ರಾಷ್ಟ್ರೀಯ

ಬಾಬಾ ರಾಮದೇವ್ ಆಟಾ ನೂಡಲ್ಸ್‌ನಲ್ಲಿ ಕೀಟಗಳು ಪತ್ತೆ

Pinterest LinkedIn Tumblr

ramdev

ನವದೆಹಲಿ: ಯೋಗಾ ಗುರು ಬಾಬಾ ರಾಮದೇವ್ ಕನಸಿನ ಕೂಸಾದ ಪತಂಜಲಿ ಆಟಾ ನೂಡಲ್ಸ್‌ ಪ್ಯಾಕೆಟ್‌ಗಳಲ್ಲಿ ಕೀಟಗಳು ಕಂಡುಬಂದಿದ್ದು ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ.

ಮಾಧ್ಯಮ ವರದಿಗಳ ಪ್ರಕಾರ ಹರಿಯಾಣಾದ ಜಿಂದ್ ಜಿಲ್ಲೆಯಲ್ಲಿ ಆಟಾ ನೂಡಲ್ಸ್ ಖರೀದಿಸಿದ ಗ್ರಾಹಕರಿಗೆ ಆಘಾತ ಕಾದಿತ್ತು, ಸೀಲ್ಡ್ ಪ್ಯಾಕ್‌ನೊಳಗೆ ಕೀಟುಗಳು ಕಂಡು ಬಂದಿರುವುದನ್ನು ನೋಡಿ ದೂರು ನೀಡಿದ್ದಾರೆ.

ಪತಂಜಲಿ ಆಟಾ ನೂಡಲ್ಸ್ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ದೂರು ನೀಡಲು ಆಟಾ ನೂಡಲ್ಸ್ ಖರೀದಿಸಿದ ಗ್ರಾಹಕ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನೆಸ್ಟ್ಲೆ ಮ್ಯಾಗಿ ನೂಡಲ್ಸ್ ನಿಷೇಧ ಹೇರಿದ ನಂತರ ಬಾಬಾ ರಾಮದೇವ್ ತಮ್ಮ ಸ್ವಂತ ಬ್ರಾಂಡ್ ಪತಂಜಲಿ ಆಟಾ ನೂಡಲ್ಸ್ ಬಿಡುಗಡೆಗೊಳಿಸಿದ್ದರು.

Write A Comment