ರಾಷ್ಟ್ರೀಯ

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗುವಂತೆ ಆಹ್ವಾನವಿತ್ತು: ಅಂಬಿಕಾ ಸೋನಿ

Pinterest LinkedIn Tumblr

c-fi

ಚಂಡೀಗಢ್: ಪಂಜಾಬ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾಗುವಂತೆ ಹೈಕಮಾಂಡ್ ಆಹ್ವಾನ ನೀಡಿತ್ತು. ಆದರೆ, ನನಗಿಂತ ಹೆಚ್ಚಾಗಿ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಸೂಕ್ತ ಎನ್ನುವ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗಿದೆ ಎಂದು ಕಾಂಗ್ರೆಸ್ ನಾಯಕಿ ಅಂಬಿಕಾ ಸೋನಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಪಿಪಿಸಿಸಿ ಅಧ್ಯಕ್ಷ ಸ್ಥಾನವಹಿಸಿಕೊಳ್ಳುವಂತೆ ಕೋರಿದ್ದರು. ಪಕ್ಷದ ಹೈಕಮಾಂಡ್ ಆದೇಶಕ್ಕೆ ಸದಾ ಬದ್ಧವಾಗಿದ್ದೇನೆ.ಆದರೆ, ನನಗಿಂತ ಅಮರಿಂದರ್ ಸಿಂಗ್ ಸೂಕ್ತ ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯಸ್ಥೆ ಸೋನಿ ತಿಳಿಸಿದ್ದಾರೆ.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪಂಜಾಬ್‌ಗೆ ಭೇಟಿ ನೀಡಿ ಶಾಸಕರೊಂದಿಗೆ ಚರ್ಚೆ ನಡೆಸಿದಂ ನಂತರವೂ ಅಮರಿಂದರ್ ಸಿಂಗ್ ಸೂಕ್ತ ವ್ಯಕ್ತಿ ಎನ್ನುವ ಅಭಿಪ್ರಾಯ ಹೊರಬಂದಿತ್ತು ಎಂದು ತಿಳಿಸಿದ್ದಾರೆ.

ಮೊದಲಿಗೆ ಅಂಬಿಕಾ ಸೋನಿ ಪಂಜಾಬ್ ಕಾಂಗ್ರೆಸ್ ಪ್ರದೇಶ ಸಮಿತಿಯ ಅಧ್ಯಕ್ಷರಾಗಲಿದ್ದಾರೆ ಎನ್ನುವ ವರದಿಗಳು ಪ್ರಕಟವಾಗಿದ್ದವು. ಆದರೆ, ಅಧಿಕೃತ ಆದೇಶ ಹೊರಬಂದಿರಲಿಲ್ಲ. ಅಂತಿಮವಾಗಿ ಅಮರಿಂದರ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ.

ಪಂಜಾಬ್ ಜನತೆ ಅಮರಿಂದರ್ ಅವರ ಧೃಡ ನಿಲುವುಗಳಿಗೆ ಮಾರುಹೋಗಿದ್ದಾರೆ. ಅಂತಾರಾಜ್ಯ ನೀರು ಹಂಚಿಕೆ ವಿವಾದದಲ್ಲಿ ಅಮರಿಂದರ್ ನಿಲುವಿಗೆ ರಾಜ್ಯದ ಜನತೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು ಎಂದು ಕಾಂಗ್ರೆಸ್ ನಾಯಕಿ ಅಂಬಿಕಾ ಸೋನಿ ತಿಳಿಸಿದ್ದಾರೆ.

Write A Comment