ರಾಷ್ಟ್ರೀಯ

ಆಘಾತಕಾರಿ: 9 ವರ್ಷದವನಿಂದ ಅತ್ಯಾಚಾರ

Pinterest LinkedIn Tumblr

rapeಫಿಲಿಬಿಟ್: ಉತ್ತರ ಪ್ರದೇಶದಲ್ಲಿ ದಿನೇ ದಿನೇ ಅಪರಾಧಗಳು ಹೆಚ್ಚುತ್ತಿದ್ದು, ಕಳೆದ ಮಂಗಳಾರ ಇಡೀ ದೇಶನ್ನು ಬೆಚ್ಚಿಬೀಳಿಸುವ ಕರಾಳ ಘಟನೆಯೊಂದು ನಡೆದಿದೆ. ಫಿಲಿಬಿಟ್‌ನ ಮೈಥಿಯಲ್ಲಿ 9 ವರ್ಷದ ಬಾಲಕನೊಬ್ಬ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಉತ್ತರ ಪ್ರದೇಶ ಪೊಲೀಸರ ಪ್ರಕಾರ ದೇಶದ ಅಥವಾ ಜಗತ್ತಿನ ಇತಿಹಾಸದಲ್ಲಿ ರೇಪ್ ಆರೋಪ ಹೊತ್ತ ಅತಿ ಚಿಕ್ಕ ವಯಸ್ಸಿನವನೀತ.

ಬಾಲಕನನ್ನು ರಿಮ್ಯಾಂಡ್ ಹೋಮ್‌ಗೆ ಕಳುಹಿಸಲಾಗಿದ್ದು, ಬಾಲಕಿಯ ಮೇಲೆ ಅತ್ಯಾಚಾರವಾಗಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.

ಬಾಲಕಿ ಜಾಟವ ಸಮುದಾಯಕ್ಕೆ ಸೇರಿದವಳಾಗಿದ್ದು ಬಾಲಕನ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಬಾಲಕನನ್ನು ಮ್ಯಾಜಿಸ್ಟ್ರೇಟ್ ಮುಂದೆ ವಿಚಾರಣೆಗೊಳಪಡಿಸಲಾಗಿದ್ದು, ಆತ ತಾನು ಎಸಗಿದ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆತನ ವಯಸ್ಸು ಎಷ್ಟೆಂದು ಇನ್ನೂ ದೃಢಪಟ್ಟಿಲ್ಲ. ಆದರೆ ಆತ 10ವರ್ಷದ ಒಳಗಿದ್ದಾನೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸರ್ಕಲ್ ಆಫೀಸರ್ ನಿರ್ಮಲ್ ಬಿಸ್ಥ್ ತಿಳಿಸಿದ್ದಾರೆ.

ಪೀಡಿತೆಯ ಅಣ್ಣ ಹೇಳುವ ಪ್ರಕಾರ, ಆತನ ತಂಗಿ ಚಾಕಲೇಟು ತರಲೆಂದು ಅಂಗಡಿಗೆ ಹೋದಾಗ ಆರೋಪಿ ಬಾಲಕ ಆಟವಾಡುವ ನೆಪದಲ್ಲಿ ಆಕೆಯನ್ನು ಕರೆದೊಯ್ದು ಹತ್ತಿರದ ಹೊಲದಲ್ಲಿ ಅತ್ಯಾಚಾರವೆಸಗಿದ್ದಾನೆ. ಸ್ವಲ್ಪ ಸಮಯದ ನಂತರ ಆಕೆ ಅಳುತ್ತ ಮನೆಗೆ ಬಂದಿದ್ದಾಳೆ. ಆ ಸಮಯದಲ್ಲಿ ಆಕೆಗೆ ರಕ್ತಸ್ರಾವವಾಗುತ್ತಿತ್ತು. ಏನಾಯಿತೆಂದು ಕೇಳಿದಾಗ ಆಕೆ ಆತನ ಬಳಿ ಎಲ್ಲ ವಿಷಯವನ್ನು ವಿವರಿಸಿದ್ದಾಳೆ.

ಪ್ರಕರಣ ಬೆಳಕಿಗೆ ಬಂದಾಗಿನಿಂದ ಬಾಲಕ ಮತ್ತು ಆತನ ಕುಟುಂಬ ನಾಪತ್ತೆಯಾಗಿತ್ತು. ಆದರೆ ಶುಕ್ರವಾರ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ವಲ್ಪ ಹೆದರಿಕೊಂಡಂತೆ ಕಂಡುಬಂದ ಬಾಲಕ ಪೊಲೀಸರು ಕೃತ್ಯದ ಬಗ್ಗೆ ವಿಚಾರಿಸಿದಾಗ ಆಟವಾಡುತ್ತ ಆಟವಾಡುತ್ತ ನಡೆದು ಹೋಯಿತು ಎಂದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

“9 ವರ್ಷದ ಬಾಲಕನ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಾಗ  ನನಗೆ ನಂಬಲಾಗಲಿಲ್ಲ. ಆದರೆ ಆತ  ತಾನೆಸಗಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ”, ಎಂದು ಠಾಣಾಧಿಕಾರಿ ದಲ್ಬೀರ್ ವರ್ಮಾ ತಿಳಿಸಿದ್ದಾರೆ.

ದೇಶದಲ್ಲಿ ಬಾಲಾಪರಾಧಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ.” ಇಂಟರ್ನೆಟ್‌ನಲ್ಲಿ ಪೋರ್ನೋಗ್ರಾಫಿ, ಟಿವಿ ಮತ್ತು ಸಿನೆಮಾಗಳು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತಿವೆ,” ಎನ್ನುತ್ತಾರೆ ಬರೇಲಿ ಮೂಲದ ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಭಂಡಾರಿ.

Write A Comment