ಮುಂಬೈ

300 ಕೆಜಿ ತೂಕದ ಮುಂಬಯಿ ಮಹಿಳೆ ಇದೀಗ 183 ಕೆಜಿಗೆ ಇಳಿಸಿಕೊಂಡಿದ್ದಾರೆ ! ಇವರ ಭಾರದ ಜೀವನದ ಕಥೆ ಇಲ್ಲಿದೆ..ನೋಡಿ

Pinterest LinkedIn Tumblr

rajani

ಮುಂಬಯಿ: ಆಕೆ ಭರ್ತಿ 183 ಕೆಜಿ ತೂಕದ ಮಹಿಳೆ. ಬೆಡ್‌ರೂಂನ ಕನ್ನಡಿ ಮುಂದೆ ಡ್ರೆಸ್‌, ಮೇಕ್‌ ಅಪ್‌ ಮಾಡಿಕೊಂಡು ಲಿವಿಂಗ್‌ ರೂಂಗೆ ಬಂದು ಕುಳಿತುಕೊಳ್ಳುತ್ತಾರೆ. ಅಮಿತಾ ರಜನಿ ಎಂಬ ಈ ಮಹಿಳೆಗೆ ಅಷ್ಟೇ ಕೆಲಸ ಮಾಡಲು ಸಾಧ್ಯವಾಗುತ್ತಿದೆ. ಏಕೆಂದರೆ ಆನುವಂಶಿಕ ಸ್ಥಿತಿ ಅವರನ್ನು ಈ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಇದಕ್ಕಿಂತ ಮೊದಲು ಅವರು ಬೆಡ್‌ ಮೇಲೆ ಮಲಗುತ್ತ ಎಂಟು ವರ್ಷ ಕಳೆದಿದ್ದರು. ಆಗ ಅವರ ತೂಕ ಭರ್ತಿ 300 ಕೆಜಿ.

ಒಂದೊಮ್ಮೆ ಉದ್ಯಮಿಯಾಗಿದ್ದ ರಜನಿ (42) ತಮ್ಮ ತೂಕ ಕಳೆದುಕೊಂಡು ಮರು ಚೈತನ್ಯ ಪಡೆಯಲು ನಿರ್ಧರಿಸಿದರು. ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೂಲಕ ತಮ್ಮ ತೂಕ ಕಳೆದುಕೊಳ್ಳಲು ಸಿದ್ಧರಾದರು. ಏಪ್ರಿಲ್‌ನಲ್ಲಿ ಶಸ್ತ್ರಚಿಕಿತ್ಸೆಯೂ ನಡೆದುಹೋಗಿದೆ. ಇದೀಗ ಅವರ ತೂಕ 183 ಕೆಜಿಗೆ ಇಳಿದಿದೆ. ಅವರು ಇನ್ನೂ ತೂಕ ಕಳೆದುಕೊಳ್ಳುತ್ತಿದ್ದಾರೆ.

ಅಮಿತಾ ವಿಪರೀತ ಬೊಜ್ಜಿಗೆ ಅದ್ಭುತ ನಿದರ್ಶನ. ಆಕೆಯ ದೇಹದ ಸುತ್ತಳತೆ 100 ಇಂಚು ಹಾಗೂ ದೇಹದ ದ್ರವ್ಯರಾಶಿ ಸೂಚಿ(ಬಾಡಿ ಮಾಸ್‌ ಇಂಡೆಕ್ಸ್‌) 100 ದಾಟಿತ್ತು. ಇದು ಭಾರತೀಯ ಮಹಿಳೆಯರಲ್ಲೇ ಬಲು ಅಪರೂಪ. ಸಾಮಾನ್ಯ ವ್ಯಕ್ತಿ ದೇಹದ ದ್ರವ್ಯರಾಶಿ ಸೂಚಿ 18ರಿಂದ 23ರವರೆಗೆ ಇರುತ್ತದೆ. ದೇಹದ ಸುತ್ತಳತೆ ಗರಿಷ್ಠ 80 ಸೆಂಮೀ ಇರುತ್ತದೆ ಎಂದು ಬಾರಿಯಾಟ್ರಿಕ್ ಸರ್ಜನ್‌ ಡಾ.ಶಶಾಂಕ್‌ ಶಾ ಹೇಳುತ್ತಾರೆ.

