ಮುಂಬೈ

ಪಾಕ್ ಗಾಯಕ ಗುಲಾಮ್ ಅಲಿ ‘ಡೆಂಗ್ಯೂ ಕಲಾಕಾರ’ ಎಂದ ಬಾಲಿವುಡ್ ಗಾಯಕ

Pinterest LinkedIn Tumblr

gulamಮುಂಬೈ: ಪಾಕಿಸ್ತಾನದ ಪ್ರಖ್ಯಾತ ಗಾಯಕ ಗುಲಾಮ್ ಅಲಿಯವರನ್ನು ಬಾಲಿವುಡ್ ಹಿನ್ನೆಲೆ ಗಾಯಕ ಅಭಿಜಿತ್ ಭಟ್ಟಾಚಾರ್ಯ ‘ಡೆಂಗ್ಯೂ ಕಲಾಕಾರ’ ಎಂದು ಹೀಯಾಳಿಸಿದ್ದಾರೆ.

ಮುಂಬೈಯಲ್ಲಿ ಇಂದು ನಡೆಯಬೇಕಿದ್ದ ಪಾಕ್ ಗಝಲ್ ಗಾಯಕ ಗುಲಾಮ್ ಅಲಿಯವರ ಸಂಗೀತ ಕಾರ್ಯಕ್ರಮ ಶಿವಸೇನೆ ವಿರೋಧದಿಂದಾಗಿ ರದ್ದಾಗಿರುವುದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಿನ್ನೆಲೆ ಗಾಯಕ ಅಭಿಜಿತ್ ಭಟ್ಟಾಚಾರ್ಯ ಶಿವಸೇನೆ ಪರವಾಗಿ  ಮಾತನಾಡಿದ್ದಾರೆ.

ಶಿವಸೇನೆಯನ್ನು ಬೆಂಬಲಿಸಿ ಸರಣಿ ಟ್ವಿಟ್ಟರ್ ಪ್ರಕಟಿಸಿರುವ ಅವರು, ದೇಶ ಭಕ್ತಿಯು ಒಬ್ಬ ‘ಡೆಂಗ್ಯೂ ಕಲಾಕಾರ’ ನಿಗಿಂತಲೂ ಹೆಚ್ಚು ಮಹತ್ವ ಪಡೆಯುತ್ತದೆ, ಎಂದಿದ್ದಾರೆ.

“ಆತ್ಮಾಭಿಮಾನವಿಲ್ಲದ ಇವರಿಗೆ, ಉಗ್ರವಾದವೊಂದೇ ಗೊತ್ತಿರುವುದು. ಹಿಂದೂ ಪರ ರಾಜಕೀಯ ಪಕ್ಷಗಳು ಕೇವಲ ಭಯೋತ್ಪಾದನೆಯ ಕುರಿತು ಬೊಬ್ಬೆ ಹಾಕುತ್ತಾರೆ. ಆದರೆ ಇಂತಹ ‘ಡೆಂಗ್ಯೂ ಆರ್ಟಿಸ್ಟ್’ ಗಳನ್ನು ಬೆಂಬಲಿಸುತ್ತಾರೆ. ಅವರು ಸಂಗೀತಕಾರರಾಗಿ ಭಾರತಕ್ಕೆ ಬರುವುದಿಲ್ಲ. ಪಾಕಿಸ್ತಾನದ ‘ದಲ್ಲಾಳಿ’ಗಳಾಗಿ ಬರುತ್ತಿದ್ದಾರೆ” ಎಂದು ಅಭಿಜಿತ್ ಹೀನಾಯವಾಗಿ ವಾಗ್ದಾಳಿ ನಡೆಸಿದ್ದಾರೆ.

ಆದರೆ ಬಾಲಿವುಡ್‌ ನಿರ್ಮಾಪಕ ಮಹೇಶ್ ಭಟ್, ನಟಿಶಬಾನಾ ಆಝ್ಮಿ ಸೇರಿದಂತೆ ಹಲವರು ಶಿವಸೇನೆ ಕ್ರಮಕ್ಕೆ ಅಸಮಧಾನ ವ್ಯಕ್ತ ಪಡಿಸಿದ್ದಾರೆ.

Write A Comment