
ಮಂಗಳೂರು : ಸುರತ್ಕಲ್ ಜನತಾ ಕಾಲನಿಯಲ್ಲಿ ಸೋಮವಾರ ರಾತ್ರಿ ನಡೆದ ಹಲ್ಲೆ ಪ್ರಕರಣದಲ್ಲಿ ಸುಮಾರು 30 ಮಂದಿ ಪಾಲ್ಗೊಂಡಿದ್ದರೂ ಪೊಲೀಸರು ರಾಜಕೀಯ ಪ್ರಭಾವದ ಒತ್ತಡಕ್ಕೆ ಮಣಿದು 7 ಮಂದಿ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ದಾರೆ. ಮಾತ್ರವಲ್ಲದೇ ಘಟನೆಯಲ್ಲಿ ಗಾಯಗೊಂಡವರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಪ್ರಕರಣವನ್ನು ತಿರುಚುವ ಯತ್ನ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಹಿಂದು ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಸಂಜೆ ಸುರತ್ಕಲ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಘಟನೆ ವಿವರ :
ಜನತಾ ಕಾಲನಿ ನಿವಾಸಿ ಅನಿಲ್ ಕುಮಾರ್ ಅವರ ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದ ಗೋದಿಯನ್ನು ಜನತಾ ಕಾಲನಿ ನಿವಾಸಿ ಅಶ್ರಫ್ರವರು ಸಾಕಿದ ಆಡೊಂದು ಬಂದು ತಿನ್ನುತ್ತಿದ್ದ ಸಂದರ್ಭ ಅದನ್ನು ಹೊಡೆದು ಓಡಿಸಿದ ಹಿನ್ನೆಲೆಯಲ್ಲಿ ಎರಡು ತಂಡಗಳ ಮಧ್ಯೆ ವಾದ -ವಿವಾದಗಳು ನಡೆದಿತ್ತು.
ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಜನತಾ ಕಾಲಾನಿ ನಿವಾಸಿ ಮಾಧವ ಪೂಜಾರಿಯವರು ತಮ್ಮ ಮನೆಯ ಮುಂದೆ ಅನಿಲ್ ಕುಮಾರ್ ಜೆಸ್ಸಿ ಚಂದ್ರಕಾಂತ್, ಶಿವ ಅವರೊಂದಿಗೆ ಮಾತು ಕತೆ ನಡೆಸುತ್ತಿದ್ದ ಸಂದರ್ಭ ರಿಯಾಝ್, ಅತಾವುಲ್ಲಾ ರೆಹಮಾನ್, ದಾವೂದ್ ಅಕ್ರಮ್, ಮೊಹಮ್ಮದ್ ಸರ್ಫೂದ್ದಿನ್, ಫಿರೋಜ್ ಸಹಿತಾ ಮೂವತ್ತು ಮಂದಿಯ ತಂಡವು ಅಲ್ಲಿಗೆ ಆಗಮಿಸಿದಾಗ ವಾದ -ವಿವಾದ ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ತಂಡವು ಜಾತಿ ನಿಂದನೆಗೈದು ಜನತಾ ಕಾಲನಿಯ ನಿವಾಸಿಗಳ ಮೇಲೆ ಹಲ್ಲೆ ನಡೆಸುವ ಮೂಲಕ ಕೊಲೆಯತ್ನಕ್ಕೆ ಯತ್ನಿಸಿತ್ತು ಎಂದು ದೂರು ದಾಖಲಾಗಿತ್ತು. ಹಲ್ಲೆಯಿಂದ ಗಾಯಗೊಂಡ ಐವರನ್ನು ಸುರತ್ಕಲ್ನ ಪದ್ಮವಾತಿ ಆಸ್ವತ್ತೆಗೆ ದಾಖಲು ಪಡಿಸಲಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿರುವ ಸುರತ್ಕಲ್ ಠಾಣಾ ಪೋಲಿಸರು ಜನತಾ ಕಾಲನಿ ನಿವಾಸಿಗಳಾದ ರಿಯಾಝ್, ಅತಾವುಲ್ಲಾ ರೆಹಮಾನ್, ದಾವೂದ್ ಅಕ್ರಮ್, ಮೊಹಮ್ಮದ್ ಸರ್ಫೂದ್ದಿನ್, ಫಿರೋಜ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜಾರು ಪಡಿಸಿದ್ದಾರೆ.

ಆದರೆ ಹಲ್ಲೆ ಪ್ರಕರಣದಲ್ಲಿ ಸುಮಾರು 30 ಮಂದಿ ಪಾಲ್ಗೊಂಡಿದ್ದರೂ ರಾಜಕೀಯ ಪ್ರಭಾವದ ಒತ್ತಡಕ್ಕೆ ಮಣಿದ ಪೊಲೀಸರು ಬರೀ 7 ಮಂದಿ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ದಾರೆ. ಮಾತ್ರವಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಹಿಂದೂ ಯುವಕನನ್ನು ವಶಕ್ಕೆ ಪಡೆದಿದ್ದರೆ. ಕೆಲವು ಮಂದಿ ಹಿಂದೂ ಯುವಕರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಅಮಯಾಕ ಹಿಂದೂ ಯುವಕರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ಮುಖಂಡ ಸತ್ಯಜೀತ್ ಸುರತ್ಕಲ್ ಇವರ ನೇತ್ರತ್ವದಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸುರತ್ಕಲ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಸ್ಥಳೀಯ ಶಾಸಕ ಮೊಯ್ದಿನ್ ಬಾವ ಅವರು ಪೊಲೀಸರ ಮೇಲೆ ತಮ್ಮ ರಾಜಕೀಯ ಪ್ರಭಾವ ಬೀರಿದ ಹಿನ್ನೆಲೆಯಲ್ಲಿ ಒತ್ತಡಕ್ಕೆ ಮಣಿದ ಪೊಲೀಸರು ಪ್ರಕರಣವನ್ನು ತಿರುಚುವ ಯತ್ನ ಮಾಡಿದ್ದಾರೆ ಎಂದು ಈ ಸಂದರ್ಭದಲ್ಲಿ ಸತ್ಯಜೀತ್ ಸುರತ್ಕಲ್ ಆರೋಪಿಸಿದ್ದಾರೆ.
ಜನತಾ ಕಾಲನಿ ಹಲ್ಲೆ ಪ್ರಕರಣಕ್ಕೆ ಸಂಬಂದಿಸಿದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಅಮಯಾಕ ಹಿಂದೂ ಯುಅವಕರ ಮೇಲಿನ ಪ್ರಕರಣವನ್ನು ಕೈಬಿಡಬೇಕು. ಇದೀಗ ಪೊಲೀಸ್ ಕಸ್ಟಡಿಯಲ್ಲಿರುವ ಯಾವೂದೇ ಪ್ರಕರಣದಲ್ಲಿ ಭಾಗಿಯಾಗದ ಜೀವನ್ ಎಂಬಾತನನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಬಂದ ಎಸಿಪಿ ಮದನ್ ಗಾಂವ್ಕರ್ ಹಾಗೂ ಸುರತ್ಕಲ್ ಠಾಣಾಧಿಕಾರಿ ಚೆಲುವರಾಜ್ ಅವರು ಪ್ರತಿಭಟನಕಾರರ ಮನವಿ ಸ್ವೀಕರಿಸಿದರು.