ಕರ್ನಾಟಕ

ಮಂಡ್ಯ: ರೈತ ಹೋರಾಟ ಜಾಥಾಕ್ಕೆ ಚಾಲನೆ

Pinterest LinkedIn Tumblr

raಮಂಡ್ಯ: ಕರ್ನಾಟಕ ಜನಶಕ್ತಿ, ಕರ್ನಾಟಕ ರಾಜ್ಯ ರೈತಸಂಘ ಮತ್ತು ಇನ್ನಿತರ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಜಿಲ್ಲೆಯ 750 ಹಳ್ಳಿಗಳಲ್ಲಿ ಸಂಚರಿಸುವ ‘ರೈತ ಹೋರಾಟ ಜಾಥಾ’ಕ್ಕೆ ಇಂದು ಗೆಜ್ಜಲಗೆರೆಯಲ್ಲಿ ಚಾಲನೆ ನೀಡಲಾಯಿತು.

1982ರ ಗೋಲೀಬಾರ್‌ನಲ್ಲಿ ಹತ್ಯೆಗೊಳಗಾದ ರೈತ ಹುತಾತ್ಮರ ಪತ್ನಿ ಪುಟ್ಟತಾಯಮ್ಮನವರು ಹುತಾತ್ಮ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಜಾಥಾವನ್ನು ಉದ್ಘಾಟಿಸಲಾಯಿತು. ಉದ್ಘಾಟನೆಯ ವೇಳೆ ಹಿರಿಯ ಗಾಂಧಿವಾದಿ ಸುರೇಂದ್ರ ಕೌಲಗಿ, ಹಿರಿಯ ಬರಹಗಾರ ಪ್ರೊ.ಎಚ್.ಎಲ್.ಕೇಶವಮೂರ್ತಿ, ಪ್ರಜಾತಾಂತ್ರಿಕ ಜನರ ವೇದಿಕೆಯ ಪ್ರೊ.ನಗರಿ ಬಾಬಯ್ಯ, ಪ್ರೊ.ನಗರಗೆರೆ ರಮೇಶ್, ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ.ಪಿ.ನಾಗರಾಜು ಮತ್ತಿತರರು ಜೊತೆಯಲ್ಲಿದ್ದರು.

ಉದ್ಘಾಟನೆಯ ನಂತರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಜನಶಕ್ತಿಯ ರಾಜ್ಯ ಸಂಚಾಲಕ ಡಾ.ವಾಸು ಎಚ್.ವಿ. ಅವರು ಮಾತನಾಡಿ, 80ರ ದಶಕದಲ್ಲಿ ಗೋಲೀಬಾರ್ ಮೂಲಕ ನೂರಾರು ರೈತರನ್ನು ಗುಂಡಿಕ್ಕಿ ಕೊಲ್ಲಲಾಯಿತು; ಆದರೆ ಈಗ ಒಂದು ಗುಂಡೂ ಹಾರಿಸದೇ, ಕಳೆದ 18 ವರ್ಷಗಳಲ್ಲಿ ಎರಡೂವರೆ ಲಕ್ಷ ರೈತರನ್ನು ‘ಆತ್ಮಹತ್ಯೆ’ಯ ಮೂಲಕ ಕೊಲ್ಲಲಾಗಿದೆ ಎಂದರು. ಅಂದಿನ ಗೋಲೀಬಾರ್ ಈ ರಾಜ್ಯದಲ್ಲಿ ಒಂದು ಬೃಹತ್ ರೈತಚಳವಳಿಗೆ ಕಾರಣವಾಯಿತು. ಇಂದು ಅದಕ್ಕಿಂತಲೂ ತೀವ್ರವಾದ ಮತ್ತು ವಿವೇಕಯುತವಾದ ಬೃಹತ್ ಚಳವಳಿ ಹುಟ್ಟಿಕೊಳ್ಳಬೇಕಾಗಿದೆ ಎಂದು ನುಡಿದರು.|

ರೈತನಾಯಕಿ ಸುನಂದಾ ಜಯರಾಂ ಅವರು ಮಾತನಾಡಿ, ’90ರ ದಶಕದಲ್ಲೇ ಡಬ್ಲ್ಯುಟಿಓ ಒಪ್ಪಂದದ ಸಂದರ್ಭದಲ್ಲಿ ರೈತ ಚಳವಳಿಯು ನುಡಿದ ಎಚ್ಚರಿಕೆಯ ಮಾತುಗಳನ್ನು ಆಳುವವರು ನಿರ್ಲಕ್ಷಿಸಿದ್ದರಿಂದ ಇಂದು ಈ ರೀತಿಯ ಸರಣಿ ಆತ್ಮಹತ್ಯೆಗಳೂ ನಡೆಯುತ್ತಿವೆ ಎಂದರು.

