ರಾಷ್ಟ್ರೀಯ

ಬಾಬ್ರಿ ಮಸೀದಿ ಧ್ವಂಸ 23ನೇ ವರ್ಷಾಚರಣೆ: ಅಯೋಧ್ಯೆಯಲ್ಲಿ ಭಾರಿ ಭಧ್ರತೆ

Pinterest LinkedIn Tumblr

b

ಅಯೋಧ್ಯೆ: ಬಾಬ್ರಿ ಮಸೀದಿ ಧ್ವಂಸದ 23ನೇ ವಾರ್ಷಿಕಾಚರಣೆಯ ಹಿನ್ನೆಲೆಯಲ್ಲಿ, ಫಾಜಾಬಾದ್ ಮತ್ತು ಅಯೋಧ್ಯೆಯಲ್ಲಿ ಜಿಲ್ಲಾಡಳಿತ ಭಾರಿ ಪೊಲೀಸ್ ಬಂದೋಬಸ್ತ್ ಮಾಡಿದ್ದಲ್ಲದೇ ಪ್ಯಾರಾಮಿಲಿಟರಿ ಪಡೆಗಳನ್ನು ಭದ್ರತೆಗಾಗಿ ನಿಯೋಜಿಸಿದೆ.

ಅಯೋಧ್ಯೆ ಮತ್ತು ನೆರೆಯ ಜಿಲ್ಲೆಯಾದ ಫೈಜಾಬಾದ್‌ನಲ್ಲಿ ಶಾಂತಿ, ಸಾಮರಸ್ಯತೆಯನ್ನು ಕಾಪಾಡಲು, ಡಿ.6 ರಂದು ವ್ಯಾಪಕ ಬಿಗಿ ಭದ್ರತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ನಗರದ ಪ್ರಮುಖ ರಸ್ತೆಗಳಲ್ಲಿ ಜಿಲ್ಲಾಧಿಕಾರಿ ಅನಿಲ್ ಧಿಂಗ್ರಾ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಗುಪ್ತಾ ನೇತೃತ್ವದಲ್ಲಿ ಪ್ಯಾರಾಮಿಲಿಟರಿ ಪಡೆಗಳು ಪಥಸಂಚಲನ ನಡೆಸಿ ಜನತೆಯ ಆತಂಕ ದೂರು ಮಾಡಲು ಪ್ರಯತ್ನಿಸಿದರು ಎಂದು ಮೂಲಗಳು ತಿಳಿಸಿವೆ.

ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಭಯ ಸಮುದಾಯಗಳ ನಾಯಕರೊಂದಿಗೆ ಚರ್ಚೆ ನಡೆಸಿದ ಡಿಸಿ ಮತ್ತು ಎಸ್‌ಪಿ, ಸಾಮಾಜಿಕ ತಾಣಗಳಲ್ಲಿ ಬರುವ ಉಹಾಪೋಹ ವರದಿಗಳಿಂದ ದೂರವಿದ್ದು, ಶಾಂತಿಯುತ ವಾತಾವರಣಕ್ಕೆ ಸಹಕರಿಸುವಂತೆ ಕೋರಿದರು ಎನ್ನಲಾಗಿದೆ.

ಅಯೋಧ್ಯೆ ಮತ್ತು ಫೈಜಾಬಾದ್ ನಗರಗಳಲ್ಲಿ ಈಗಾಗಲೇ ಕೆಲ ಕಿಡಿಗೇಡಿಗಳನ್ನು ಬಂಧಿಸಲಾಗಿದ್ದು, ಅಹಿತಕರ ಘಟನೆ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಗುಪ್ತಾ ಎಚ್ಚರಿಸಿದ್ದಾರೆ.

Write A Comment