ಕನ್ನಡ ವಾರ್ತೆಗಳು

ಕಾಡಿನಲ್ಲಿ ಸಿಕ್ಕಿದ ಅಸ್ಥಿಪಂಜರದ ಗುರುತು ಪತ್ತೆ : ಕೊಲೆ ಶಂಕೆ..?

Pinterest LinkedIn Tumblr

Dead_Body_Found

ಸುಬ್ರಹ್ಮಣ್ಯ, ಡಿ.2: ಸುಬ್ರಹ್ಮಣ್ಯ ಸಮೀಪದ ಮೀಸಲು ಅರಣ್ಯದಲ್ಲಿ ಸೋಮವಾರ ಅರಣ್ಯ ಇಲಾಖೆಯ ಸಿಬ್ಬಂದಿಗೆ ಕಂಡುಬಂದ ಅಪರಿಚಿತ ಗಂಡಸಿನ ಅಸ್ಥಿಪಂಜರ ಸ್ಥಳೀಯ ಅರ್ಗುಡಿ ನಿವಾಸಿ ತಿರುಮಲೇಶ್ವರ(23)ಎಂಬಾತನದೆಂದು ಶಂಕಿಸಲಾಗಿದೆ.

ಸೋಮವಾರ ಕಂಡು ಬಂದ ಅಪರಿಚಿತ ಗಂಡಸಿನ ಅಸ್ಥಿಪಂಜರ ಹಾಗೂ ತಲೆಬುರುಡೆ ದೊರೆತ ಸ್ಥಳಕ್ಕೆ ಮಂಗಳೂರಿನ ಪ್ಲೊರೊನಿಕ್ಸ್ ತಂಡದ ಅಕಾರಿಗಳಾದ ಡಾ. ಅರುಣ್,ಡಾ.ಭುವನೇಶ್ವರ ಪೊಲೀಸರ ಸಮ್ಮುಖದಲ್ಲಿ ಮಂಗಳವಾರ ಭೇಟಿ ನೀಡಿ ಶವದ ಮಹಜರು ನಡೆಸಿದರು.

ಈ ವೇಳೆ ಅಸ್ಥಿಪಂಜರ ದೊರೆತ ಸ್ಥಳದ ಪಕ್ಕದಲ್ಲಿ ಮರವೊಂದರಲ್ಲಿ ನೇಣಿಗೆ ಬಳಸಿದ ರೀತಿಯಲ್ಲಿ ಹಗ್ಗ ಕಂಡುಬಂದಿದೆ. ಮರದ ಅಡಿ ಜಾಗದ ಪಕ್ಕದಲ್ಲಿ ಚಪ್ಪಲಿ, ಎಲುಬು, ಹಾಗೂ ಬಟ್ಟೆಯ ತುಂಡುಗಳು ಪತ್ತೆಯಾಗಿವೆ. ಸ್ವಲ್ಪದೂರದಲ್ಲಿ ತಲೆಬುರುಡೆ ಗೋಚರಿಸಿದೆ.
ಸ್ಥಳದಲ್ಲಿ ದೊರೆತ ಅಸ್ಥಿಪಂಜರಗಳ ತುಣುಕುಗಳನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲು ಪ್ಲೊರೊನಿಕ್ಸ್ ತಂಡದ ಅಕಾರಿಗಳು ಕೊಂಡೊಯ್ದಿದ್ದಾರೆ.

