ಅಂತರಾಷ್ಟ್ರೀಯ

ಇಲ್ಲೊಂದಿದೆ ವಿಚಿತ್ರ ಸರೋವರ ! ನೀರನ್ನು ಮುಟ್ಟಿದರೆ ಪಕ್ಷಿಗಳು ಕಲ್ಲಾಗುತ್ತೆ! ಏನಿದು ವಿಚಿತ್ರ …ಇಲ್ಲಿದೆ ವರದಿ…

Pinterest LinkedIn Tumblr

Calcified-Fish-Eagle

ಉತ್ತರ ತಾಂಜಾನಿಯಾ: ಪ್ರಕೃತಿಯ ಒಡನಾಟದೊಂದಿಗೆ ಜೀವಿಸುವ ಪ್ರಾಣಿ ಪಕ್ಷಿಗಳು ನೀರನ್ನು ಮುಟ್ಟಿ ಕಲ್ಲಾಗಿವೆ ಎಂದರೆ ಒಂದು ಕ್ಷಣ ಆಶ್ಚರ್ಯವಾಗದೇ ಇರದು. ಆದರೆ ಉತ್ತರ ತಾಂಜಾನಿಯಾದಲ್ಲಿ ಪಕ್ಷಿಗಳು ನೀರಿನಿಂದ ಕಲ್ಲಾಗಿರುವ ವಿಚಿತ್ರ ಘಟನೆ ನಡೆದಿದೆ.

ನಿಕ್ ಬ್ರಾಂಟ್ ಎಂಬುವವರು ತಮ್ಮ `ಅಕ್ರಾಸ್ ದಿ ರ್ಯಾವೇಜ್ಡ್ ಲ್ಯಾಂಡ್’ ಎಂಬ ಪುಸ್ತಕದಲ್ಲಿ ಕಲ್ಲಾಗಿರುವ ಪಕ್ಷಿಗಳ ಚಿತ್ರಗಳನ್ನು ದಾಖಲಿಸಿದ್ದಾರೆ. ಅವರು ಫೋಟೋಗ್ರಫಿಗೆಂದು ಉತ್ತರ ತಾಂಜಾನಿಯಾದ ನಾರ್ಟಾನ್ ನದಿಯ ಬಳಿ ಹೋದಾಗ ಎಷ್ಟು ಹೊತ್ತಾದರೂ ಅಲುಗಾಡದೇ ತಟಸ್ಥವಾಗಿ ಕುಳಿತ ಪಕ್ಷಿಗಳನ್ನು ನೋಡಿ ನಿಬ್ಬೆರಗಾಗಿದ್ದಾರೆ. ಕುತೂಹಲದಿಂದ ಹತ್ತಿರ ಹೋಗಿ ನೋಡಿದಾಗ ಅನೇಕ ಪಕ್ಷಿಗಳು ಮತ್ತು ಬಾವಲಿಗಳು ಕಲ್ಲಿನಂತಾಗಿರುವುದು ಕಂಡು ಬಂದಿದೆ. ಅವನ್ನು ಮತ್ತೆ ಜೀವಂತ ಸ್ಥಿತಿಯಲ್ಲಿರುವಂತೆ ಕೂರಿಸಿ ಫೋಟೋ ಕ್ಲಿಕ್ಕಿಸಿದ್ದಾರೆ ಬ್ರಾಂಟ್.

ಈ ಜೀವಿಗಳು ಹೀಗೆ ನಿಗೂಢವಾಗಿ ಸಾಯುತ್ತಿರುವುದಕ್ಕೆ ಕಾರಣವೇನು ಎಂಬುದು ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ನೀರಿನಲ್ಲಿರುವ ಅತಿಯಾದ ಉಪ್ಪು ಮತ್ತು ಸೋಡಿಯಂ ಅಂಶವೇ ಇದಕ್ಕೆ ಕಾರಣ. ಸೋಡಿಯಂ ಮತ್ತು ಉಪ್ಪಿನ ಪ್ರಮಾಣ ಹೆಚ್ಚಾಗಿರುವುದರಿಂದ ನೀರಿನ ಪಿಹೆಚ್ ಮಟ್ಟ 10.5 ನಷ್ಟು ಹೆಚ್ಚಾಗಿದ್ದು ಪಕ್ಷಿಗಳು ನೀರನ್ನು ಸ್ಪರ್ಶಿಸಿದ ನಂತರ ಅವು ಕಲ್ಲಾಗುತ್ತವೆ ಎಂದು ಹೇಳಲಾಗುತ್ತಿದೆ. ಈ ಅತಿಯಾದ ಶುಷ್ಕತೆಯಿಂದಲೇ ಪಕ್ಷಿಗಳು ಉಪ್ಪು ಹಾಕಿ ಸಂರಕ್ಷಿಸಲ್ಪಟ್ಟ ಒಣ ಮೀನಿನಂತೆ ಕಾಣುತ್ತಿರುವುದು ಅಚ್ಚರಿ ಮೂಡಿಸಿದೆ.

Write A Comment