ಕನ್ನಡ ವಾರ್ತೆಗಳು

ನಿರಂತರ ಅಪಘಾತ ಹಿನ್ನೆಲೆ : ನಂತೂರು ಜಂಕ್ಷನ್/ಕೆಪಿಟಿ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹ

Pinterest LinkedIn Tumblr

Kpt_Bridge_Protest

ಮಂಗಳೂರು, ಡಿ.2: ನಂತೂರು ಜಂಕ್ಷನ್ ಮತ್ತು ಕೆಪಿಟಿ ಜಂಕ್ಷನ್‌ಗಳಲ್ಲಿ ನಡೆಯುತ್ತಿರುವ ಅಪಘಾತಗಳಿಂದ ಅಮಾಯಕರು ಬಲಿಯಾಗುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಈ ಜಂಕ್ಷನ್‌ಗಳಿಗೆ ಸರಕಾರ ಈ ಕೂಡಲೇ ಮೇಲ್ಸೇತುವೆ ನಿರ್ಮಿಸ ಬೇಕು ಎಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸುನೀಲ್‌ಕುಮಾರ್ ಬಜಾಲ್ ಆಗ್ರಹಿಸಿದ್ದಾರೆ.

ಕೆಪಿಟಿ ಜಂಕ್ಷನ್ ಹೆದ್ದಾರಿ ಮೇಲ್ಸೇತುವೆಗೆ ಒತ್ತಾಯಿಸಿ ಸಿಪಿಎಂ ವತಿಯಿಂದ ಮಂಗಳವಾರ ನಡೆದ ಪ್ರತಿಭಟನಾ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಇಲ್ಲಿ ಪ್ರತಿದಿನ ಗಂಟೆಗಟ್ಟಲೆ ವಾಹನ ಸಂಚಾರ ಬಂದ್ ಆಗುತ್ತಿದೆ. ಇಷ್ಟೆಲ್ಲ ತೊಂದರೆಗಳನ್ನು ಜನ ಸಾಮಾನ್ಯರು ಅನುಭವಿಸುತ್ತಿದ್ದರೂ ಜನಪ್ರತಿನಿಗಳು ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಿಪಿಎಂ ಮಂಗಳೂರು ನಗರ ಉತ್ತರ ಸಮಿತಿ ಕಾರ್ಯದರ್ಶಿ ಕೃಷ್ಣಪ್ಪಕೊಂಚಾಡಿ ಮಾತನಾಡಿ, ಕೆಪಿಟಿ ಜಂಕ್ಷನ್ ಮತ್ತು ನಂತೂರು ಜಂಕ್ಷನ್‌ಗಳು ಮಂಗಳೂರು ಮಹಾನಗರದ ಹೆಬ್ಬಾಗಿಲು. ಭಾರತದ ಪಶ್ಚಿಮ ಕರಾವಳಿಯ 6ನೆ ಉದ್ದದ ಪ್ರಮುಖ ಹೆದ್ದಾರಿ ಹಾದು ಹೋಗುತ್ತಿದೆ. ಕರಾವಳಿ ಮಾತ್ರವಲ್ಲದೆ ಕೇರಳದ ಅರ್ಧಭಾಗದ ಜನತೆ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೇ ಅವಲಂಬಿಸಿದ್ದಾರೆ.

ವೈದ್ಯಕೀಯ ಸೇವೆ ಗಳಿಗಾಗಿ, ಸರಕಾರಿ ಮತ್ತು ವಾಣಿಜ್ಯ ಸೇವೆಗಳಿಗಾಗಿ ಈ ಎರಡು ಜಂಕ್ಷನ್‌ಗಳನ್ನು ಕ್ರಮಿಸಲೇಬೇಕಾಗಿದೆ. ಹಾಗಾಗಿ ಈ ಜಂಕ್ಷನ್‌ಗಳಿಗೆ ಮೇಲ್ಸೇತುವೆ ನಿರ್ಮಿಸುವ ಮೂಲಕ ನಗರದ ಪ್ರಮುಖ ಸಂಚಾರ ಸಂಬಂ ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿದರು.

ಸಭೆಯನ್ನುದ್ದೇಶಿಸಿ ದಲಿತ ಮುಖಂಡ ಲಿಂಗಪ್ಪ ನಂತೂರು, ಹೋರಾಟ ಸಮಿತಿಯ ವಿಭಾಗೀಯ ಸಂಚಾಲಕ ಸಂತೋಷ್ ಶಕ್ತಿನಗರ ಮೊದಲಾದವರು ಮಾತನಾಡಿದರು. ಯೆಯ್ಯಡಿ- ಕೊಂಚಾಡಿ ಸಿಪಿಎಂ ಶಾಖಾ ಕಾರ್ಯದರ್ಶಿ ನವೀನ್ ಬೊಲ್ಪುಗುಡ್ಡೆ ಸ್ವಾಗತಿಸಿದರು. ನಂತೂರು ಸಿಪಿಎಂ ಶಾಖಾ ಮುಖಂಡ ಥಾಮಸ್ ರೋಡ್ರಿಗಸ್ ವಂದಿಸಿದರು

Write A Comment