ಮ೦ಗಳೂರು, ನ.05 : ಸ್ವಾತಂತ್ರ್ಯ ಬಂದ ಸಂಧರ್ಭದಲ್ಲಿ ಭಾರತ ಹಸಿವಿನಿಂದ ಕಂಗೆಟ್ಟತ್ತು, ಯಾವುದೇ ಬೃಹತ್ ಉದ್ಯಮಗಳಿಲ್ಲದೆ ಜನ ನಿರುದ್ಯೋಗ ಸಮಸ್ಯೆಯಿಂದ ಪರಿತಪಿಸುತ್ತಿದ್ದರು, ಇಂತಹ ಸಮಯದಲ್ಲಿ ಭಾರತದ ಸರ್ವಾಂಗೀಣ ಅಭಿವೃದ್ದಿಗೆ ಪಂಚವಾರ್ಷಿಕ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಹಸಿರು ಕ್ರಾಂತಿ ಮತ್ತು ಕೈಗಾರಿಕ ಕ್ರಾಂತಿಯನ್ನುಮಾಡಿ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಯಂ ಪರಿಪೂರ್ಣತೆ ಯನ್ನು ಪಡೆದು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಅನೇಕ ಬೃಹತ್ ಕೈಗಾರಿಕೆಗಳನ್ನು ಆರಂಭಿಸಿ ದೇಶದ ಆರ್ಥಿಕತೆಗೆ ಭದ್ರ ಬುನಾದಿಯನ್ನು ಹಾಕಿದರು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್.ಲೋಬೊ ತಿಳಿಸಿದ್ದಾರೆ.
ಅವರು ಇಂದು ನಗರದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿರುವ ಎರಡು ದಿನಗಳ ಪಂಡಿತ್ ಜವಹರಲಾಲ್ ನೆಹರುರವರ ಜೀವನ ಕುರಿತ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಪ್ರಕಾಶ್ ನಾಯಕ್,ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ವಾರ್ತಾ ಸಹಾಯಕ ಬಿ.ಆಅರ್.ಚಂದ್ರಶೇಖರ ಅಜಾದ್ ಮುತಾದವರು ಹಾಜರಿದ್ದರು.
ಛಾಯಾಚಿತ್ರಗಳ ಪ್ರದರ್ಶನ ಇಂದು ಮತ್ತು ನಾಳೆ ಇರುತ್ತದೆ ಸಾರ್ವಜನಿಕರು ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ವೀಕ್ಷಿಸಬಹುದಾಗಿದೆ.











