
ಹೈದರಾಬಾದ್: ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ಪರಿಣಾಮ ಅಮೆರಿಕದಲ್ಲಿ ಓದುತ್ತಿದ್ದ ಭಾರತೀಯ ಮೂಲದ ಯುವಕನೋರ್ವ ತಾನಿದ್ದ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಪದವಿ ಮುಗಿಸಿ ಉನ್ನತ ವ್ಯಾಸಾಂಗಕ್ಕಾಗಿ ಕೆಲ ತಿಂಗಳ ಹಿಂದಷ್ಟೇ ಅಮೆರಿಕ ತೆರಳಿದ್ದ ಶಿವಾ ಕರಣ್ ಎಂಬ ವಿದ್ಯಾರ್ಥಿಯೇ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ.
ಹೈದರಾಬಾದ್‌ನ ಇಂದಿರಾನಗರ ನಿವಾಸಿಯಾದ ಶಿವ ಕರಣ್, ಚಾಪೆಲ್ ಹಿಲ್‌ನ ನಾರ್ಥ್ ಕರೋಲಿನಾ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಾಂಗ ಮಾಡುತ್ತಿದ್ದ ಎನ್ನಲಾಗಿದೆ.