
ವರದಿ : ಈಶ್ವರ ಎಂ. ಐಲ್/ ಚಿತ್ರ,: ದಿನೇಶ್ ಕುಲಾಲ್
ಮುಂಬಯಿ: ಬಂಟರ ಸಂಘ ಮುಂಬಯಿ ಕ್ರೀಡಾ ಸಮಿತಿ ಆಯೋಜಿಸಿದ್ದ ಬಂಟ್ಸ್ ವಾರ್ಷಿಕ ಕ್ರೀಡೋತ್ಸವ-2016 ಜ. 31ರಂದು ಮೀರಾರೋಡ್ ಪೂರ್ವದ ಸೆಂಟರ್ ಪಾರ್ಕ್ ಮೈದಾನದಲ್ಲಿ ಸಂಘದ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ ಆಶ್ರಯದಲ್ಲಿ, ಜರಗಿತು.
ಅಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಮಾತನಾಡುತ್ತಾ ಬಂಟರ ಸಂಘದ ಸಾಧನೆಗಳ ಹಿಂದೆ ದಾನಿಗಳ ಶಕ್ತಿ ಪ್ರಧಾನವಾಗಿದೆ. ಬಂಟರು ಮುಂಬಯಿಯಲ್ಲಿ ಗಳಿಸಿದ ಆದಾಯವನ್ನು ಮುಂಬ ಯಿಯ ಶೈಕ್ಷಣಿಕ, ಸಾಮಾಜಿಕ ಹಾಗೂ ಇತರ ಕ್ಷೇತ್ರಗಳಲ್ಲಿ ವಿನಿಯೋ ಗಿಸುವುದರೊಂದಿಗೆ ಮುಂಬಯಿ ಹಾಗೂ ಮಹಾರಾಷ್ಟ್ರದ ಅಭಿವೃದ್ಧಿಗೂ ವಿಶೇಷ ಕೊಡುಗೆ ಸಲ್ಲಿಸುತ್ತಿದ್ದಾರೆ, ಎಂದರು.

ಕ್ರೀಡಾಕೂಟಕ್ಕೆ ದಾನಿಗಳಾಗಿ ಮತ್ತು ಪ್ರಾಯೋಜಕರಾಗಿ ಸಹಕರಿಸಿದ ಬಂಟ ಬಾಂಧವರನ್ನು ಹಾಗೂ ಗೌರವ ಅತಿಥಿಗಳಾಗಿ ಪಾಲ್ಗೊಂಡ ರಕ್ಷಿ ಡೆವಲಪರ್ ಪ್ರೈ. ಲಿ. ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ರಾಜೇಶ್ ಶೆಟ್ಟಿ, ಸಿನೆಮಾ ನಟ ಪ್ರಕಾಶ್ ರಾಜ್ ರೈ ಅವರನ್ನು ಸಂಘದ ಅಧ್ಯಕ್ಷರು, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಗೌತಮ್ ಎಸ್. ಶೆಟ್ಟಿ, ಮೀರಾ- ಭಾಯಂದರ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಅರುಣ್ ರೈ, ಯುವ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ಅವರು ಶಾಲು ಹೊದೆಸಿ, ಸ್ಮರಣಿಕೆ, ಫಲಪುಷ್ಪವನ್ನಿತ್ತು ಗೌರವಿಸಿದರು.
