ಕನ್ನಡಿಗರು ದುಬೈ ನವೆಂಬರ್ 13ರಂದು ದುಬೈಯಲ್ಲಿ ಇರುವ ಜೆಮ್ಸ್ ಶಾಲಾ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸ್ವನ್ನು ಆಚರಿಸಲಿದ್ದಾರೆ. ಪ್ರೆಶಿಯಸ್ ಪಾರ್ಟಿಸ್ ಅಂಡ್ ಎಂಟರ್ಟೈನ್ಮೆಂಟ್ ಎಲ್ ಎಲ್ ಸಿ-ದುಬೈ ಇದರ ಸಹಯೊಗ ದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಭೆಯ ಗಣ್ಯ ವ್ಯಕ್ತಿಗಳನ್ನು ಗೌರವಿಸುವ ಮತ್ತು ಕರ್ನಾಟಕ ರತ್ನ ಪ್ರಸಸ್ತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಶ್ರಿಮತಿ ವಿಜಯಲಕ್ಷ್ಮಿ ಶಿಬರೂರ್ ( ಪತ್ರಕರ್ತೆ ಹಾಗು ಸುವರ್ಣ ನ್ಯೂಸ್ 24X7 ನ ಸ್ಪೆಷಲ್ ಇನ್ವೆಸ್ಟಿಗೆಟಿವ್ ಡಿಪಾರ್ಟ್ಮೆಂಟ್ ) ಭಾಗವಹಿಸಲಿದ್ದು, ಅವರು ಈ ಕಾರ್ಯಕ್ರಮವನ್ನು ಮತ್ತು ಸಭಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ,
ಈ ಕಾರ್ಯಕ್ರಮದ ಸಲುವಾಗಿ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಡ್ಯ ರಮೇಶ್, ಟೆನ್ನಿಸ್ ಕೃಷ್ಣ, ಮಂಜು ಬಾಶಿನಿ, ಪ್ರಶಾಂತ್ ಮತ್ತು ರೂಪ ಪ್ರಭಾಕರ್ ಮುಂತಾದವರು ಹಾಸ್ಯ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ, ತದನಂತರ ಫ್ಯಾಷನ್ ಷೋ ಕೂಡ ನಡೆಯಲಿದೆ. ಯು ಏ ಈ ಯಲ್ಲಿರುವ ಕನ್ನಡಿಗರ ಇತರೆ ಸಂಘಟನೆಯ ಶಾಲಾ ವಿಧ್ಯಾರ್ತಿಗಳಿಂದ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.