ಆ ನಂತರ ರೈತಸಂಘದ ಜಿಲ್ಲಾಧ್ಯಕ್ಷ ಬೋರಾಪುರದ ಶಂಕರೇಗೌಡ, ಗೆಜ್ಜಲಗೆರೆ ಪಂಚಾಯ್ತಿ ಅಧ್ಯಕ್ಷರು, ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರುಗಳು ವೇದಿಕೆಯ ಮೇಲಿದ್ದರು. ಕಾರ್ಯಕ್ರಮದ ನಂತರ ಕನರ್ಾಟಕ ವಿದ್ಯಾಥರ್ಿ ಸಂಘಟನೆಯ ವಿದ್ಯಾಥರ್ಿಗಳು ‘ಅಭಿವೃದ್ಧಿಯೋ ಅಭಿವೃದ್ಧಿ’ ಎಂಬ ಬೀದಿ ನಾಟಕ ಪ್ರದರ್ಶನ ಮಾಡಿದರು.

ಆ ನಂತರ ಜಾಥಾದ ಎರಡು ತಂಡಗಳು ಕುದುರಗುಂಡಿ ಹಾಗೂ ವಳಗೆರೆಹಳ್ಳಿಯತ್ತ ಸಾಗಿದವು. ಜಾಥಾದ ಹಕ್ಕೊತ್ತಾಯಗಳನ್ನು ಈ ಕೆಳಕಂಡಂತೆ ಸಾದರಪಡಿಸಲಾಯಿತು.