ಎಂಎಲ್ಸಿ ಮುಜಾಫರ್ ಹುಸೇನ್, ಕ್ರಿಕೆಟ್ ಸಾಧಕ ಪ್ರಣವ್ ಧನವಡೆ, ಎಂಬಿಎಂಸಿ ಉಪ ಮೇಯರ್ ಪ್ರವೀಣ್ ಪಾಟೀಲ್, ಎಂಬಿಎಂಸಿ ಕಮಿಷನರ್ ಅಚ್ಯುತ್ ಹಂಗೇ, ಡ್ರೀಮ್ ಡೆವಲಪರ್ ಸಿಎಂಡಿ ಸುಮೀತ್ ಕಾಂಡೇಲ್ವಾಲ, ರಾಹುಲ್ ಗ್ರೂಪ್ ಆಫ್ ಸ್ಕೂಲ್ ಆ್ಯಂಡ್ ಕಾಲೇಜಿನ ಲಲನ್ ತಿವಾರಿ, ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ, ಬಿಜೆಪಿ ಯುವ ಮೋರ್ಚಾದ ನೀಲೇಶ್ ಸೋನಿ, ಮಾಜಿ ಮೇಯರ್ ರಾಜೀವ್ ಪಾಟೀಲ್, ಎಂಬಿಎಂಸಿ ವಿರೋಧ ಪಕ್ಷದ ಮಾಜಿ ನಾಯಕ ಪ್ರಮೋದ್ ಸಾವಂತ್ ಮೊದಲಾದವರು ಉಪಸ್ಥಿತರಿದ್ದರು.
ಅನುಷಾ ನಾರಾಯಣ ಶೆಟ್ಟಿ ಪ್ರಾರ್ಥಿಸಿದರು. ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಗೌತಮ್ ಎಸ್. ಶೆಟ್ಟಿ ಸ್ವಾಗತಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್ದಾಸ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ವಂದಿಸಿದರು. ಬಂಟರವಾಣಿ ಗೌರವ ಸಂಪಾದಕ ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿ ವಿಜೇತರ ಹೆಸರು ಘೋಷಿಸಿದರು. ಕರ್ನೂರು ಮೋಹನ್ ರೈ ಸಹಕರಿಸಿದರು.
ಸಾಂಸ್ಕೃತಿಕ ಸ್ಪರ್ಧೆಯನ್ನು ಸಾಹಿಲ್ ರೈ ಮಂಗಳೂರು ನಿರ್ವಹಿಸಿ ದರು. ಸಂಜಯ್ ಶೆಟ್ಟಿ ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಕ್ರೀಡಾಕೂಟವನ್ನು ಆಯೋಜಿಸಲು ಸಹಕರಿಸಿದ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಅರುಣ್ ರೈ, ಯುವ ವಿಭಾಗದ ಕಾರ್ಯಾಧ್ಯಕ್ಷ ನಿಲೇಶ್ ಶೆಟ್ಟಿ ತೆಳ್ಳಾರ್, ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಗೌರವಿಸಲಾಯಿತು.
ಕ್ರೀಡಾ ಸ್ಪರ್ಧೆಯ ರೆಫ್ರಿಗಳಾಗಿ ವಿಜಯ ಶೆಟ್ಟಿ, ವಿಠಲ್ ಆಳ್ವ, ಬಿ. ಬಿ. ಶೆಟ್ಟಿ, ಜಯ ದೇವಾಡಿಗ, ಕಿಶೋರ್ ಶೆಟ್ಟಿ, ರಮೇಶ್ ಕದಂ, ವಾಸು ಮೆಂಡನ್, ಸನ್ಮತ್ ಶೆಟ್ಟಿ, ಅಜಿತ್ ಶೆಟ್ಟಿ, ರಿತೇಶ್ ಶೆಟ್ಟಿ, ಕೇಶವ್ ಆಳ್ವ, ವಿಕಾಸ್ ಚವಾಣ್ ಸಹಕರಿಸಿದರು. ಜಯ ಎ. ಶೆಟ್ಟಿ ಕ್ರೀಡಾಕೂಟದ ನೇತೃತ್ವ ವಹಿಸಿದ್ದರು.
ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ ಐ. ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರ್, ಜತೆ ಕೋಶಾಧಿ ಕಾರಿ ಮಹೇಶ್ ಎಸ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿವೇಕ್ ವಿ. ಶೆಟ್ಟಿ ಸಭಾಕಾರ್ಯಕ್ರಮದ ವೇದಿಕೆಯಲ್ಲಿದ್ದರು.