ಅಂತರಾಷ್ಟ್ರೀಯ

ಹೊಸ ಇತಿಹಾಸ ಸೃಷ್ಟಿಸಿದ ‘ಕನ್ನಡಿಗವರ್ಲ್ಡ್’: ಫೇಸ್‌ಬುಕ್‌ನಲ್ಲಿ 3 ಲಕ್ಷದ ಗಡಿದಾಟಿದ ಓದುಗರ ಲೈಕ್; ಕೆಲವೇ ಕೆಲವು ಸಮಯದಲ್ಲಿ ಸಾಧನೆಯ ಹೆಗ್ಗಳಿಕೆ

Pinterest LinkedIn Tumblr

facebook

ದುಬೈ, ಸೆ.26: ಕೆಲವೇ ಕೆಲವು ಸಮಯದೊಳಗೆ ‘ಕನ್ನಡಿಗವರ್ಲ್ಡ್’ ನ್ಯೂಸ್ ವೆಬ್‌ಸೈಟ್ ಮಹತ್ತರ ಮೈಲುಗಲ್ಲನ್ನು ಸಾಧಿಸಿದ್ದು, ಫೇಸ್‌ಬುಕ್ ಪೇಜ್‌ನಲ್ಲಿ ಮೂರು ಲಕ್ಷ ಓದುಗರ ಲೈಕ್‌ಗಳ ಗಡಿಗಾಟುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.

ಈ ಮಹತ್ವದ ಗುರಿ ಸಾಧಿಸುವಲ್ಲಿ ‘ಕನ್ನಡಿಗವರ್ಲ್ಡ್’ ಕನ್ನಡ-ಇಂಗ್ಲಿಷ್ ನ್ಯೂಸ್ ವೆಬ್‌ಸೈಟ್‌ಗೆ ಬೆನ್ನೆಲುಬಾಗಿ ನಿಂತ ಓದುಗ ಬಳಗಕ್ಕೆ ಕೃತಜ್ಞತೆಗಳು. 2013ರ ಮಾರ್ಚ್ 15ರಂದು ದುಬೈ ‘ಆ್ಯಕ್ಮೆ ವಿಷನ್’ ಅಡಿಯಲ್ಲಿ ಆರಂಭಗೊಂಡಿರುವ ‘ಕನ್ನಡಿಗವರ್ಲ್ಡ್’ ತಾಜಾ ಸುದ್ದಿಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವ ಜೊತೆಗೆ ಕರ್ನಾಟಕ, ಕರಾವಳಿ ಭಾಗದ ಓದುಗರ ಅಭಿರುಚಿಗೆ ತಕ್ಕಂತೆ ಸುದ್ದಿ, ಮಾಹಿತಿಯ ಭಂಡಾರವನ್ನೇ ನೀಡುತ್ತಾ ಮುಂದೆ ಸಾಗುತ್ತಿದೆ.

ದಿನದ 24 ಗಂಟೆಗಳ ಕಾಲವು ಓದುಗರಿಗೆ ರಾಜಕೀಯ, ಸಾಮಾಜಿಕ, ಆರ್ಥಿಕ, ಕ್ರೀಡಾ, ಅಪರಾಧ, ದೇಶ-ವಿದೇಶಗಳ ಸುದ್ದಿಗಳು ಸೇರಿದಂತೆ ವಿವಿಧ ರೀತಿಯ ಮಾಹಿತಿಯನ್ನು ಓದುಗರಿಗೆ ನೀಡುತ್ತಾ ಬಂದಿರುವ ‘ಕನ್ನಡಿಗವರ್ಲ್ಡ್’, ಇದೀಗ 3 ಲಕ್ಷ ಓದುಗರ ಲೈಕ್‌ಗಳನ್ನು ಪಡೆಯುವ ಮೂಲಕ ಸಾಧನೆಯ ಗರಿಯನ್ನು ಮುಡಿಗೇರಿಸಿಕೊಂಡಿದೆ.

ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಕೋಲಾರ, ಹುಬ್ಬಳ್ಳಿ, ಬೆಳಗಾವಿ, ಕರಾವಳಿ ಕರ್ನಾಟಕದ ಭಾಗವಾಗಿರುವ ಮಂಗಳೂರು-ಉಡುಪಿ, ಉತ್ತರ ಕರ್ನಾಟಕ, ಮುಂಬೈ ಸೇರಿದಂತೆ ಭಾರತದ ನಾನಾ ಭಾಗಗಳ ತಾಜಾ ಸುದ್ದಿಗಳನ್ನು ಹಾಗೂ ವಿಶ್ವದ ಮೂಲೆಮೂಲೆಗಳ ಆಗುಹೋಗುಗಳನ್ನು ಓದುಗರಿಗೆ ಮುಟ್ಟಿಸುವ ಮೂಲಕ ಕೆಲವೇ ಸಮಯದಲ್ಲಿ ಅತ್ಯಂತ ಹೆಚ್ಚು ಓದುಗ ಬಳಗವನ್ನು ಸೃಷ್ಟಿಸಿರುವ ಹೆಗ್ಗಳಿಕೆ ‘ಕನ್ನಡಿಗವರ್ಲ್ಡ್’ ವೆಬ್‌ಸೈಟಿನದ್ದು.

ದುಬೈ ಹಾಗೂ ಗಲ್ಫ್ ದೇಶಗಳಲ್ಲಿ ಕನ್ನಡಿಗರು, ಭಾರತೀಯರು ನಡೆಸುವ ಕಾರ್ಯಕ್ರಮಗಳನ್ನು ಹಲವಾರು ಫೋಟೋಗಳೊಂದಿಗೆ ಸವಿವರವಾದ ಮಾಹಿತಿಯನ್ನು ನೀಡುವುದರೊಂದಿಗೆ ಹೊರದೇಶಗಳಲ್ಲಿರುವ ಭಾರತೀಯ ಓದುಗರ ಬಳಗವನ್ನೇ ‘ಕನ್ನಡಿಗವರ್ಲ್ಡ್’ ಹೊಂದಿದೆ.

ಫೇಸ್‌ಬುಕ್‌ನಲ್ಲಿ ಆಶ್ಚರ್ಯಕರ ರೀತಿಯಲ್ಲಿ ದಿನದಿಂದ ದಿನಕ್ಕೆ ಸಾವಿರಾರು ಮಂದಿ ಓದುಗರ ಲೈಕ್‌ಗಳನ್ನು ಗಳಿಸುತ್ತ ಮುನ್ನುಗ್ಗುತ್ತಿರುವ ‘ಕನ್ನಡಿಗವರ್ಲ್ಡ್’ ವೆಬ್‌ಪೇಜ್ ಇನ್ನಷ್ಟು ಓದುಗರ ಮೆಚ್ಚುಗೆಯನ್ನು ಗಳಿಸುವ ಜೊತೆಗೆ ಸಾಧನೆಯನ್ನು ಮೆರೆಯಲು ಓದುಗರು ಸಹಾಯ-ಸಹಕಾರವನ್ನು ನೀಡಲಿ ಎಂದು ‘ಕನ್ನಡಿಗವರ್ಲ್ಡ್’ ವೆಬ್‌ಬಳಗ ಆಶಿಸುತ್ತದೆ.

Write A Comment