ರಾಷ್ಟ್ರೀಯ

ನಾನು ದೆವ್ವವಾದರೆ, ಮೋದಿ ಬ್ರಹ್ಮ ರಾಕ್ಷಸ: ಲಾಲು

Pinterest LinkedIn Tumblr

laluಪಾಟ್ನಾ: ನಾನು ದೆವ್ವವಾದರೆ ಮೋದಿ ಬ್ರಹ್ಮ ರಾಕ್ಷಸ’, ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್​ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಿನ್ನೆ ಪ್ರಧಾನಿ ಮೋದಿಯವರು ತಮ್ಮನ್ನು ದೆವ್ವ ಎಂದು ಜರಿದುದ್ದಕ್ಕೆ ಪ್ರತಿ ದಾಳಿ ನಡೆಸಿರುವ ಬಿಹಾರ್‌ನ ಮಾಜಿ ಮುಖ್ಯಮಂತ್ರಿ, ‘ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ಸೂಕ್ತರಲ್ಲದ ವ್ಯಕ್ತಿ . ಅವರು ಆ ಹುದ್ದೆಗೇರಿದ್ದೆ ಒಂದು ದೊಡ್ಡ ದುರಂತ’. ಅವರು ಹಿಂದುಳಿದ ವರ್ಗಕ್ಕೆ ನೀಡಿರುವ ಮೀಸಲಾತಿಯನ್ನು ನಿಲ್ಲಿಸುವ ಪ್ರಯತ್ನ ನಡೆಸಿದರು. ನಾನದನ್ನು ಬಹಿರಂಗ ಪಡಿಸಿದ್ದಕ್ಕೆ ಅವರು ನನ್ನನ್ನು ದೆವ್ವ ಎಂದು ಜರಿದರು. ಇದು ಯಾದವ ಕುಲಕ್ಕೆ ಮಾಡಿದ ಅಪಮಾನ. ನಾನು ದೆವ್ವವಾದರೆ, ಅವರು ಬ್ರಹ್ಮ ರಾಕ್ಷಸ ಎಂದು ಲಾಲು ಹರಿಹಾಯ್ದಿದ್ದಾರೆ.

ಪ್ರತಿ ದಿನ ಹೊಸ ಹೊಸ ಬೈಗುಳದ ಪದದೊಂದಿಗೆ ಲಾಲು ಪ್ರಧಾನಿಯ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ.

Write A Comment