ಕನ್ನಡ ವಾರ್ತೆಗಳು

ಕೈದಿ ನಾಪತ್ತೆ ಪ್ರಕರಣ ಸುಖಾಂತ್ಯ : ಗ್ಯಾಂಗ್‌ವಾರ್‌ಗೆ ಹೆದರಿ ಜೈಲಿನೊಳಗೆಯೇ ಅಡಗಿ ಕುಳಿತ ಬಶೀರ್

Pinterest LinkedIn Tumblr

Basir_abocond_detal

ಮಂಗಳೂರು,ನ.03:  ಸೋಮವಾರ ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದ ಹಿನ್ನಲೆಯಲ್ಲಿ ಬಂಟ್ವಾಳ ಮೂಲದ ಬಶೀರ್ ಅಹ್ಮದ್ ಜೈಲಿನಿಂದ ನಾಪತ್ತೆಯಾಗಿದ್ದು. ಜೈಲಿನ ಆವರಣದಲ್ಲಿಯೇ ಅಡಗಿ ಕುಳಿತಿದ್ದ ಆತನನ್ನು ಜೈಲಿನ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ. ಇದರಿಂದಾಗಿ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಂತಾಗಿದೆ.

ಹೆದರಿ ಕುಳಿತಿದ್ದ : ಸೋಮವಾರ ಜೈಲಿನಲ್ಲಿ ನಡೆದ ಮಾರಾಮಾರಿಯಲ್ಲಿ ಮಾಡೂರು ಯೂಸೂಫ್, ಗಣೇಶ್ ಶೆಟ್ಟಿ ಎಂಬ ಕೈದಿಗಳನ್ನು ಹತ್ಯೆ ಮಾಡಲಾಗಿತ್ತು, 6 ಕೈದಿಗಳು ಗಾಯಗೊಂಡಿದ್ದರು. ಇದರಿಂದ ಇಂದೂ ಸಹ ಗಲಾಟೆ ಆಗಬಹುದು ಎಂದು ಹೆದರಿದ್ದ ಬಶೀರ್ ಅಡಗಿ ಕುಳಿತಿದ್ದ.

ಉಳ್ಳಾಲದಲ್ಲಿ ಕಳ್ಳತನ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿದ್ದ ಬಶೀರ್ ಐದು ತಿಂಗಳಿನಿಂದ ಜೈಲಿನಲ್ಲಿದ್ದ. ಸೋಮವಾರ ಆಕಾಶ್ ಭುವನ್ ಶರಣ್ ಮತ್ತು ಮಾಡೂರು ಯೂಸೂಫ್ ಗುಂಪಿನ ನಡುವೆ ನಡೆದ ಮಾರಾಮಾರಿ ಮತ್ತು ಇಬ್ಬರು ಕೈದಿಗಳ ಹತ್ಯೆಯನ್ನು ಕಣ್ಣಾರೆ ಕಂಡಿದ್ದ ಬಶೀರ್ ಹೆದರಿ ಅಡಗಿದ್ದ ಎಂದು ತಿಳಿದುಬಂದಿದೆ.

Write A Comment