ಬೆಂಗಳೂರು,ಅ.10-ಜ್ಞಾನಪೀಠ ಪ್ರಶಸ್ತಿಗೆ ಸರಿಸಮಾನವಾದ ಕನ್ನಡ ಸುಜ್ಞಾನ ಪೀಠ ಸ್ಥಾಪಿಸಿ ಸಾಹಿತ್ಯ ಕ್ಷೇತ್ರಕ್ಕೆ ಅತ್ಯುನ್ನತ ಸೇವೆ ಸಲ್ಲಿಸಿದವರಿಗೆ ಪ್ರತಿವರ್ಷ 10 ಲಕ್ಷ ನಗದು ಪುರಸ್ಕಾರವನ್ನು ನೀಡಲಾಗುವುದು ಎಂದು ಸಾಹಿತಿ ವಿ.ಲಕ್ಷ್ಮಿನಾರಾಯಣ ಇಂದಿಲ್ಲಿ ಘೋಷಣೆ ಮಾಡಿದರು.
ವಿಎಲ್ಎಲ್ ಅಭಿನಂದನಾ ಸಮಿತಿ ವತಿಯಿಂದ ವಿ.ಲಕ್ಷ್ಮಿನಾರಾಯಣ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಭಾರತದಲ್ಲಿ ಸಾಹಿತ್ಯ ಲೋಕಕ್ಕೆ ಸೇವೆ ಸಲ್ಲಿಸಿದವರನ್ನು ಪರಿಗಣಿಸಿ ಸದ್ಯಕ್ಕೆ ಇರುವ ಜ್ಞಾನಪೀಠ ಪ್ರಶಸ್ತಿಗಿಂತ ಒಂದು ಲಕ್ಷ ಹೆಚ್ಚು ನಗದು ಪುರಸ್ಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.