ಅಂತರಾಷ್ಟ್ರೀಯ

ಪಾಕಿಸ್ತಾನದಿಂದ ಬಂದ ಹುಡುಗಿಯ ಚಿಕಿತ್ಸೆಗೆ ರೂ. 13 ಲಕ್ಷ ನೆರವು ನೀಡಿದ ಭಾರತೀಯರು!

Pinterest LinkedIn Tumblr

girl

ಮುಂಬೈ, ಅ.17: ಪಾಕಿಸ್ತಾನದಿಂದ ಭಾರತಕ್ಕೆ ಚಿಕಿತ್ಸೆಗಾಗಿ ಬಂದಿದ್ದ 15 ವರ್ಷದ ಹುಡುಗಿಗೆ ಭಾರತೀಯರು ರೂ. 13 ಲಕ್ಷ ದೇಣಿಗೆ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

ಕರಾಚಿಯ ಸಾಬಾ ತಾರಿಖ್ ಅಹ್ಮದ್ ಎಂಬ ಹುಡುಗಿ ಪಾಕಿಸ್ತಾನದಿಂದ ಭಾರತಕ್ಕೆ 49 ದಿನಗಳ ಹಿಂದೆ ಬಂದಿದ್ದಳು. ತನ್ನ ಕಾಯಿಲೆಯೊಂದಕ್ಕೆ ಸಂಬಂಧಿಸಿ ಚಿಕಿತ್ಸೆಗಾಗಿ ಮುಂಬೈಗೆ ಆಗಮಿಸಿದ್ದಳು. ಭಾರತೀಯರ ಸಹಕಾರದಿಂದ ಗುಣಮುಖಳಾಗಿ ಈ ಹುಡುಗಿ ಇದೀಗ ತನ್ನ ತವರಿಗೆ ಹಿಂದಿರುಗಿದ್ದಾಳೆ.

ದೇಹದೊಳಗೆ ತಾಮ್ರದ ಅಂಶವೊಂದು ಕ್ರೋಢೀಕರಣಗೊಂಡು ವಿಷಮಯವಾಗುವ ವಿಚಿತ್ರ ಕಾಯಿಲೆಗೆ ಆಕೆಗೆ ಚಿಕಿತ್ಸೆ ನೀಡಲಾಗಿದೆ. ಆಕೆಯ ಚಿಕಿತ್ಸೆಯ ಖರ್ಚಿನಲ್ಲಿ ಸುಮಾರು ರು.13 ಲಕ್ಷ, ಭಾರತೀಯರು ದಾನವಾಗಿ ಸಂಗ್ರಹಿಸಿ ನೀಡಿದ್ದಾರೆ. ಇದೀಗ ಸಂಪೂರ್ಣ ಗುಣಮುಖಳಾಗಿರುವ ಸಾಬಾ ಮತ್ತು ಆಕೆಯ ತಾಯಿ ನಝಿಯಾ ಕರಾಚಿ ವಿಮಾನ ಹತ್ತಿ ಈಗಾಗಲೇ ಪಾಕಿಸ್ತಾನ ತಲುಪಿ ಆಗಿದೆ. ಭಾರತದಲ್ಲಿ ಚಿಕಿತ್ಸೆ ಪಡೆದು, ಇಲ್ಲಿನ ಆತಿಥ್ಯ ಸ್ವೀಕರಿಸಿರುವುದಕ್ಕೆ ತಾಯಿ-ಮಗಳಿಬ್ಬರೂ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ.

ಇಷ್ಟೆ ಅಲ್ಲಾ… ಕಳೆದ ಎಪ್ರಿಲ್ ನಲ್ಲಿಯೂ ಇಂತಹುದೇ ಶಸ್ತ್ರ ಚಿಕಿತ್ಸೆಗೆ ಈ ಹುಡುಗಿ ಒಳಗಾಗಿದ್ದಳು. ಆಗಲೂ ಆಕೆಗೆ ಭಾರತೀಯರು ಸಹಾಯ ಮಾಡಿದ್ದರು. ಆ ಸಂದರ್ಭ ಬ್ಲೂಬೆಲ್ಸ್ ಕಮ್ಯುನಿಟಿ ಎಂಬ ಎನ್ ಜಿ ಒ ಒಂದು ಆಕೆಗೆ ರು.7 ಲಕ್ಷ ಸಂಗ್ರಹ ಮಾಡಿ ದೇಣಿಗೆ ನೀಡಿತ್ತು.

Write A Comment