ಪ್ರಕರಣಕ್ಕೆ ಸಂಬಂಸಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಕಾರಿ ತ್ರಿಮೂರ್ತಿ, ಕಂದಾಯ ಇಲಾಖೆಯ ನಿರೀಕ್ಷಕ ದೀಪಕ್ , ಸುಬ್ರಹ್ಮಣ್ಯ ಠಾಣೆಯ ಸಹಾಯಕ ಉಪನಿರೀಕ್ಷಕ ಐತ್ತು ನಾಯ್ಕ, ಪೊಲೀಸ್ ಸಿಬ್ಬಂದಿ ಉಮೇಶ್ , ಸಂಧ್ಯಾಮಣಿ, ಚಂದ್ರಶೇಖರ್, ಚಂದ್ರಶೇಖರ ಉಳುವಾರು, ನಾರಾಯಣ ಪಾಟಾಳಿ, ಆರೋಗ್ಯ ಕೇಂದ್ರದ ಗುಡ್ಡಪ್ಪ ಸ್ಥಳದಲ್ಲಿದ್ದರು.

ಕೊಲೆ ಶಂಕೆ..?

ತಿರುಮಲೇಶ್ವರ ಕಾಣೆಯಾದ ಬಗ್ಗೆ ಆತನ ಸಂಬಂಕರು ಯಾರೂ ಕೂಡ ಈತ ಪೊಲೀಸ್ ಠಾಣೆಗೆ ದೂರು ನೀಡಿರಲಿಲ್ಲ. ಒಂಟಿಯಾಗಿ ವಾಸವಾಗಿದ್ದ ವೇಳೆ ತಿರುಮಲೇಶ್ವರ ವಾಸಿಸುವ ಮನೆಯ ಪಕ್ಕದ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ. ಆ ಮಹಿಳೆ ಜತೆ ಹೆಚ್ಚು ಸಲುಗೆಕೂಡ ಹೊಂದಿದ್ದ ಬಗ್ಗೆ ಸ್ಥಳೀಯರು ಒಂದಷ್ಟು ಅನುಮಾನಗಳನ್ನು ವ್ಯಕ್ತಪಡಿಸುತ್ತಾರೆ. ಅಸ್ಥಿಪಂಜರ ದೊರೆತ ಸ್ಥಳದಲ್ಲಿ ದೊರೆತ ಚಪ್ಪಲಿಯು ಈತನದ್ದು ಅಲ್ಲ ಎಂಬ ಅಭಿಪ್ರಾಯವಿದೆ.

ಸ್ಥಳದಲ್ಲಿ ದೊರೆತ ಕೆಲ ಕುರುಹುಗಳ ಆಧಾರದಲ್ಲಿ ಈ ಅಸ್ಥಿಪಂಜರವು ಬುಡಕಟ್ಟು ಜನಾಂಗದ ಅರ್ಗುಡಿಯ ತಿರುಮಲೇಶ್ವರ ಎಂಬ ವ್ಯಕ್ತಿಯದ್ದಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ತಿರುಮಲೇಶ್ವರ ಅರ್ಗುಡಿಯ ದಿ.ದಾಸಪ್ಪ ಎಂಬವರ ಪುತ್ರ. ಈತನ ತಂದೆ ತಾಯಿಗಳಿಬ್ಬರೂ ಅನಾರೋಗ್ಯಕ್ಕೆ ತುತ್ತಾಗಿ ಈ ಹಿಂದೆಯೇ ಮೃತಪಟ್ಟಿದ್ದು, ಇದ್ದ ಒಬ್ಬಾತ ಸಹೋದರ ಕೆಲ ವರ್ಷಗಳ ಹಿಂದೆ ಆತ್ಮಹತ್ಯೆಗೈದಿದ್ದ. ಅನಂತರದ ದಿನಗಳಲ್ಲಿ ಏಕಾಂಗಿಯಾಗಿದ್ದ ತಿರುಮಲೇಶ್ವರ ಕೂಲಿ ಕೆಲಸ ನಿರ್ವಹಿಸುತ್ತ ಕಾಲಕಳೆಯುತ್ತಿದ್ದ. ಆಪರೂಪಕ್ಕೆ ಮನೆಗೆ ಬರುತ್ತಿದ್ದ. ಇತ್ತೀಚಿನ ಕೆಲ ಸಮಯ ಗಳಿಂದ ಈತ ಕಾಣೆಯಾಗಿದ್ದ.

Write A Comment