ಕರ್ನಾಟಕ

ಭೂಮಿ-ಮರಳು ಮಾಫಿಯಾ ಜೊತೆಯ ಸಂಪರ್ಕ ಬಿಡಿ: ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ

Pinterest LinkedIn Tumblr

parameshwar________fi__________

ಬೆಂಗಳೂರು,ನ.6: ರಿಯಲ್ ಎಸ್ಟೇಟ್, ಮರಳು ಮಾಫಿಯಾ ವ್ಯವಹಾ ರದಲ್ಲಿ ತೊಡಗಿರುವ ಪೊಲೀಸ್ ಅಧಿಕಾರಿಗಳು ಈ ಕೂಡಲೇ ಅಂತಹ ಅಕ್ರಮ ಚಟುವಟಿಕೆಗಳಿಂದ ದೂರ ಉಳಿಯುವ ಜೊತೆಗೆ ಸಮಾಜಘಾ ತುಕ ವ್ಯಕ್ತಿಗಳ ಸಂಪರ್ಕವನ್ನು ಕಡಿತಗೊಳಿಸಬೇಕೆಂದು ನೂತನ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಗರದ ಪೊಲೀಸ್ ಮಹಾನಿರ್ದೇಶಕ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕಾರ್ಯಕ್ರ ಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪರಮೇಶ್ವರ್, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಒತ್ತು ನೀಡಬೇಕು. ಮಹಿಳೆಯರ, ಮಕ್ಕಳ, ಹಿರಿಯನಾಗರಿಕರ, ಅಲ್ಪಸಂಖ್ಯಾತರ ರಕ್ಷಣೆಗೆ ನನ್ನ ಪ್ರಥಮ ಆದ್ಯತೆ. ಜೊತೆ ಯಲ್ಲಿ ಪೊಲೀಸ್ ಇಲಾಖೆಯಲ್ಲಿ ಕಟ್ಟುನಿಟ್ಟಿನ ಶಿಸ್ತು ಇರಬೇಕೆಂದು ಅವರು ಪೊಲೀಸರಿಗೆ ತಾಕೀತು ಮಾಡಿದರು.

ಕೆಲವು ಪೊಲೀಸ್ ಅಧಿಕಾರಿಗಳು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವ ಬಗ್ಗೆ ನನಗೆ ಮಾಹಿತಿ ಇದೆ. ಇದನ್ನು ಯಾವುದೇ ಕಾರಣ ಕ್ಕೂ ಸಹಿಸುವುದಿಲ್ಲ. ಇನ್ನು ಮುಂದೆ ನನ್ನ ಗಮನಕ್ಕೆ ಇಂತಹ ಪ್ರಕರಣ ಗಳು ಕಂಡುಬಂದರೆ ಕಠಿಣ ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಸಿದರು. ಮರಳು ದಂಧೆ ವ್ಯಾಪಕವಾಗಿ ಹರಡಿಕೊಂಡಿದೆ. ನನ್ನ ಕ್ಷೇತ್ರದಲ್ಲಿಯೇ ಅತಿಯಾಗಿದೆ. ಅಕ್ರಮ ಮರಳು ಸಾಗಾಟ ತಡೆಯುವ ಕಾರ್ಯಾಚರಣೆ ಕಷ್ಟ ಎಂದು ನನಗೆ ಗೊತ್ತಿದೆ. ಇದನ್ನು ನಿಯಂತ್ರಿಸಲು ವ್ಯವಸ್ಥಿತವಾದ ಯೋಜನೆ ರೂಪಿಸಿ ಕಡಿವಾಣ ಹಾಕಬೇಕೆಂದು ಹೇಳಿದರು.

ಕೋಮುವಾದಿ ಶಕ್ತಿಗಳ ಮೇಲೆ ನಿಗಾ: ಬೆಳಗಾವಿ ಹಾಗೂ ಮಂಗಳೂರು ಅತ್ಯಂತ ಸೂಕ್ಷ್ಮ ಪ್ರದೇಶಗಳು. ಪ್ರಾದೇಶಿಕ ಹಾಗೂ ಮತೀಯ ಭಾವನೆಗಳನ್ನು ಕೆರಳಿಸಿ ಇಲ್ಲಿ ಶಾಂತಿ ಕದಡುವ ಪ್ರಯತ್ನಗಳು ಪದೇ ಪದೇ ನಡೆಯುತ್ತಿವೆ. ಇವುಗಳ ಮೇಲೆ ನಿಗಾ ಇರಿಸುವ ಜೊತೆಗೆ ಅವುಗಳನ್ನು ತಡೆಗಟ್ಟಬೇಕೆಂದು ಸೂಚಿಸಿದರು.