1. ಅವಧಿ ಮೀರಿದ ಕಬ್ಬಿಗೆ ಎಕರೆಗೆ 50,000 ರೂ ಪರಿಹಾರ, ಟನ್ನಿಗೆ 3,500 ರೂ ಎಫ್ಆರ್ಪಿ ನಿಗದಿ, ಆಲೆಮನೆಗಳಿಗೂ ಸಹಾಯಧನ. ಸಕ್ಕರೆ ಕಾಖರ್ಾನೆಗಳ ಕ್ರಷಿಂಗ್ ಕೂಡಲೇ ಆರಂಭ. ಭತ್ತ, ರೇಷ್ಮೆ, ಬಾಳೆ, ತರಕಾರಿ ಒಳಗೊಂಡಂತೆ ಯಾವುದೇ ಬೆಳೆ ನಷ್ಟಕ್ಕೆ ಪರಿಹಾರ ನಿಗದಿ. ರೇಷ್ಮೆಗೆ ಕೆ.ಜಿ.ಗೆ ಕನಿಷ್ಠ 380 ರೂ. ನಿಗದಿ. ಭತ್ತಕ್ಕೆ ಕ್ವಿಂಟಾಲ್ಗೆ 2000 ರೂ.
2. ಖಾಸಗಿ ಲೇವಾದೇವಿದಾರರ ಮೇಲೆ ಕ್ರಮ. ಆದರೆ ಸಕರ್ಾರೀ/ಸಾಂಸ್ಥಿಕ ಸಾಲದ ನೆರವು ಇಲ್ಲದಿದ್ದರೆ ಇದರಿಂದ ತೊಂದರೆಯೇ ಹೆಚ್ಚು. ಸಹಕಾರಿ ಸಂಸ್ಥೆಗಳ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರು ಮತ್ತು ಕೃಷಿ ಕಾಮರ್ಿಕರು ಪಡೆದಿರುವ ಎಲ್ಲಾ ಸಾಲ ಮನ್ನಾ. ಅಲ್ಲಿಯವರೆಗೆ ಬಡ್ಡಿ ಲೆಕ್ಕ ಸ್ಥಗಿತ. ಹೊಸ ಸಾಲ ನೀಡಿಕೆ ಕೂಡಲೇ ಆರಂಭ. ಎಲ್ಲಾ ಬೆಳೆಗಳಿಗೂ ಸಾಲ ನೀಡಿಕೆ. ಸಾಲದ ನೋಟೀಸ್ ನೀಡುತ್ತಿರುವ ಹಣಕಾಸು ಸಂಸ್ಥೆಗಳ ಮೇಲೆ ಕ್ರಮ.
3. ನೀರು ನಿರ್ವಹಣೆಯಲ್ಲಿ ದಕ್ಷತೆ, ಬೆಳೆ ಒಣಗದಿರುವಂತೆ ನೀರು ಪೂರೈಕೆ, ಪಂಪ್ಸೆಟ್ ಬಳಕೆದಾರರಿಗೆ ಹಗಲು ಹೊತ್ತಿನಲ್ಲೇ 12 ಗಂಟೆಗಳ ಕಾಲ ನಿರಂತರ 3 ಫೇಸ್ ವಿದ್ಯುತ್ ಪೂರೈಕೆ.
4. ಹಾಲಿಗೆ ನೀಡುತ್ತಿರುವ ದರ ಇಳಿಕೆ ಅಕ್ಷಮ್ಯ. ಕನಿಷ್ಠ ಲೀಟರ್ಗೆ 26 ರೂ. ಕುರಿ, ಕೋಳಿ, ಹಂದಿ ಸಾಕಣೆ ಹಾಗೂ ಮೀನುಗಾರಿಕೆ ಬೆಳವಣಿಗೆಗೆ ತಕ್ಷಣದಿಂದಲೇ ಪ್ರೋತ್ಸಾಹಧನ.
5. ಮುಂದಿನ ಸೀಸನ್ನ ಎಲ್ಲಾ ಬೆಳೆಗಳಿಗೆ ಈಗಲೇ ವೈಜ್ಞಾನಿಕ ಬೆಲೆ ನಿಗದಿ. ಸಕರ್ಾರದಿಂದ ಬೆಲೆ ಖಾತರಿ ಭರವಸೆ. ಯಾವ ಬೆಳೆ ಎಷ್ಟು ಬೆಳೆಯಬೇಕೆಂಬುದರ ಕುರಿತು ವೈಜ್ಞಾನಿಕ ಮತ್ತು ಪ್ರೋತ್ಸಾಹದಾಯಕ ವಿಧಾನಗಳ ಮೂಲಕ ನಿರ್ವಹಣೆ. ಮಾರುಕಟ್ಟೆಯ ಮೇಲೆ ಸಕರ್ಾರದ ಸಂಪೂರ್ಣ ನಿಯಂತ್ರಣ. ಬಡ ಗ್ರಾಹಕರ ಅನುಕೂಲಕ್ಕೆ ಸಬ್ಸಿಡಿ ನೀಡಿಕೆಯ ಮುಂದುವರಿಕೆ.
