ಕರ್ನಾಟಕ

ನಾನು ಹೆಲ್ಮೆಟ್ ಧರಿಸಲ್ಲ ಎಂದು ನಡುರಸ್ತೆಯಲ್ಲೇ ಡ್ಯಾನ್ಸ್ ಮಾಡಿದ ವೃದ್ಧ!

Pinterest LinkedIn Tumblr

old-man-dNPoJವಿಜಯಪುರ(ಫೆ.04): ಸುಪ್ರೀಂಕೋರ್ಟ್ ಹೆಲ್ಮೆಟ್ ಕಡ್ಡಾಯಗೊಳಿಸಲು ಆದೇಶಿಸಿದೆ. ಆದರೆ, ಬಿಸಿಲುನಗರಿ ವಿಜಯಪುರ ಜಿಲ್ಲೆಯಲ್ಲಿ ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ದುಸ್ಥರವಾಗಿದೆ. ಇಲ್ಲಿರುವ ಬಿಸಿಲಿನ ಬೇಗುದಿಗೆ ಬೆಂದಿರುವ ಜನರಿಗೆ ಹೆಲ್ಮೆಟ್ ಧರಿಸುವುದು ಬಹುದೊಡ್ಡ ಸವಾಲಾಗಿದೆ. ಮತ್ತೊಂದೆಡೆ ಕೋರ್ಟ್ ಆದೇಶ ಜಾರಿಗೆ ತರಲು ಪೊಲೀಸರು ಕಂಡಕಂಡಲ್ಲಿ ದಂಡ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಬೇಸತ್ತ ಅರುಣ ಹುದ್ಧಾರ ಎಂಬ ವೃದ್ಧ ನಗರದ ಗಾಂಧಿಚೌಕ್ ವೃತ್ತದಲ್ಲಿ ಬೈಕ್’ಲ್ಲಿ ಬಂದು ಬೈಕ್’ನ್ನು ಗಾಂಧಿ ಪ್ರತಿಮೆ ಎದುರು ಪಾರ್ಕ್ ಮಾಡಿ ಗಾಂಧೀಜಿ ಅವರನ್ನು ನೋಡುತ್ತಾ ತಾನು ಧರಿಸಿದ್ದ ಹೆಲ್ಮೆಟ್’ನ್ನು ಕೆಳಗಿಟ್ಟು, ನಾನು ಹೆಲ್ಮೆಟ್ ಧರಿಸಲ್ಲ. ಯಾರು ಏನು ಮಾಡಿಕೊಳ್ಳುತ್ತಾರೋ ನೋಡಿಯೇ ಬಿಡುತ್ತೇನೆ ಎಂದು ಅವಾಜ್ ಹಾಕಿದ್ರು.

ಆದೇಶ ಮಾಡುವಾಗ ಸಾಧಕ ಬಾಧಕ ನೋಡಬೇಕಾಗುತ್ತದೆ. ಆದರೆ, ಪೊಲೀಸರಿಗೆ ಪೊಲೀಸರು ಸಿಕ್ಕಿದ್ದೇ ಅವಕಾಶ ಎಂದು ದಂಡ ವಸೂಲಿ ಮಾಡುತ್ತಿರುತ್ತಾರೆ ಎಂದು ಮಾಯಿಸಿದ್ದ ಸಂಚಾರಿ ಪೊಲೀಸರಿಗೆ ಅವಾಚ್ಯ ಪದಗಳಿಂದ ನಿಂದಿಸಿದರು. ‘ನಾನು ಹೆಲ್ಮೆಟ್ ಧರಿಸಲ್ಲ. ಹೆಲ್ಮೆಟ್ ತಂದು ಕಟ್ಟಿರಿ ಅಂತ ಪೊಲೀಸ್ರಿಗೆ ಕೈ ಮಾಡಿ ತೋರಿಸುತ್ತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಹೆಲ್ಮೆಟ್ ಹಿಡಿದು ನಡು ಬೀದಿಯಲ್ಲೇ ಡ್ಯಾನ್ಸ್ ಮಾಡಿದರು.

‘ನಾನು ಅಸ್ತಮಾ ರೋಗಿ ಈ ಬಗ್ಗೆ ಪೊಲೀಸರಿಗೆ ಹೇಳಿದರೆ ಕೇಳುತ್ತಲೇ ಇಲ್ಲ’ ಎಂದ ವೃದ್ದ ಅರುಣ ಹುದ್ದಾರ ಅವರ ಆಕ್ರೋಶದ ದನಿಗೆ ಸಾರ್ವಜನಿಕರೂ ದನಿಗೂಡಿಸಿದರು. ‘ಹೌದು ಸ್ವಾಮಿ ಇಂಥ ಸುಡು ಬಿಸಿಲಲ್ಲಿ ಹೆಲ್ಮೆಟ್ ಹೇಗೆ ಧರಿಸಲು ಆಗುತ್ತದೆ ಆಗುತ್ತೆ. ನಾವು ಕೋರ್ಟ್ಗೆ ಹೋಗಲ್ಲ. ಬದಲಿಗೆ ನೀವೇ ಇಲ್ಲಿನ ವಸ್ತುಸ್ಥಿತಿ ತಿಳಿಸಿ’ ಎಂದು ವೃದ್ಧ ಪಟ್ಟು ಹಿಡಿದ್ದಾರೆ. ಇದರಿಂದ ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತ್ತು. ಕೊನೆಗೆ ಪೊಲೀಸರು ಹುದ್ದಾರ ಅವರನ್ನು ಮನವಿ ಮಾಡಿಕೊಂಡು ಠಾಣೆಗೆ ಕರೆದೊಯ್ದರು.

Write A Comment