ಬೆಂಗಳೂರು: ತನ್ನ ಕಂಪನಿಯಲ್ಲಿ ಕೆಲಸ ಮಾಡುವ ಯುವತಿ ತಲೆನೋವು ಅಂದಿದ್ದಕ್ಕೆ ಬಾಸ್ ವಯಾಗ್ರ ಮಾತ್ರೆ ಕೊಟ್ಟು ಈಗ ಲೈಂಗಿಕ ದೌರ್ಜನ್ಯದ ಕೇಸ್ ಎದುರಿಸುತ್ತಿದ್ದಾನೆ.
ಜಾಲಹಳ್ಳಿಯ ಕರ್ನಾಟಕ ಫೈನಾನ್ಸ್ ಅಂಡ್ ಇನ್ಸ್ವೆಸ್ಟ್ಮೆಂಟ್ಸ್ ಕಂಪನಿಯ ಮ್ಯಾನೇಜರ್ ಮಲ್ಲಪ್ಪ ವಿರುದ್ಧ ಯುವತಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುವ ಯುವತಿ ತಲೆನೋವಿದೆ, ಮಾತ್ರೆ ತೆಗೆದುಕೊಂಡು ಬರುತ್ತೇನೆ ಎಂದು ಬಾಸ್ ಮಲ್ಲಪ್ಪ ಬಳಿ ಹೇಳಿದ್ದಾಳೆ. ಆಗ ಮಲ್ಲಪ್ಪ ಮಾತ್ರೆ ನನ್ನ ಬಳಿಯೇ ಇದೆ ಎಂದು ವಯಾಗ್ರ ಮಾತ್ರೆ ಕೊಟ್ಟಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ.
ಇದರ ಜೊತೆಗೆ ಮ್ಯಾನೇಜರ್ ಮಲ್ಲಪ್ಪ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ನನ್ನ ದುಪ್ಪಟ್ಟಾ ಎಳೆದು ಮೈ ಮುಟ್ಟಲು ಪ್ರಯತ್ನಿಸಿದ್ದಾನೆ. ಹಲವು ಬಾರಿ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದ, ಇದಕ್ಕಾಗಿ ಹಣಕಾಸಿನ ಸಹಾಯ ನೀಡುವುದಾಗಿ, ಒಳ್ಳೆಯ ಹುದ್ದೆ ನೀಡುವುದಾಗಿ ಆಮಿಷವೊಡ್ಡಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಈ ಬಗ್ಗೆ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿಕೊಂಡರುವ ಪೊಲೀಸರು ಆರೋಪಿಗಾಗಿ ಹುಡುಕಾಡುತ್ತಿದ್ದಾರೆ. ಪೀಣ್ಯಾ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾದ ನಂತರ ಮಲ್ಲಪ್ಪ ಪರಾರಿಯಾಗಿದ್ದಾನೆ.