ಕರ್ನಾಟಕ

ಜಮೀರ್ ಅಹ್ಮದ್ ಸಿಎಂ ಭೇಟಿ: ಜೆಡಿಎಸ್ ನಲ್ಲಿ ತಲ್ಲಣ, ಕಾಂಗ್ರೆಸ್ ನಲ್ಲಿ ಸಂಚಲನ

Pinterest LinkedIn Tumblr

1cm-new

ಬೆಂಗಳೂರು: ಚಾಮರಾಜ ಪೇಟೆ ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ

ವಿಧಾನಪರಿಷತ್ ಚುನಾವಣೆ ಸಂಬಂಧ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾತುಕತೆಗೆ ಮುಂದಾಗಿ ನಂತರ ಮುಖ್ಯಮಂತ್ರಿ ಬಳಿ ಕ್ಷಮೆ ಕೇಳಿದ್ದ ಜಮೀರ್ ಇದೀಗ ಸಿಎಂ ಭೇಟಿ ಮಾಡಿರುವುದು ಜೆಡಿಎಸ್ ಪಾಳೆಯದಲ್ಲಿ ಕೊಂಚ ತಲ್ಲಣ ಮೂಡಿಸಿದೆ.

ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ , ಪ್ರತಿ ವರ್ಷ ನಾವು ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಅದೇ ರೀತಿ ಈ ವರ್ಷವೂ ಆಚರಿಸಲಿರುವ ಕನ್ನಡ ರಾಜ್ಯೋತ್ಸವಕ್ಕೆ ಸಿಎಂ ಅವರಿಗೆ ಆಹ್ವಾನ ನೀಡಲು ಬಂದಿದ್ದೆ.  ಪ್ರತಿ ಬಾರಿಯೂ ಸಿಎಂ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ಈ ಬಾರಿಯೂ ಅದೇ ರೀತಿ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Write A Comment