ಬೀಜಿಂಗ್: ಒಂದೊಂದು ಕಡೆ ಒಂದೊಂದು ಸಂಪ್ರದಾಯವಿರುತ್ತದೆ. ಇದನ್ನು ಕೇಳಿದರೆ ಎಷ್ಟೋ ಜನ ತಲೆ ಮೇಲೆ ಕೈ ಇಟ್ಟುಕೊಳ್ಳುತ್ತಾರೆ. ಇಂತಹದ್ದೇ ಒಂದು ವಿಚಿತ್ರ ಸಂಪ್ರದಾಯ ಚೀನಾದ ಒಂದು ಪ್ರಾಂತ್ಯದಲ್ಲಿದೆ. ಈ ಪ್ರಾಂತ್ಯದಲ್ಲಿ ಒಬ್ಬ ಯುವಕ ಹಲವು ಯುವತಿಯರೊಂದಿಗೆ ಸಂಬಂಧ ಹೊಂದ ಬಹುದಾದ ವಿಚಿತ್ರ ಸಂಪ್ರದಾಯವಿದೆಯಂತೆ.
ಹೌದು. ಚೀನಾದ ಗುವಾಗ್ಡಾಂಗ್ ಪ್ರಾಂತ್ಯದಲ್ಲಿ ಯುವಕರು ಒಬ್ಬರಿಗಿಂತ ಹೆಚ್ಚು ಯುವತಿಯರ ಜೊತೆಗೆ ಸಂಬಂಧ ಹೊಂದುವುದೇ ಸಂಪ್ರದಾಯವಂತೆ. ಇದೀಗ ಎಲ್ಲ ಕಡೆಯೂ ಈ ಬಗ್ಗೆಯೇ ಚರ್ಚೆಯಾಗುತ್ತಿದೆಯಂತೆ. ಆದರೆ ಈ ಸಂಪ್ರದಾಯ ಬರಲು ಹಲವು ಕಾರಣಗಳಿವೆ ಎನ್ನುವುದು ಗಮನಿಸಬೇಕಾದ ವಿಚಾರ.
ಸಂಪ್ರದಾಯ ಬಂದಿದ್ದು ಹೇಗೆ?: ಈ ಪ್ರಾಂತ್ಯದಲ್ಲಿ ಯುವತಿಯರಿಗೆ ಹೆಚ್ಚು ಮಹತ್ವವಿದೆಯಂತೆ. ಆದರೆ ಯುವಕರಿಗೆ ಯಾವುದೇ ರೀತಿಯ ಪ್ರಾಮುಖ್ಯತೆ ಇಲ್ಲವಂತೆ. ಕೆಲಸಕ್ಕೂ ಇಲ್ಲಿನ ಯುವಕರು ಹೋಗುವುದಿಲ್ಲವಂತೆ, ಇದೆಲ್ಲಾ ಕಾರಣಗಳಿಂದಲೇ ಇಲ್ಲಿನ ಯುವಕರು ಹೆಚ್ಚಿನ ಸಮಯವನ್ನು ಯುವತಿಯರ ಜೊತೆಯಲ್ಲೇ ಕಳೆಯುತ್ತಾರಂತೆ. ಇನ್ನೊಂದು ಆಶ್ಚರ್ಯಕರ ಸುದ್ದಿಯೆಂದರೆ ಯುವತಿಯರಿಗೆ ತನ್ನ ಗೆಳೆಯ ಬೇರೆ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಗೊತ್ತಿದ್ದರೂ ಆಕೆ ತಲೆಕೆಡಿಸಿಕೊಳ್ಳುವುದಿಲ್ಲವಂತೆ.
