ಕರ್ನಾಟಕ

9,10ಕ್ಕೆ ಕೆಎಸ್‍ಆರ್‍ಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆ

Pinterest LinkedIn Tumblr

ksrtc_busಬೆಂಗಳೂರು: ಮಹಾಲಯ ಅಮಾವಾಸ್ಯೆ ಅಂಗವಾಗಿ ಅ.9 ಹಾಗೂ ಅ.10 ರಂದು ಕೆಎಸ್ ಆರ್‍ಟಿಸಿ ಹೆಚ್ಚುವರಿ ಬಸ್‍ಗಳ ಸೇವೆ ನೀಡಲಿದೆ. ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಸ್ಥಳದ ಅಭಾವವಿರುವು ದರಿಂದ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗಲು ನಗರದ ವಿವಿಧ ಕಡೆ ಪಿಕಪ್ ಪಾಯಿಂಟ್ ಗಳಿಂದ ಮುಂಗಡ ಬುಕ್ಕಿಂಗ್ ವ್ಯವಸ್ಥೆಯ ವಾಹನಗಳ ನ್ನು ಕಾರ್ಯಾಚರಿಸಲು ವ್ಯವಸ್ಥೆ ಮಾಡಲಾಗಿದೆ.

ಮೈಸೂರು ರಸ್ತೆ ಬಸ್ ನಿಲ್ದಾಣ, ಬಸವೇಶ್ವರ ಬಸ್ ನಿಲ್ದಾಣ (ಪೀಣ್ಯ), ಜಯನಗರ ಟಿಟಿಎಂಸಿ, ಗಂಗಾನಗರ, ಮಲ್ಲೇಶ್ವರ 18ನೇ ಕ್ರಾಸ್, ಜಯನಗರ 4ನೇ ಬ್ಲಾಕ್, ಮುಂತಾದ ಸ್ಥಳಗಳಿಂದ ಕಾರ್ಯಾಚರಣೆ ಮಾಡಲಿದೆ.

ಹೆಚ್ಚುವರಿ ವಾಹನಗಳಿಗೆ ಮುಂಗಡ ಟಿಕೆಟ್ ಪಡೆಯುವ ಪ್ರಯಾಣಿಕರು ಈ ಸ್ಥಳಗಳಿಂದಲೇ ಪ್ರಯಾಣಿಸಬಹು ದು. ಮುಂಗಡ ರಹಿತ ವಾಹನಗಳನ್ನು ಕೆಂಪೇಗೌಡ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

Write A Comment