ಮಂಗಳೂರು, ನ.17: ಚೈಲ್ಡ್ಲೈನ್ ಮಂಗಳೂರು -1098 ವತಿಯಿಂದ ಜನ ಜಾಗೃತಿಗಾಗಿ ಹಮ್ಮಿಕೊಂಡಿರುವ ‘ಚೈಲ್ಡ್ಲೈನ್ ಸೆ ದೋಸ್ತಿ ಸಪ್ತಾಹ-2015 ಕಾರ್ಯಕ್ರಮದ ಉಧ್ಘಾಟನೆಯನ್ನು ಸೋಮವಾರ ಸಂತ ಮೇರಿ ಹಿರಿಯ ಪ್ರಾಥಮಿಕ ಶಾಲೆ ಜೆಪ್ಪು ಇಲ್ಲಿ ನಡೆಯಿತು.
‘ಚೈಲ್ಡ್ಲೈನ್ ಸೆ ದೋಸ್ತಿ ಸಪ್ತಾಹ-2015 ‘ ಕಾರ್ಯಕ್ರಮದ ಉಧ್ಘಾಟನೆಯನ್ನು ಗೌರವಾನ್ವಿತ ಶ್ರೀಮತಿ ಕೃಪ ಆಳ್ವ, ಅಧ್ಯಕ್ಷರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ,ಬೆಂಗಳೂರು ಇವರು ನೆರವೆರಿಸಿ ಮಾತನಾಡುತ್ತ ಇವತ್ತು ಮಕ್ಕಳು ತಮ್ಮ ನಡೆಯುತ್ತಿರುವ ದೈಹಿಕ, ಮಾನಸಿಕ ಹಾಗೂ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದ್ದರೆ ಅದನ್ನು ತಮ್ಮಲ್ಲೆ ಸಹಿಸಿಕೊಳ್ಳದೆ ಅದನ್ನು ಸಂಬಂಧಪಟ್ಟವರಿಗೆ ಮುಕ್ತವಾಗಿ ತಿಳಿಸಬೇಕು, ಮಕ್ಕಳಿಗೆ ಯಾವುದೇ ರೀತಿಯ ದೌರ್ಜನ್ಯಗಳೂ ನಡೆದಾಗ ಮಕ್ಕಳ ರಕ್ಷಣೆಗೆಂದೆ ಇರುವ ಮಕ್ಕಳ ಸಹಾಯವಾಣಿ-1098 ಇದರ ಉಪಯೋಗವನ್ನು ಪಡೆದುಕೊಳ್ಳಬೇಕು.
ತನಗೆ ಸಮಸ್ಯೆಗಳು ಬಂದಾಗ ಮಾತ್ರವಲ್ಲದೆ ತನ್ನ ಸಹಪಾಠಿಗಳಿಗೆ, ತನ್ನ ನೆರೆಹೊರೆಯ ಮಕ್ಕಳಿಗು ಸಮಸ್ಯೆಗಳು ಬಂದಾಗ ಅದನ್ನು ಇಂತಹ ಸಂಸ್ಥೆಗಳ ಗಮನಕ್ಕೆ ತರಬೇಕು. ಎಲ್ಲಿಯೇ ಆಗಲಿ ಮಕ್ಕಳ ಹಕ್ಕುಗಳಿಗೆ ಧಕ್ಕೆ ಬಂದಾಗ ಅದನ್ನು ಧೈರ್ಯವಾಗಿ ವಿರೋಧಿಸಬೇಕು ಎಂದು ಹೇಳುತ್ತ ಮಕ್ಕಳ ಸಹಾಯವಾಣಿ ಮಾಡುತ್ತಿರುವ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲಿ ಇದರ ಉಪಯೋಗ ಇನ್ನು ಹೆಚ್ಚಿನ ಮಕ್ಕಳಿಗೆ ಸಿಗಲಿ ಎಂದು ಶುಭ ಹಾರೈಸಿದರು.
