೇಷ್ಠ ಸಾಧನೆ ಮಾಡುವವರು ಈ ಗೌರವ ಪಡೆಯುತ್ತಾರೆ. ಇಂತಹ ಹಂಬಲಕ್ಕೆ ಬಿದ್ದ ಕೊಡಗಿನ ಅಮ್ಮ ಮಗಳು ಈ ಪಟ್ಟಿ ಸೇರಿದ್ದಾರೆ. ಬರೋಬ್ಬರಿ 400 ಮಂದಿ ಜೊತೆ ಜೊತೆಯಾಗಿ ಸೇರಿ ಪಿಯಾನೋ ನುಡಿಸಿದ್ದು ಗಿನ್ನಿಸ್​ ಬುಕ್​ ಆಫ್​ ರೆಕಾರ್ಡ್​ ಸೇರಿದೆ. ಇಷ್ಟು ಜನರನ್ನು ಒಟ್ಟು ಸೇರಿಸಿದ ಕೊಡಗಿನ ಅಮ್ಮ-ಮಗಳು ಈ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಮಡಿಕೇರಿಯ ಕಿರಂದಾಡು ಗ್ರಾಮದವರಾದ ತಾಯಿ ಜಯಶ್ರೀ ಮತ್ತು ಪುತ್ರಿ ನಂದಿತಾ ಸದ್ಯ ಗೋವಾ ನಿವಾಸಿಗಳು. ಆದ್ರೆ ದಾಖಲೆಯ ಬೆನ್ನು ಬಿದ್ದ ಇವರು ಬೆಂಗಳೂರಿನ ವೀಣಾವಾಣಿ ಸಂಸ್ಥೆಯೊಂದಿಗೆ ಸೇರಿ ಪಿಯಾನೋ ಸ್ಫರ್ಧೆ ಏರ್ಪಡಿಸಿದ್ದರು. ಕಳೆದ ಸೆಪ್ಟೆಂಬರ್​ ನಡೆದ ಈ ಪಿಯಾನೋ ವಾದನ ಈಗ ಗಿನ್ನಿಸ್​ ಪುಸ್ತಕ ಸೇರಿದೆ.

ಇವರ ಪುತ್ರಿ ನಂದಿತಾ ಇನ್ನೂ ಎರಡನೇ ತರಗತಿ ವಿದ್ಯಾರ್ಥಿನಿ. ಪಿಯಾನೋ ವಾದನದಲ್ಲಿ ಈಗಲೇ ದೊಡ್ಡ ಸಾಧನೆ ಮಾಡಿದ್ದಾರೆ.

ಈ ಹಿಂದೆ ಚೆನೈನಲ್ಲಿ ನಡೆದ ಸ್ಪರ್ಧೆಯಲ್ಲಿ 300 ಮಂದಿ 10 ನಿಮಿಷ ಪಿಯಾನೋ ನುಡಿಸಿದ್ದರು. ಅಲ್ಲಿ ನುಡಿಸಿದ ಎಲ್ಲಾ ಗೀತೆಗಳನ್ನು 400 ಮಂದಿ ಕೇವಲ 9 ನಿಮಿಷಗಳಲ್ಲಿ ನುಡಿಸಿ ದಾಖಲೆ ನಿರ್ಮಿಸಿದ್ದಾರೆ. ಒಟ್ಟಾರೆ ಪಿಯಾನೋ ವಾದನದಲ್ಲಿ ಕೊಡಗಿನ ಅಮ್ಮ ಮಗಳು ಗಿನ್ನೆಸ್​ ದಾಖಲೆ ಬರೆದು ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ದಾರೆ.

Write A Comment