6. ಬೀಜ, ಗೊಬ್ಬರ, ಕೀಟನಾಶಕ ಕಂಪೆನಿಗಳ ಲಾಭಕೋರತನವನ್ನು, ಇಡೀ ಕೃಷಿ ಕ್ಷೇತ್ರದ ಒಳಸುರಿ ಮಾರುಕಟ್ಟೆಯನ್ನು ಅವರ ಕೈಗೊಪ್ಪಿಸಿರುವುದನ್ನು ತಡೆಯದೇ ರೈತರ ಸಮಸ್ಯೆ ನಿವಾರಣೆ ಹೇಗೆ ಸಾಧ್ಯ? ಅವುಗಳಿಗೆ ನಿಯಂತ್ರಣ, ಈ ಸೀಸನ್ನಿಂದಲೇ ಬೀಜ, ಗೊಬ್ಬರಗಳಿಗೆ ಸಬ್ಸಿಡಿಯ ಹೆಚ್ಚಳ ಮತ್ತು ಸುಸ್ಥಿರ, ಪರಿಸರ ಸ್ನೇಹಿ (ನೈಸಗರ್ಿಕ ಮತ್ತು ಸಾವಯವ ಕೃಷಿ) ಕೃಷಿ ಪದ್ಧತಿಯೆಡೆಗೆ ಸಾಗಲು ಬೇಕಾದ ದೀರ್ಘಕಾಲಿಕ ಕ್ರಮಗಳಿಗೆ ಉತ್ತೇಜನ.
7. ಶಿಕ್ಷಣ ಮತ್ತು ಆರೋಗ್ಯ: ಜಿಲ್ಲೆಯ ಸಕರ್ಾರೀ ಶಾಲಾ ಕಾಲೇಜುಗಳು ಹಾಗೂ ಸಕರ್ಾರೀ ಆಸ್ಪತ್ರೆಗಳ ಗುಣಮಟ್ಟವನ್ನು ಹೆಚ್ಚಿಸಲು ನಿದರ್ಿಷ್ಟ ಕ್ರಮಗಳು. ಆ ಮೂಲಕ ಈ ಎರಡೂ ಅತ್ಯಗತ್ಯ ಮಾನವ ಹಕ್ಕುಗಳ ನಿಭಾವಣೆಗೆ ತಗುಲುವ ಖಚರ್ು ಕಡಿಮೆಯಾಗುವಂತೆ ನೋಡಿಕೊಳ್ಳುವುದು. ನರೇಗಾ ಯೋಜನೆ ಸೇರಿದಂತೆ ವಿವಿಧ ಕ್ರಮಗಳ ಮೂಲಕ ಉದ್ಯೋಗ ಸೃಷ್ಟಿ ಮತ್ತು ಶ್ರಮಿಕ ವರ್ಗಕ್ಕೆ ಕೂಡಲೇ ಹಣ ಪಾವತಿಯಾಗಲು ಬೇಕಾದ ಬದಲಾವಣೆಗಳು
8. 2003ರಿಂದ ಇಲ್ಲಿಯವರೆಗೆ ಸಕರ್ಾರವೇ ವ್ಯವಸ್ಥಿತವಾಗಿ ಮದ್ಯ ಮಾರಾಟದ ಗುರಿ (ಟಾಗರ್ೆಟ್) ಹೆಚ್ಚಿಸುತ್ತಾ, ಜಿಲ್ಲೆಯಲ್ಲಿ ಕುಡಿತ ನೂರಾರು ಕೋಟಿ ರೂ. ಹೆಚ್ಚಾಗುವಂತೆ ಮತ್ತು ಅನಧಿಕೃತ ಮದ್ಯ ಮಾರಾಟ ಆಗುವಂತೆ ನೋಡಿಕೊಂಡಿದೆ. ಈ ತಿಂಗಳಿಂದ ಟಾಗರ್ೆಟ್ ಕಡಿಮೆ ಮಾಡುತ್ತಾ ಬರಬೇಕು.
9. ಡಬ್ಲ್ಯುಟಿಓ ಒಪ್ಪಂದದಿಂದ ಹಿಂದೆ ಸರಿಯಲು ಆರಂಭಿಸಬೇಕು. ಎರಡೂವರೆ ಲಕ್ಷಕ್ಕೂ ಹೆಚ್ಚು ರೈತರ ಆತ್ಮಹತ್ಯೆಗಳಿಗೆ ಕಾರಣವಾಗಿರುವುದಕ್ಕಿಂತ ದೊಡ್ಡ ಕಾರಣ ಇನ್ನೇನು ಬೇಕು? ಭಾರತ ಒಂದು ಸ್ವತಂತ್ರ, ಸಾರ್ವಭೌಮ ದೇಶವಾಗಿದ್ದರೆ ಇದನ್ನು ಮಾಡಬೇಕು. ಈ ವರ್ಷ ಡಿಸೆಂಬರ್ನಲ್ಲಿ ಡಬ್ಲ್ಯುಟಿಓದ 10ನೇ ಸಚಿವ ಸಮ್ಮೇಳನದಲ್ಲಿ ಕೃಷಿ, ಆಹಾರ ಭದ್ರತೆ, ಪಡಿತರ ವ್ಯವಸ್ಥೆ, ಶಿಕ್ಷಣ ಮತ್ತು ಆರೋಗ್ಯ ಹಾಗೂ ಇನ್ನಿತರ ಕ್ಷೇತ್ರಗಳಿಗೆ ಸಂಬಂಧಿಸಿದ ಯಾವ ಒಪ್ಪಂದಕ್ಕೂ ಸಹಿ ಹಾಕಬಾರದು. ರೇಷ್ಮೆ ಆಮದು ಒಳಗೊಂಡಂತೆ ಭಾರತದ ರೈತಾಪಿಯ ಮೇಲೆ ದುಷ್ಪರಿಣಾಮ ಬೀರುವ ಎಲ್ಲಾ ಅಂಶಗಳ ವಿಚಾರದಲ್ಲೂ ನೀತಿ ಬದಲಾಯಿಸಬೇಕು.
10. ಮೈಷುಗರ್ ಹಾಗೂ ಪಿಎಸ್ಎಸ್ಕೆ ಕಾಖರ್ಾನೆಗಳ ಸಂಪೂರ್ಣ ಪುನಶ್ಚೇತನಕ್ಕೆ ಸಮಗ್ರ ಪ್ಯಾಕೇಜ್ ಡಿಸೆಂಬರ್ ಒಳಗೆ ಜಾರಿ ಮಾಡಲು ಆರಂಭ.

-http://karavalikarnataka.com

Write A Comment