ರಾಷ್ಟ್ರೀಯ

ಬೆಂಗಳೂರಲ್ಲಿ ಅಲ್ ಖೈದಾ ಶಂಕಿತ ಉಗ್ರನ ಬಂಧನ

Pinterest LinkedIn Tumblr

arrested

ದೆಹಲಿ/ಬೆಂಗಳೂರು: ಉಗ್ರ ಸಂಘಟನೆ ಅಲ್‌ ಖೈದಾ ಜತೆ ನಂಟು ಹೊಂದಿರುವ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ಶಂಕಿತ ಉಗ್ರನೊಬ್ಬನನ್ನು ಬಂಧಿಸಲಾಗಿದೆ.

ಬೆಂಗಳೂರಿನಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಸೇರಿ ಹಲವಾರು ಭಯೋತ್ಪಾದಕ ಸಂಘಟನೆಗಳ ಪರವಾಗಿ ಚಟುವಟಿಕೆಗಳು ನಡೆಯುತ್ತಿವೆ ಎಂಬ ಇತ್ತೀಚಿನ ಗುಪ್ತಚರ ಮಾಹಿತಿಯ ಬೆನ್ನಲ್ಲೇ ಶಂಕಿತ ಉಗ್ರನೊಬ್ಬನ ಬಂಧನ ಸುದ್ದಿ ಆತಂಕ ಸೃಷ್ಟಿಸಿದೆ.

ಬಂಧಿತನನ್ನು ಮೌಲಾನಾ ಅನ್ಸರ್‌ ಶಾ ಎಂದು ಗುರುತಿಸ ಲಾಗಿದ್ದು, ಈತ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಮದ್ರಸಾವೊಂದರಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಅನ್ಸರ್‌ ಶಾನನ್ನು ಬುಧವಾರ ರಾತ್ರಿ ದೆಹಲಿ ಪೊಲೀಸರ ವಿಶೇಷ ತಂಡ ಬಂಧಿ ಸಿದ್ದು, ಗುರುವಾರ ಆತನನ್ನು ದೆಹಲಿಯ ಪಟಿಯಾಲ ಹೌಸ್‌ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ನ್ಯಾಯಾಲಯವು ಅನ್ಸರ್‌ ಶಾ ನನ್ನು ಇದೇ ತಿಂಗಳ 20ನೇ ತಾರೀಖೀನವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿದೆ ಎಂದು ದೆಹಲಿ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಸದ್ಯಕ್ಕೆ ಅನ್ಸರ್‌ನನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ತನಿಖೆಯ ಬಳಿಕವಷ್ಟೇ ಹೆಚ್ಚಿನ ವಿವರ ಬಹಿರಂಗಗೊಳ್ಳಬೇಕಿದೆ’ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿದಾಗ, ಬಂಧನ ಬಗ್ಗೆ ತಮಗೆ ಯಾವ ಮಾಹಿತಿಯೂ ಇಲ್ಲ ಎಂದಿದ್ದಾರೆ.

„ ಖೈದಾದಲ್ಲಿ ಸಕ್ರಿಯ?:
ಬಂಧಿತ ಅನ್ಸರ್‌ ಶಾ ಭಾರತೀಯ ಉಪಖಂಡದ ಅಲ್‌ ಖೈದಾ ಜಾಲದ ಸಕ್ರಿಯ ಕಾರ್ಯಕರ್ತನಾ ಗಿದ್ದು, ಉಗ್ರವಾದಿ ಸಂಘಟನೆಗೆ ಹಣಕಾಸು ಮತ್ತಿತರ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೊಡಗಿ ಕೊಂಡಿದ್ದ. ಅಲ್ಲದೆ, ಸಾಮಾಜಿಕ ಜಾಲತಾಣದ ಮೂಲಕ ಮೂಲ ಭೂತವಾದದ ಪ್ರಚಾರ ನಡೆಸಿ, ಯುವಕರನ್ನು ಆಕರ್ಷಿಸುತ್ತಿದ್ದ. ಉಗ್ರ ವಾದಕ್ಕೆ ಪ್ರಚೋದನೆ ನೀಡುತ್ತಿದ್ದ. ದೇಶಾದ್ಯಂತ ಇದೇ ರೀತಿಯ ಜಾಲ ಕಾರ್ಯನಿರ್ವ ಹಿಸುತ್ತಿದ್ದು, ಬಂಧಿತ ವ್ಯಕ್ತಿ ಇದರ ಭಾಗವಾಗಿದ್ದ ಎಂದು ಹೇಳಲಾಗುತ್ತಿದೆ.
-ಉದಯವಾಣಿ

Write A Comment