28 ಮಂದಿ ಇರುವ ಅವಿಭಕ್ತ ಕುಟುಂಬದಲ್ಲಿ ಜನಿಸಿದ ಅಮಿತಾ ಜನಿಸುವಾಗ 3 ಕೆಜಿ ಸಾಮಾನ್ಯ ತೂಕ ಹೊಂದಿದ್ದರು. ಆರು ವರ್ಷಗಳ ನಂತರ ಅವರ ತೂಕ ಹೆಚ್ಚುತ್ತಲೇ ಹೋಯಿತು.10 ನೇ ತರಗತಿಯಲ್ಲಿದ್ದಾಗ 128 ಕೆಜಿ ತಲುಪಿದ್ದರು. ಈ ಸಮಸ್ಯೆಗೆ ಆನುವಂಶಿಕತೆ ಕಾರಣ ಎಂದು ದೂರತ್ತಾರೆ ಅಮಿತಾ ತಾಯಿ ಮಮತಾ. ಅಮಿತಾಳ ಅಜ್ಜಿ 250 ಕೆಜಿ ತೂಗುತ್ತಿದ್ದರಂತೆ. ಆಕೆಯ ತಂದೆ ಅವಿನಾಶ್ ನಾಲ್ಕು ದಶಕಗಳ ಹಿಂದೆ ತೂಕ ನಷ್ಟದ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಅವರು ಕಳೆದ ವರ್ಷ ನವೆಂಬರ್‌ನಲ್ಲಿ ನಿಧನರಾದಾಗ ಅವರ ತೂಕ 95 ಕೆಜಿ ಇತ್ತು.

ವಿಜ್ಞಾನ ಪದವೀಧರೆಯಾಗಿರುವ ಅಮಿತಾ ಸಣ್ಣ ಆಟಿಕೆಗಳ ಕಾರ್ಖಾನೆ ಹೊಂದಿದ್ದಾರೆ. ಅವರಿಗೆ ಅತಿ ತೂಕ ಉದ್ಯಮಕ್ಕೆ ಅಡ್ಡಿ ಆಗಿರಲಿಲ್ಲ. ಲೋಕಲ್‌ ಟ್ರೇನ್‌ನಲ್ಲಿ ಓಡಾಡುವಾಗ ಉಳಿದವರು ಕಿರಿಕಿರಿ, ಅಪಹಾಸ್ಯ ಮಾಡಿದರೂ ಅವರು ಸೊಪ್ಪು ಹಾಕುತ್ತಿರಲಿಲ್ಲ. ಆದರೆ 2007ರ ಬಳಿಕ ಅವರ ತೂಕ 200 ಕೆಜಿ ದಾಟಿತ್ತು. ಕಾಲು ಹಾಗೂ ಕೈಗಳಲ್ಲಿ ಬಾವು ಕಾಣಿಸಿತ್ತು. ಉಸಿರಾಟ ಸಮಸ್ಯೆ, ಎಡಭಾಗದ ಮೂತ್ರಜನಕಾಂಗದ ಸಮಸ್ಯೆ ಕಾಡಿತ್ತು. ನಾಲ್ಕೈದು ಜನರ ನೆರವಿಲ್ಲದೆ ಎದ್ದು ನಿಲ್ಲಲೂ ಆಗದ ಸ್ಥಿತಿ ನಿರ್ಮಾಣವಾಗಿತ್ತು. ಹಾಸಿಗೆಯಲ್ಲೇ ಬದುಕು ಮುಗಿಸುವ ಪರಿಸ್ಥಿತಿ ಎದುರಾಗಿತ್ತು.

ಡಾಕ್ಟರ್‌ ಶಾ ಅವರು ಆಕೆಯ ಫೋಟೋ ನೋಡಿದಾಗ ಆಕೆ ಕುಳಿತಿರುವ ಸೋಫಾ ಕೂಡ ಕಾಣಿಸುತ್ತಿರಲಿಲ್ಲವಂತೆ! ಪ್ಲಾಸ್ಟಿಕ್ ಸರ್ಜನ್ ಡಾ.ರವಿನ್ ಥಟ್ಟೆ ಪ್ರಕಾರ ಬೊಜ್ಜು ಕೇವಲ ಜೀವನಶೈಲಿಯಿಂದ ಬರುವಂಥದ್ದಲ್ಲ. ಆನುವಂಶಿಕ ಸಮಸ್ಯೆಯಿಂದಲೇ ಅಧಿಕ ಬೊಜ್ಜಿನ ಸಮಸ್ಯೆ ಬರುತ್ತದೆ.

Write A Comment