ಕನ್ನಡ ವಾರ್ತೆಗಳು

ಅಧಿಕ ಬಡ್ಡಿ: ಫೈನಾನ್ಸ್‌ಗಳಿಗೆ ಎಚ್ಚರಿಕೆ

Pinterest LinkedIn Tumblr

High_interset_pai

ಮಂಗಳೂರು ಜುಲೈ 11 : ಇತ್ತೀಚಿನ ದಿನಗಳಲ್ಲಿ ರೈತರು ಸಹಕಾರ ಸಂಘಗಳಿಂದ ಮತ್ತು ಖಾಸಗಿ ಲೇವಾದೇವಿ/ ಹಣಕಾಸು ಸಂಸ್ಥೆಗಳಿಂದ ಸಾಲ ಪಡಕೊಂಡು ಸಾಲ ಮರುಪಾವತಿಸಲು ಅಶಕ್ತರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿವೆ.

ಕರ್ನಾಟಕ ಲೇವಾದೇವಿ ಕಾಯ್ದೆ ಹಾಗೂ ಗಿರವಿ ಕಾಯ್ದೆಯಡಿ ಪರವಾನಗಿ ಪಡಕೊಂಡ ಲೇವಾದೇವಿಗಾರರು, ಹಣಕಾಸು ಸಂಸ್ಥೆಗಳು ಹಾಗೂ ಗಿರವಿದಾರರು ಕರ್ನಾಟಕ ಲೇವಾದೇವಿ ಕಾಯ್ದೆ 1961 ಕಲಂ 28  ರ ಪ್ರಕಾರ ಭದ್ರತೆ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇ.14  ಹಾಗೂ ಭದ್ರತೆ ಇಲ್ಲದ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇ. 16  ರ ಬಡ್ಡಿ ದರ ಮಾತ್ರ ವಿಧಿಸಬೇಕಾಗಿದೆ. ನಿಗದಿಪಡಿಸಿದ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿಯನ್ನು ಸಾಲಗಳ ಮೇಲೆ ವಿಧಿಸಿ ವಸೂಲಿ ಮಾಡಿದ್ದಲ್ಲಿ, ಕರ್ನಾಟಕ ಲೇವಾದೇವಿ ಕಾಯ್ದೆ 1961  ಕಲಂ 39  ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ಅತ್ಯಧಿಕ ಬಡ್ಡಿಯೊಂದಿಗೆ ಸಾಲ ವಸೂಲಿ ಮಾಡಿ ರೈತರನ್ನು ಸಂಕಷ್ಟಕ್ಕೆ ಒಳಪಡಿಸಿ ಅಹಿತಕರ ಘಟನೆ ಸಂಭವಿಸಿದಲ್ಲಿ ಸಂಬಂಧಪಟ್ಟ ಸಂಸ್ಥೆಗಳ ವಿರುದ್ದ ಕಾನೂನಿನ ರೀತ್ಯಾ ಕ್ರಮಕೈಗೊಳ್ಳಲಾಗುವುದೆಂದು ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೆ. ಸಲೀಂ ಎಚ್ಚರಿಕೆ ನೀಡಿದ್ದಾರೆ.

Write A Comment