ಪ್ರಮೋಶನ್ ಸಿಕ್ಕ ಖುಷಿಯಲ್ಲಿ ಗುಂಡಿನ ಪಾರ್ಟಿ ನಡೆಸಿ ಕಂಠಪೂರ್ತಿ ಕುಡಿದಿದ್ದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಕಾಮುಕನೊಬ್ಬ ಜೈಲು ಪಾಲಾದ ಘಟನೆ ದೆಹಲಿಯಲ್ಲಿ ನಡೆದಿದೆ.
ಹೌದು. ದೆಹಲಿ ಮೂಲದ ಸಂಜೀವ್ ಕುಮಾರ್ ಎಂಬಾತನಿಗೆ ಆತ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಪ್ರಮೋಶನ್ ದೊರೆತಿತ್ತು. ಈ ಖುಷಿಯನ್ನು ಸಂಭ್ರಮಿಸಲು ಆತ ತನ್ನ ಎಲ್ಲ ಸಹೋದ್ಯೋಗಿಗಳಿಗಾಗಿ ಗುಂಡಿನ ಪಾರ್ಟಿ ಏರ್ಪಡಿಸಿದ್ದ.ಈ ಪಾರ್ಟಿಗೆ ಪುರುಷರ ಜೊತೆ ಮಹಿಳಾ ಸಹೋದ್ಯೋಗಿಗಳೂ ಬಂದಿದ್ದರು. ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದಿದ್ದ ಮಹಿಳೆಯೊಬ್ಬರು ಮತ್ತೇರಿ ಬಿದ್ದಿದ್ದರು. ಈ ಸಮಯದಲ್ಲಿ ಆತ ಆಕೆಯ ಮೇಲೆ ಅತ್ಯಾಚಾರ ನಡೆಸಿ ತನ್ನ ಕಾಮತೃಷೆ ತೀರಿಸಿಕೊಂಡಿದ್ದ ಎನ್ನಲಾಗಿದೆ. 2014ರ ಮೇ10ರಂದೇ ಈ ಘಟನೆ ನಡೆದಿತ್ತು. 2 ದಿನಗಳ ಬಳಿಕ ನೊಂದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣ ನ್ಯಾಯಾಲಯದ ಮೇಟ್ಟಿಲೇರಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮನೆಗೆ ಬಂದಿದ್ದ ಅತಿಥಿ ಮದ್ಯ ಸೇವಿಸಿ ಪ್ರಜ್ಞೆ ತಪ್ಪಿದ್ದಾಗ ಅತ್ಯಾಚಾರ ಎಸಗಿರುವ ಘೋರ ಅಪರಾಧ ಎಂದು ಪರಿಗಣಿಸಿರು ಕೋರ್ಟ್ 4 ವರ್ಷ ಕಠಿಣ ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಿ ಆದೇಶಿಸಿದೆ.