ಕರ್ನಾಟಕ

ಬಂಡವಾಳ ಹೂಡಲು ಮುಗಿಬಿದ್ದ ಉದ್ಯಮಿಗಳು!

Pinterest LinkedIn Tumblr

invest-kar-LDjboಬೆಂಗಳೂರು(ಫೆ.04): ಬಂಡವಾಳ ಹೂಡಿಕೆ ಸಮಾವೇಶಕ್ಕೆ ಭರ್ಜರಿ ಓಪನಿಂಗ್​ ಸಿಕ್ಕಿದ್ದು, ಇಂದು ಇದಕ್ಕೆ ಅಧಿಕೃತವಾಗಿ ತೆರೆ ಬೀಳಲಿದೆ.

ಮೊದಲ ದಿನ ಸಮಾವೇಶದಲ್ಲಿ ಸಾವಿರಾರು ಕೋಟಿ ಬಂಡವಾಳ ಹರಿದು ಬಂದಿದೆ. ರಾಜ್ಯದಲ್ಲಿ ಹೂಡಿಕೆ ಮಾಡಲು ಘಟಾನುಘಟಿ ಉದ್ಯಮಿಗಳು ತಾ ಮುಂದು ನಾ ಮುಂದು ಎಂದು ಬಂದಿದ್ದು, ಇಂದು ಎಲ್ಲಾ ಒಡಂಬಡಿಕೆಗಳು ಸಹಿಯಾಗಲಿದೆ.

ರಾಜ್ಯದ 30 ಜಿಲ್ಲೆಗಳಲ್ಲಿ 26,268 ಎಕರೆ ಭೂಮಿಯನ್ನು ಕೈಗಾರಿಕೆ ಸೇರಿದಂತೆ ಹೂಡಿಕೆದಾರರಿಗೆ ಒಡಂಬಡಿಕೆಯ ಮೂಲಕ ನೀಡಲು ಸರ್ಕಾರ ಸಿದ್ಧವಾಗಿದ್ದು, ಇದರಿಂದ 15 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಸಿಗಲಿದೆ.

ಇಂದು ಇವತ್ತು ಸಮಾವೇಶಕ್ಕೆ ಕೇಂದ್ರ ರೈಲ್ವೇ ಸಚಿವ ಸುರೇಶ್​ ಪ್ರಭು ಆಗಮಿಸಲಿದ್ದಾರೆ. ಸಂಜೆ 4 ಘಂಟೆಗೆ ಅರಮನೆಯ ಆವರಣದಲ್ಲೇ ಸಮಾರೋಪ ಸಮಾರಂಭ ನಡೆಯಲಿದ್ದು, ನಾಳೆ ಹೂಡಿಕೆದಾರರಿಗೆ ಸ್ಥಳ ಪರಿಶೀಲನೆಗೆ ಅವಕಾಶವನ್ನು ಸರ್ಕಾರ ಕಲ್ಪಿಸಿದೆ.

Write A Comment