ಕರ್ನಾಟಕ

ಬೆಂಗಳೂರು ಗ್ಯಾಂಗ್ ರೇಪ್: ಬಂಧಿತ ಇಬ್ಬರು ಆರೋಪಿಗಳು ಕಡೂರು ಮೂಲದವರು

Pinterest LinkedIn Tumblr

rrrಬೆಂಗಳೂರು  :   ಡ್ರಾಪ್ ಕೊಡುವುದಾಗಿ ಟೆಂಪೋ ಟ್ರಾವೆಲರ್ ನಲ್ಲಿ ಕರೆದೊಯ್ದು 22 ವರ್ಷದ ಕಾಲ್ ಸೆಂಟರ್ ಉದ್ಯೋಗಿ ಮೇಲೆ ಶನಿವಾರ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ  ವಿಶೇಷ  ಪೊಲೀಸರ ತಂಡ ತನಿಖೆ ಇಬ್ಬರು ಆರೋಪಿಗಳನ್ನು ಮಂಗಳವಾರ ನಸುಕಿನ ವೇಳೆ ಬಂಧಿಸಿದ್ದು, ಯೋಗೇಶ್ ಮತ್ತು ಸತೀಶ್ ಚಿಕ್ಕಮಗಳೂರಿನ ಕಡೂರು ಮೂಲದವರಾಗಿದ್ದಾರೆ. ಬಂಧಿತ ಆರೋಪಿಗಳು ಟಿಟಿ ಚಾಲಕ ಮತ್ತು ಕ್ಲೀನರ್ ಎಂದು ತಿಳಿದು ಬಂದಿದೆ.

ಟಿಟಿ ವಾಹನದಲ್ಲಿ ಅತ್ಯಾಚಾರ ನಡೆದಿರುವ ಹಿನ್ನಲೆಯಲ್ಲಿ ನೊಂದಣಿ ಮೂಲವನ್ನು ತನಿಖೆ ನಡೆಸುತ್ತಿರುವ ವಿಶೇಷ  ಪೊಲೀಸರು ಪತ್ತೆ ಹಚ್ಚಿದ್ದು,ಇಂದಿರಾ ನಗರ ಆರ್ಟಿಓನಲ್ಲಿ ನೊಂದಣಿಯಾಗಿರುವ ಶಂಕಿತ ಟಿಟಿ ವಾಹನವನ್ನು  ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದಿರುವ ವಾಹನ ಕೆಎ 03 ಬಿ 1863 ಸಂಖ್ಯೆಯ ದ್ದಾಗಿದ್ದು, ಶಂಕರ್‌ .ಎಲ್‌ ಎನ್ನುವವರಿಗೆ ಸೇರಿದ ವಾಹನ ಇದಾಗಿದೆ ಎಂದು ತಿಳಿದು ಬಂದಿದೆ. ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡ ರಚಿಸಲಾಗಿದೆ.

ಟಿಟಿ ವಾಹನದಲ್ಲಿ ಅತ್ಯಾಚಾರಕ್ಕೊಳಗಾದ ಯುವತಿ ಯ ಪರಿಚಯಸ್ಥನೂ ಒಬ್ಬ ಇದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಮಾದ್ಯಮಗಳ ವರದಿ ಹೇಳಿದೆ.

ಶನಿವಾರ ರಾತ್ರಿ  ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವತಿಯನ್ನು ದುಷ್ಕರ್ಮಿಗಳು ಡ್ರಾಪ್ ಕೊಡುವ ನೆಪದಲ್ಲಿ ಹತ್ತಿಸಿಕೊಂಡಿದ್ದಾರೆ. ಬಳಿಕ ಆಕೆಯನ್ನು ವಾಹನದಲ್ಲಿ ಮಡಿವಾಳ ಕಡೆ ಸುತ್ತಾಡಿಸಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ ಬಳಿಕ, ವಾಹನದಿಂದ ಇಳಿಸಿ ಪರಾರಿಯಾಗಿದ್ದರು.

ಪೊಲೀಸ್ ಮೂಲಗಳ ಪ್ರಕಾರ, ದೌರ್ಜನ್ಯಕ್ಕೊಳಗಾದ ಯುವತಿ ಮೂಲತಃ ಮಧ್ಯಪ್ರದೇಶದವಳಾಗಿದ್ದು, ಮಡಿವಾಳ ಹತ್ತಿರದ ಪಿಜಿಯಲ್ಲಿ ವಾಸವಾಗಿದ್ದು. ಕಾಲ್ಸೆಂಟರ್ನಲ್ಲಿ ಉದ್ಯೋಗದಲ್ಲಿರುವ ಆಕೆ, ಶನಿವಾರ ಕೆಲಸ ಮುಗಿಸಿ ಮರಳುತ್ತಿದ್ದಳು.

ಅಸ್ವಸ್ಥಗೊಂಡಿದ್ದ ಯುವತಿ, ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು, ಆಕೆಯನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದರು . ಸೋಮವಾರ ಆಸ್ಪತ್ರೆಯಿಂದ ಶೋಷಿತ ಯುವತಿ ಹಾಸ್ಟೆಲ್ ಗೆ  ಮರಳಿದ್ದಾಳೆ .
-ಉದಯವಾಣಿ

Write A Comment