ರಾಷ್ಟ್ರೀಯ

ಪಿಎಫ್‌ಗೆ ಶೇ 8.8 ಬಡ್ಡಿ ದರ

Pinterest LinkedIn Tumblr

Moneywebಚೆನ್ನೈ (ಪಿಟಿಐ): ಭವಿಷ್ಯ ನಿಧಿ (ಪಿಎಫ್‌) ಬಡ್ಡಿ ದರವನ್ನು 2015–16ನೇ ಸಾಲಿಗೆ ಶೇ 8.8ಕ್ಕೆ ಏರಿಕೆ ಮಾಡಲಾಗಿದೆ. 2014–15ನೇ ಸಾಲಿನಲ್ಲಿ ಇದು ಶೇ 8.75ರಷ್ಟಿತ್ತು.

ಕಾರ್ಮಿಕ ಸಂಘಟನೆಗಳು ಪಿಎಫ್‌ ಬಡ್ಡಿ ದರವನ್ನು ಶೇ 8.90ಕ್ಕೆ ಏರಿಕೆ ಮಾಡುವ ಬೇಡಿಕೆ ಇಟ್ಟಿದ್ದರು. ಆದರೆ, ಆರ್ಥಿಕ ಹಿಂಜರಿತದಿಂದ ಈ ಬಾರಿ ಶೇ 0.25ರಷ್ಟು ಮಾತ್ರ ಅಲ್ಪ ಏರಿಕೆ ಮಾಡಲಾಗಿದೆ.

‘ಇದು ಮಧ್ಯಂತರ ಪರಿಷ್ಕರಣೆ. ಬಡ್ಡಿ ದರದಲ್ಲಿ ಇನ್ನಷ್ಟು ಏರಿಕೆ ಆಗಲಿದೆ’ ಎಂಬ ಸುಳಿವನ್ನು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೆಯ ನೀಡಿದ್ದಾರೆ.

Write A Comment