ನವದೆಹಲಿ: ಹಲವು ಅತ್ಯಾಚಾರ ಪ್ರಕರಗಳಿಂದ ಅಪಖ್ಯಾತಿಗೆ ಒಳಗಾಗಿರುವ ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ತಲೆತಗ್ಗಿಸುವ ಪ್ರಕರಣ ನಡೆದಿದೆ. 17 ವರ್ಷದ ಬಾಲಕಿಯನ್ನು ಅಪಹರಿಸಿದ ಮೂವರು ಆರೋಪಿಗಳು ಆಕೆಯ ಮೇಲೆ ಗ್ಯಾಂಗ್ರೇಪ್ ಎಸಗಿರುವ ಘಟನೆ ನಡೆದಿದೆ.
ಘಟನೆ ನಡೆದಿರುವುದು ಪೂರ್ವ ದೆಹಲಿಯ ಜಗತ್ಪುರಿ ಪ್ರದೇಶದಲ್ಲಿ. ತಮ್ಮ ಸಾಕುನಾಯಿ ಹುಡುಕುವ ನೆಪದಲ್ಲಿ ಬಾಲಕಿಯ ಮನೆಗೆ ಬಂದ ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಸ್ಥಳದಿಂದ ಪರಾರಿಯಾಗಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಬಾಲಕಿ ಮನೆಯಲ್ಲಿ ಸಹೋದರಿ ಹಾಗೂ ಭಾವನೊಂದಿಗೆ ವಾಸವಾಗಿದ್ದಳು. ಅಕ್ಕ – ಭಾವ ಇಲ್ಲದ ಸಮಯದಲ್ಲಿ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿ ನಂತರ ಬಾಲಕಿಗೆ ಕೋಣೆಯಲ್ಲಿ ಲಾಕ್ ಮಾಡಿ ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.