ಬೆಂಗಳೂರು,ಸೆ.29: ಹೆಚ್‍ಎಎಲ್‍ನ ಯಮಲೂರಿನಲ್ಲಿ ಆಟೋ ಹತ್ತಿದ್ದ ಹೋಮಿಯೋಪತಿ ವೈದ್ಯೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆಟೋಚಾಲಕನನ್ನು ಹೆಚ್‍ಎಎಲ್ ಪೊಲೀಸರು ಬಂಧಿಸಿದ್ದಾರೆ.
ಕಳೆದ ಸೆ.12 ರಂದು ರಾತ್ರಿ 7.30ರಲ್ಲಿ ಯಮಲೂರಿಗೆ ಹೋಗಲು ಹೆಚ್‍ಎಎಲ್ ಬಳಿ ಆಟೋ ಹತ್ತಿದ ಸುಮಾರು 35 ವರ್ಷದ ಹೋಮಿಯೋಪತಿ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ ಯಮಲೂರಿನ ಮಣಿಕಂಠ(24)ನನ್ನು ಹೆಚ್‍ಎಎಲ್ ಪೊಲೀಸರು ಬಂಧಿಸಿದ್ದಾರೆ.
ಯಮಲೂರಿಗೆ ತೆರಳುವ ನಿರ್ಜನ ಪ್ರದೇಶದಲ್ಲಿ ಆಟೋವನ್ನು ನಿಲ್ಲಿಸಿದ ಚಾಲಕ ಅವರ ಮೇಲೆ ಅತ್ಯಚಾರಕ್ಕೆ ಯತ್ನಿಸಿದ್ದಾನೆ. ಆತನಿಂದ ತಪ್ಪಿಸಿಕೊಂಡ ವೈದ್ಯೆ ಹೆಚ್‍ಎಎಲ್ ಠಾಣೆಯಲ್ಲಿ ಆಟೋ ನಂಬರ್ ಸಮೇತ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ವೈದ್ಯೆ ನೀಡಿದ ಆಟೋ ನಂಬರ್‍ನಿಂದ ಅದರ ಮಾಲೀಕನನ್ನು ಪತ್ತೆಹಚ್ಚಿ ತಲೆ ಮರೆಸಿಕೊಂಡಿದ್ದ ಮಣಿಕಂಠನಿಗಾಗಿ ತೀವ್ರ ಶೋಧ ನಡೆಸಿದ್ದರು.ಮಾಲೀಕ ವಿಚಾರಣೆಯಲ್ಲಿ ನೀಡಿದ ಮಾಹಿತಿ ಆಧರಿಸಿ ಆತನನ್ನು ನಿನ್ನೆ ಬಂಧಿಸಲಾಗಿದೆ ಎಂದು ಡಿಸಿಪಿ ಡಾ.ರೋಹಿಣಿ ಕಟೋಚ್ ತಿಳಿಸಿದ್ದಾರೆ.