ಸಮವಸ್ತ್ರ ಕಡ್ಡಾಯ:
ಪೊಲೀಸ್ ಇಲಾಖೆ ಶಿಸ್ತಿನ ದಳ, ಗುಪ್ತ ದಳದಂತಹ ಅಧಿಕಾರಿಗಳನ್ನು ಹೊರತುಪಡಿಸಿ, ಉಳಿದ ಎಲ್ಲ ಅಧಿಕಾರಿ ಗಳು ಕಚೇರಿ ಕೆಲಸದ ವೇಳೆ ಕಡ್ಡಾಯವಾಗಿ ಸಮವಸ್ತ್ರದಲ್ಲೇ ಬರಬೇಕು. ಅದೇ ರೀತಿ, ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿ ಮಾಡ ಲು ಬರುವಾಗ, ಸಾದಾ ಉಡುಪಿನಲ್ಲಿ ಬರುವುದು ಸಂಪೂರ್ಣ ನಿಷಿದ್ಧ ಎಂದು ಅವರು ಎಚ್ಚರಿಕೆ ನೀಡಿದರು.

ಲೈಂಗಿಕ ದೌರ್ಜನ್ಯ ಸಹಿಸುವುದಿಲ್ಲ: ಸಮಾಜದಲ್ಲಿ ಜಾತಿ ವ್ಯವಸ್ಥೆಯ ಹಲವಾರು ಪದರುಗಳಿವೆ. ಈ ಕಾರಣಕ್ಕಾಗಿ ದೌರ್ಜನ್ಯಗಳು ನಡೆ ಯುತ್ತಿವೆ. ಒಂಟಿ ಮಹಿಳೆಯರ, ವಯೋವೃದ್ಧರ ಕೊಲೆಗಳಾಗುತ್ತಿವೆ. ಇಂತಹ ಪ್ರಕರಣಗಳನ್ನು ತಡೆಗಟ್ಟಬೇಕು. ಅತ್ಯಾಚಾರ ಪ್ರಕರಣಗಳನ್ನು ಸರಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.

ಪೊಲೀಸರಿಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: ಪೊಲೀಸ್ ಇಲಾಖೆಗಾಗಿ ಪ್ರತ್ಯೇಕ ಆಸ್ಪತ್ರೆ ಸ್ಥಾಪಿಸುವ ಅಗತ್ಯವಿದೆ. ಇಲ್ಲಿ ಶ್ರೇಣೀಕೃತ ವ್ಯವಸ್ಥೆಯಿದೆ. ಎಲ್ಲ ಅಧಿಕಾರಿ-ಸಿಬ್ಬಂದಿಗೂ ಒಂದೇ ರೀತಿಯ ಚಿಕಿತ್ಸೆ ನೀಡುವ ಆಸ್ಪತ್ರೆ ಕಲ್ಪಿಸಲಾಗುವುದು. ಇಂತಹ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಹಣದ ಕೊರತೆಯಿಲ್ಲ, ನಗರದ ಹೆಡ್‌ಕ್ವಾಟ್ರರ್ಸ್ ಬಳಿ 3.5ಎಕರೆ ಜಾಗ ಲಭ್ಯವಿದೆ. ಅದರಲ್ಲಿ 1.5ಎಕರೆ ಬಳಕೆ ಮಾಡಿಕೊಂಡು ಆಸ್ಪತ್ರೆ ಸ್ಥಾಪಿಸುವ ಕುರಿತು ಚರ್ಚಿಸಲಾಗುವುದು ಎಂದರು.

ಮಂಗಳೂರಿಗೆ ಭೇಟಿ: ಇತ್ತೀಚೆಗೆ ಮಂಗಳೂರು ಜೈಲಿನಲ್ಲಿ ನಡೆದ ಕೈದಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಖುದ್ದಾಗಿ ಮಂಗಳೂರಿಗೆ ಭೇಟಿ ನೀಡುತ್ತಿದ್ದು, ಅಲ್ಲಿಯೇ ಪರಿಶೀಲನೆ ನಡೆಸಲಾ ಗುವುದು. ಹೀಗಾಗಿ, ವರದಿಯ ಅಂಶಗಳನ್ನು ಬಹಿರಂಗಪಡಿಸುವುದಿಲ್ಲ ಎಂದರು.