ಶ್ರೀ ಗಣೇಶ ಬಿ, ಹಿರಿಯ ನ್ಯಾಯಧಿಶರು ಮತ್ತು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಉಚಿತ ಕಾನೂನು ಸೇವೆಗಳ ಪ್ರಾಧಿಕಾರ ದ.ಕ, ಶ್ರೀ ಸುಂದರ್ ಪೂಜಾರಿ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ, ಶ್ರೀ ಉಸ್ಮಾನ್ ಎ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದ.ಕ, ಶ್ರೀ ನಾಗೇಶ್, ಸಹಾಯಕ ಕಾರ್ಮಿಕ ಆಯುಕ್ತರು, ಕಾರ್ಮಿಕ ಇಲಾಖೆ ದ.ಕ, ಶ್ರೀ ನಿಕೇಶ್ ಶೆಟ್ಟಿ, ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ ದ.ಕ, ಶ್ರೀ ಶ್ರೀಧರ ರಾವ್,ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ(ರಿ) ದ.ಕ, ಸಿಸ್ಟರ್.ಟುಲಿನ್, ಸಹಸಂಚಾಲಕರು, ಇನ್ಫೆಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ,ಜೆಪ್ಪು ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಕ್ಕಳ ರಕ್ಷಣೆಯಲ್ಲಿ ಹಿರಿಯರು, ನಾಗರಿಕರು, ಹೆತ್ತವರು,ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳ ಜವಬ್ದಾರಿಗಳನ್ನು ಹೆಳುತ್ತ ಮಕ್ಕಳಿಗು ಅವರ ಹಕ್ಕುಗಳ ರಕ್ಷಣೆಯಲ್ಲಿ ಅವರ ಕರ್ತವ್ಯ ಹಾಗೂ ಜವಬ್ದಾರಿಗಳುನ್ನು ತಿಳಿಸುತ್ತ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಚೈಲ್ಡ್ಲೈನ್ ಮಂಗಳೂರು-1098ಕೇಂದ್ರ ಸಂಯೋಜಕರಾದ ಶ್ರೀ ಸಂಪತ್ ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ಚೈಲ್ಡ್ಲೈನ್ ಸೆ ದೋಸ್ತಿಯ ಪ್ರಾಮುಖ್ಯತೆಯ ಕುರಿತು ಹಾಗೂ ಈ ಸಪ್ತಾಹ ಕಾರ್ಯಕ್ರಮದ ಒಂದು ವಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಇನ್ಫೆಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ,ಜೆಪ್ಪು ಮುಖ್ಯ ಶಿಕ್ಷಕಿಯಾದ ಶ್ರೀಮತಿ ಜೆನ್ವಿಯ ಸಿಕ್ವೇರಾ ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಸಲ್ಲಿಸಿದರು. ಚೈಲ್ಡ್ಲೈನ್ ಮಂಗಳೂರು-1098 ನಗರ ಸಂಯೋಜಕರಾದ ಶ್ರೀ ಯೋಗಿಶ್ ಮಲ್ಲಿಗೆಮಾಡು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕೆ ಚೈಲ್ಡ್ಲೈನ್ ಮಂಗಳೂರು-1098 ಮತ್ತು ಪಡಿ ಸಂಸ್ಥೆಯ ಸಿಬಂಧಿಗಳು, ಶಾಲಾ ಶಿಕ್ಷಕರು, ಹಲವು ಸ್ವಯಂ-ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಸಹೃದಯಿ ದಾನಿಗಳು ಹಾಗೂ ಸುಮಾರು 150 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಪಡಿ ಸಂಸ್ಥೆ ಮಂಗಳೂರು, ಜಿಲಾ ಉಚಿತ ಕಾನೂನು ಸೇವೆಗಳ ಪ್ರಾಧಿಕಾರ ದ.ಕ, ಕಾರ್ಮಿಕ ಇಲಾಖೆ ಗ.ಕ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ(ರಿ) ದ.ಕ, ರೆಡಿಯೋ ಸಾರಂಗ್ 107.0, ರೆಡಿಯೋ ಬಿಗ್ ಎಫ್ ಎಮ್ 92.7, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ, ಧರ್ಮಜ್ಯೋತಿ ಸಮಾಜ ಸೇವಾ ಕೇಂದ್ರ ವಾಮಂಜೂರು ಇವರುಗಳ ಸಹಯೋಗದಲ್ಲಿ ನಡೆಯಿತು.


