ಮನೋರಂಜನೆ

ಬಾಲನಟಿಗೆ ಲೈಂಗಿಕ ಕಿರುಕುಳ ನೀಡಿದ ಆಡ್-ಚಿತ್ರ ನಿರ್ದೇಶಕ

Pinterest LinkedIn Tumblr

davನವದೆಹಲಿ; ಬಾಲನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದೆಹಲಿ ಪೊಲೀಸರು ಆಡ್-ಚಿತ್ರ ನಿರ್ದೇಶಕನೊಬ್ಬನನ್ನು ಬಂಧಿಸಿದ್ದಾರೆ. ದಕ್ಷಿಣ ದೆಹಲಿಯ ಫತೇಪುರ್ ಬೇರಿ ಪ್ರದೇಶದಲ್ಲಿ ಈ ಕೀಚಕ ಕೃತ್ಯ ನಡೆದಿದೆ.

ಆರೋಪಿಯನ್ನು ರವಿಂದರ್ ಅಹ್ಲಾವಟ್(47) ಎಂದು ಗುರುತಿಸಲಾಗಿದ್ದು, ಸಾಕ್ಷ್ಯಚಿತ್ರ ನಿರ್ಮಾಪಕನಾಗಿ ಕೆಲಸ ಮಾಡುವ ಆತ ಲಜಪತ್ ನಗರ ಪ್ರದೇಶದಲ್ಲಿ ಒಂದು ನಟನಾ ಶಾಲೆಯನ್ನು ಸಹ ನಡೆಸುತ್ತಿದ್ದಾನೆ.

ತನ್ನ ಮೇಲೆ ಆರೋಪ ಕೇಳಿ ಬಂದಾಗಿನಿಂದ ನಾಪತ್ತೆಯಾಗಿದ್ದ ಆರೋಪಿ, ಕಳೆದ ವಾರವಷ್ಟೇ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಕಳೆದ ತಿಂಗಳು ಫತೇಹ್ಪುರ ಬೇರಿಯಲ್ಲಿ  ಚಿತ್ರೀಕರಣಕ್ಕೆ ತೆರಳಿದ್ದಾಗ ಆರೋಪಿ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದ. ಅದಕ್ಕೆ ಆಕ್ಷೇಪಿಸಿದಾಗ ತನ್ನ ತಂಡದಿಂದ ಹೊರಹಾಕುವುದಾಗಿ ಬೆದರಿಕೆ ಒಡ್ಡಿದ್ದ ಎಂದು ಅಪ್ರಾಪ್ತೆ ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಾಳೆ.

ನಟನಾ ಪಾಠವನ್ನು ಹೇಳಿಕೊಡುವುದಾಗಿ ಮತ್ತು  ಸಾಕ್ಷ್ಯಚಿತ್ರ ಹಾಗೂ ಆಡ್-ಚಿತ್ರಗಳಲ್ಲಿ ನಟಿಸುವ ಅವಕಾಶ ನೀಡುವುದಾಗಿ ಹೇಳಿ ಆಮಿಷ ಒಡ್ಡಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಬಾಲಕಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

Write A Comment