ಡಿಜಿಪಿ ಓಂಪ್ರಕಾಶ್ ಮಾತನಾಡಿ, ಕಲಬುರಗಿ ಪೊಲೀಸ್ ಆಯು ಕ್ತಾಲಯಕ್ಕೆ ಹಾಗೂ ಕರಾವಳಿ ಭಾಗದಲ್ಲಿ ಮತೀಯ ಸೂಕ್ಷ್ಮ ಪ್ರಕರಣ ಗಳನ್ನು ನಿಭಾಯಿಸಲು ಕ್ಷಿಪ್ರ ಕಾರ್ಯಪಡೆ ಸ್ಥಾಪನೆಗೆ ಅನುಮತಿ ಕೊಡಿಸಬೇಕು. ತುಮಕೂರಿನಲ್ಲಿ ಭಾರತೀಯ ಮೀಸಲು ಪೊಲೀಸ್ ಪಡೆ ಸ್ಥಾಪನೆಗೆ ಅನುಮತಿ ನೀಡುವಂತೆ ಇದೇ ವೇಳೆ ಮನವಿ ಮಾಡಿದ ಅವರು, ಕೆಎಸ್‌ಆರ್‌ಪಿಯಲ್ಲಿ 30 ವರ್ಷಗಳಿಂದಲೂ ಪರಿಷ್ಕರ ಣೆಯಾಗಿಲ್ಲ. ಇತ್ತೀಚೆಗೆ ಭಡ್ತಿ ಹಾಗೂ ನೇಮಕಾತಿಯ ಮೂಲಕ ಪರಿಷ್ಕರಣೆ ಮಾಡಲಾಗಿದೆ ಎಂದರು.

ರಾಜ್ಯದ ಪೊಲೀಸ್ ತರಬೇತಿ ಶಾಲೆಗಳನ್ನು ಉನ್ನತೀಕರಣಗೊಳಿಸಲಾ ಗುತ್ತಿದೆ. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ 309 ಹುದ್ದೆಗಳ ನೇಮ ಕಾತಿಗೆ ಮಂಜೂರಾತಿ ದೊರೆತಿದೆ ಎಂದರು.

ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ನಗರ ಪೊಲೀಸ್ ಆಯುಕ್ತ ಮೇಘರಿಕ್ ಸೇರಿ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ಅಸಹಿಷು್ಣತೆಗೆ ಅವಕಾಶ ಬೇಡ
ಕಂಬಾಲಪಲ್ಲಿ ದುರ್ಘಟನೆಯಲ್ಲಿ ಆರೋಪಿಗಳನ್ನುಬಂಧಿಸುವಲ್ಲಿ ತಡವಾಗಿತ್ತು. ಕೊನೆಗೂ ಶಿಕ್ಷೆಯೇ ಆಗಲಿಲ್ಲ. ಮನುಷ್ಯರನ್ನು ಜೀವಂತ ಸುಟ್ಟವರಿಗೆ ಶಿಕ್ಷೆಯಾಗಲಿಲ್ಲ ಎಂದರೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ದಲಿತರ ಮೇಲೆ ದೌರ್ಜನ್ಯಗಳಾಗುತ್ತಿವೆ, ಕೆಲವು ಶಕ್ತಿಗಳು ಅಸಹಿಷ್ಣುತೆ ವಾತಾವರಣ ನಿರ್ಮಿಸುತ್ತಿವೆ. ಇಂತಹ ಬೆಳವಣಿಗೆಗೆ ಅವಕಾಶ ನೀಡಬೇಡಿ. ಜನ ಸಾಮಾನ್ಯರಿಗೆ ಕಿರುಕುಳ ನೀಡುವ ವ್ಯಕ್ತಿಗಳು ಯಾರೇ ಇದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ. ರೈತರ ಪ್ರತಿಭಟನೆ ವೇಳೆ ಅವಘಡಗಳು ನಡೆಯದಂತೆ ಎಚ್ಚರಿಕೆ ವಹಿಸಿ. ಬೆಂಗಳೂರು ಐಟಿ ಸಿಟಿಯಾಗಿದೆ. ಸುಮಾರು ಗಾರ್ಮೆಂಟ್ಸ್ ಉದ್ಯಮಗಳಿವೆ. ಇಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ಯರ ರಕ್ಷಣೆಗೆ ಸಮಗ್ರವಾದ ವ್ಯವಸ್ಥೆ ರೂಪಿಸಬೇಕು.ಖಾಸಗಿ ಕಂಪೆನಿ ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಾಗ ಅವರ ಗುರುತು ಭಾವಚಿತ್ರ ಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕೆಂದು ಪರಮೇಶ್ವರ್ ಸೂಚಿಸಿದರು.

Write A Comment